ಮೂಡುಬಿದಿರೆ: ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವತಿಯಿಂದ ಗುರುವಂದನಾ ಸಮಾರಂಭವು ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಅಧ್ಯಾಪಕರುಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸಬೇಕು. ಸೇವೆ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಇದನ್ನು ಅರ್ಥ ಮಾಡಿಕೊಂಡರೆ ಸೇವಾ ಮನೋಭಾವ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದರು.
ಡಾ. ವಾಮನ್ ಶೆಣೈ ಅವರು ಅಭಿನಂದನಾ ಭಾಷಣ ಮಾಡಿ ಸಂಸ್ಕೃತಿ, ಜ್ಞಾನಕ್ಕೆ ಆಧ್ಯತೆ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಯಾವುದೇ ಸಂಪತ್ತಿಗಿಂತಲ್ಲೂ ಜ್ಞಾನ ಸಂಪತ್ತು ಅಮೂಲ್ಯವಾದುದು. ಮಕ್ಕಳಲ್ಲಿ ಶಿಕ್ಷಕರು ಬಿತ್ತುವ ಜ್ಞಾನದ ಸಂಪತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಲು ಸಾಧ್ಯ. ಅಧ್ಯಾಪನ ವೃತ್ತಿಗಿಂತ ಶ್ರೇಷ್ಠ ವೃತ್ತಿ ಇನ್ನೊಂದಿಲ್ಲ. ಹಾಗೂ ಅಧ್ಯಾಪಕರಿಗೆ ಸಿಗುವ ಗೌರವದ ಸ್ಥಾನ ಬೇರೆ ಯಾವ ವೃತ್ತಿಗೂ ಸಿಗಲಾರದು ಆದ್ದರಿಂದ ಅಧ್ಯಾಪಕರು ಅಭಿನಂದಾರ್ಹರು ಎಂದು ಹೇಳಿದರು.
ಶಿಕ್ಷಕರಿಗೆ ಸನ್ಮಾನ : ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಶಿಕ್ಷಕರಾದ ಫೆಲಿಕ್ಸ್ ಪಾೈಸ್, ಅಲೆಕ್ಸ್ ತಾವ್ರೋ, ಚಂದ್ರಕಾಂತ. ಜಿ. ನಾಯಕ, ವೈ.ಗೋಪಾಲ ಶೆಟ್ಟಿ, ಹರಿರಾವ್, ಶ್ಯಾಮಲಾದೇವಿ, ಎನ್. ಸರಸ್ವತಿ, ಸುಮಿತ್ರ, ಗಾಯತ್ರಿ. ಎಸ್. ಉಡುಪ, ವೇದಾವತಿ ಶೆಟ್ಟಿ, ಹಿಲ್ಡ ರೊಡ್ರಿಗಸ್, ಚಂದಯ, ರೀಟಾ ಮಿಲ್ಲೈಟ್ ಮಿನೇಜಸ್, ಮೋಂತಿ ರೋಸಿ ಪಿಂಟೋ, ಕೆ.ಆನಂದ, ಜಯ. ಬಿ., ಶೇಖರ ಹೆಗ್ಡೆ. ಎನ್, ಸುನಂದ. ಯು ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಜಿ. ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡ ಕೆ.ಪಿ ಜಗದೀಶ ಅಧಿಕಾರಿ, ಜಿ.ಪಂ ಸದಸ್ಯ ಕೆ. ಪಿ ಸುಚರಿತ ಶೆಟ್ಟಿ, ಬಂಟ್ವಾಳ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. ಗಣೇಶ್ ಕಾಮತ್, ಬಿಲ್ಲವರ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಎಸ್. ಶ್ರೀನಿವಾಸ ಶೆಟ್ಟಿ ಹೆಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಶೋಕ್ ರಾವ್, ಸುಜಯ, ಸದಾನಂದ ನಾರಾವಿ ಸನ್ಮಾನಿತರ ಪತ್ರ ವಾಚಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಮಡಿವಾಳ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕಿನ್ನಿಗೋಳಿ ವಿಜಯ ಕಲಾವಿದರಿಂದ `ಲೆಕ್ಕ ತತ್ತಿ ಬೊಕ್ಕ’ ತುಳು ನಗೆ ನಾಟಕ ನಡೆಯಿತು.
