ವಿಟ್ಲ: ಅಭಿಯಾನ ಮಹಿಳಾ ಸಂಸ್ಥೆ ವಿಟ್ಲ ಇದರ ಉದ್ಘಾಟನಾ ಸಮಾರಂಭವು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು. ವಿಟ್ಲ ಅಭಿಯಾನ ಸಂಸ್ಥೆಯ ಆಡಳಿತ ನಿರ್ದೇಶಕ ಜಾನ್ ಡಿ ಸೋಜಾ ಉದ್ಘಾಟಿಸಿ ಶುಭ ಹಾರೈಸಿದರು. ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

abhiyana

ಮುಖ್ಯ ಅತಿಥಿಗಳಾಗಿ ವಿಟ್ಲ ಸಿಂಡಿಕೇಟ್ ಬ್ಯಾಂಕಿನ ಶಾಖಾ ಪ್ರಬಂಧಕ ನಾರಾಯಣ ರೈ ಮತ್ತು ಪಟ್ಟಣ ಪಂಚಾಯತ್ ಸದಸ್ಯೆ ದಮಯಂತಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರುಗಳಾದ ಶಾಂತಾ ಎಸ್ ಎನ್ ಭಟ್, ನೆಬಿಸಾ, ಕಾರ್ಯಕರ್ತೆ ಸುಮತಿ ವೇದಿಕೆಯಲ್ಲಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಶೀಲಾ ಪ್ರಸ್ತಾವಿಸಿದರು. ಮೇಲ್ವಿಚಾರಕಿ ವಸಂತಿ ಸ್ವಾಗತಿಸಿದರು. ನಿರ್ದೇಶಕಿ ಶಾಹಿನಾ ಬಾನು ವಂದಿಸಿದರು. ನಿರ್ದೇಶಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *