ಬಂಟ್ವಾಳ: ಬಂಟರ ಸಂಘ ಬಂಟರ ನೂತನ ಹವಾ ನಿಯಂತ್ರಿತ “ಬಂಟವಾಳ ಬಂಟರ ಭವನ”ದ ಉದ್ಘಾಟನಾ ಸಮಾರಂಭವು ತುಂಬೆಯ ವಳವೂರಿನಲ್ಲಿ ಅ.30ರಂದು ರವಿವಾರ ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ ಅತಿಥಿ ಗಣ್ಯರನೇಕರ ಸಮ್ಮುಖದಲ್ಲಿ ಲೋಕಾರ್ಪಣೆಯಾಗಲಿದೆ. ಈ ಬಂಟರ ಭವನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿರುವರು.  ಅ.29 ಶನಿವಾರದಂದು ಮೊದಲ್ಗೊಂಡು ಅ.31ರ ತನಕ ವಿವಿಧ ಸಭಾ ಕಾರ್ಯಕ್ರಮಗಳು ನಡೆಯಲಿದೆ.

bantara

6btl-bantara-bhavana-650x338

 ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿರುವರು. ಗೌರವಾನ್ವಿತ ಅಥಿತಿಗಳಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ರಾಜ್ಯಸಭಾ ಸದಸ್ಯ ಸಚಿನ್ ತೆಂಡುಲ್ಕರ್ ಹಾಗೂ ಸಮಾರಂಭದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅದ್ಯಕ್ಷ ಅಜಿತ್ ಕುಮಾರ್ ರೈ ಉದ್ಘಾಟಿಸಲಿರುವರು. ಆಶೀರ್ವಚನವನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ  ನೀಡಲಿದ್ದಾರೆ.

bantara-bhavana

ಮಧ್ಯಾಹ್ನ ಘಂಟೆ 1ರಿಂದ 2ರವರೆಗೆ ಸುರತ್ಕಲ್ ಬಂಟರ ಸಂಘದ ಸದಸ್ಯರಿಂದ “ಬಂಟ ಕಲಾ ವೈಭವ”, ಹಾಗೂ ಮಧ್ಯಾಹ್ನ 2ರಿಂದ 4.30ರವರೆಗೆ “ಬಂಟ ಮಹಿಳಾ ಸಂಗಮ” ಕಾರ್ಯಕ್ರಮ ಜರುಗಲಿದ್ದು, ಬಂಟರ ಸಂಘ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅವರ ಅಧ್ಯಕ್ಷತೆಯಲ್ಲಿ, ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಶಕುಂತಳಾ ಟಿ.ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಂಜೆ ಘಂಟೆ 4ರಿಂದ 7ರವರೆಗೆ ‘ಗುರುಕಿರಣ್ ನೈಟ್’ ಮನೋರಂಜನಾ ಕಾರ್ಯಕ್ರಮಗಳು ಜರಗಲಿದೆ.

b-2

“ಬಂಟವಾಳದ ಬಂಟರ ಭವನ” ಉದ್ಘಾಟನಾ ಪ್ರಯುಕ್ತ ಅ.31ರಂದು ಜಾತಿ-ಮತೀಯ ಸಾಮರಸ್ಯ ಸಂಗಮ ಹಾಗೂ ಬಂಟವಾಳದ ವಿವಿಧ ಕ್ಷೇತ್ರದ ಬಹು ಸಮಾಜದ ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ,  ಸಚಿವರಾದ ನಳಿನ್ ಕುಮಾರ್ ಕಟೀಲ್ ಆಗಮಿಸಲಿದ್ದು, ಬಂಟರ ಸಂಘ ಬಂಟ್ವಾಳದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅವರ ಅಧ್ಯಕ್ಷತೆಯಲ್ಲಿ, ಮಂಗಳೂರು ಧರ್ಮಪ್ರಾಂತ್ಯ ಬಿಷಪ್, ಡಾ| ಎಲೋಶಿಯಸ್ ಪಾವ್ಲ್ ಡಿ`ಸೋಜಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

b-3

ಮಧ್ಯಾಹ್ನ ಘಂಟೆ 12ರಿಂದ 1ರವರೆಗೆ ರಾಕೇಶ್ ಶೆಟ್ಟಿ ಮತ್ತು ಬಳಗದವರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ 1.30 ರಿಂದ 3.30ರವರೆಗೆ ಬಂಟವಾಳದ ವಿವಿಧ ಕ್ಷೇತ್ರದ ಬಂಟ ಸಮಾಜದ ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ಸಚಿವರಾದ ನಳಿನ್ ಕುಮಾರ್ ಕಟೀಲ್, ಪ್ರಗತಿಪರ ಕೃಷಿಕರು ಉಳಿಪಾಡಿಗುತ್ತು, ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ, ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅವರ ಅಧ್ಯಕ್ಷತೆಯಲ್ಲಿ, ವಿಧಾನ ಪರಿಷತ್ ಸದಸ್ಯರು ಪ್ರತಾಪಚಂದ್ರ ಶೆಟ್ಟಿ ಕುಂದಾಪುರ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಸಂಜೆ ಘಂಟೆ 3.30ರಿಂದ 7.30ರವರೆಗೆ ಬಂಟವಾಳ ಬಂಟರ ಸಂಘದ ವಿವಿಧ ಸಮಿತಿಗಳ ಸದಸ್ಯರಿಂದ “ಬಂಟೋತ್ಸವ“, ರಾತ್ರಿ 7.30ರಿಂದ 8.ರವರೆಗೆ ದೀಪಾವಳಿ ಆಚರಣೆ “ದಿಪೋತ್ಸವ“ನಡೆಯಲಿದೆ.

ಅ.29ರಂದು ಸಂಜೆ 3ಕ್ಕೆ ಶನಿವಾರ ಹೊರೆದಿಬ್ಬಣ ಮತ್ತು ಶೋಭಾಯಾತ್ರೆ ಆರಂಭವಾಗುವುದು. ಈ ಶೋಭಾಯಾತ್ರೆಯ ಉದ್ಘಾಟಕರಾಗಿ, ಮಂಗಳೂರಿನ ಸಂಸದರು ನಳಿನ್ ಕುಮಾರ್ ಕಟೀಲ್, ಹಾಗೂ ಹೊರೆದಿಬ್ಬಣದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ, ಬೆಳ್ಳಿಪಾಡಿ ಉದ್ಘಾಟಿಸಲಿರುವರು.

ಕನಸಿನ ಭವನ:

ಕಾಸರಗೋಡು ಮತ್ತು ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗರಿಷ್ಟ ಸ್ಥಳಾವಕಾಶ ಮತ್ತು ಉತ್ಕೃಷ್ಟ ಗುಣಮಟ್ಟದಲ್ಲಿ ರೂ 10ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತ ಮತ್ತು ಹವಾನಿಯಂತ್ರಿತ ‘ಬಂಟವಾಳದ ಬಂಟರ ಭವನ’ ಮುಂಬರುವ ಒಂದು ವರ್ಷದೊಳಗೆ ಸಿದ್ಧಗೊಳ್ಳಲಿದೆ. ಒಟ್ಟು 1,200 ಆಸನ ಸಾಮಥ್ರ್ಯ, 1ಸಾವಿರ ಆಸನ ಸಾಮಥ್ರ್ಯ, 500 ಆಸನ ಸಾಮಥ್ರ್ಯ, 300 ಆಸನ ಸಾಮಥ್ರ್ಯ ಹೀಗೆ ಪ್ರತ್ಯೇಕ ಬಾಲ್ಕನಿ, ಪಾರ್ಕಿಂಗ್ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ. ಈ ಕನಸಿನ ಭವನ ನಿರ್ಮಾಣಕ್ಕೆ ಸಂಘದ ಮಾಜಿ ಅಧ್ಯಕ್ಷ ದಿ.ಗಂಗಾಧರ ರೈ ಬೋಳಂತೂರು ಇವರು 65 ಸೆಂಟ್ಸ್ ಜಮೀನು ಉಚಿತವಾಗಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 5,200 ಬಂಟರ ಮನೆಗಳಿದ್ದು, ಸುಮಾರು 25ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಒಟ್ಟು 84 ಗ್ರಾಮಗಳಲ್ಲಿ 15ಕ್ಕೂ ಮಿಕ್ಕಿ ವಲಯ ಸಮಿತಿ ರಚಿಸಲಾಗಿದೆ.

ವಿಶೇಷ ಆಹ್ವಾನಿತರು: ಸುನೀಲ್ ಶೆಟ್ಟಿ, ಪ್ರಕಾಶ್ ರೈ, ನಿರೂಪ್ ಭಂಡಾರಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ಸುದೀಪ್, ದರ್ಶನ್, ಯಶ್, ವಿಜಯರಾಘವೇಂದ್ರ( ಚಲನಚಿತ್ರ ನಟರು).

ಗೌರವಾನ್ವಿತ ಅತಿಥಿಗಳು: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಆಶಾಜ್ಯೋತಿ ಎ.ರೈ, ಬೆಂಗಳೂರು ಸಾಹಿತಿ ಮತ್ತು ಸಂಶೋದಕಿ ಡಾ| ಇಂದಿರಾ ಹೆಗ್ಗಡೆ, ಮುಂಬೈ ಬಂಟರ ಸಂಘ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಮಾಜಿ ಉಪ ಕುಲಪತಿ ಡಾ| ಹೀರಾ ಅಡ್ಯಾಂತಾಯ,  ಮುಂಬೈ ಚಲನಚಿತ್ರ ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಕು. ಪೂಜಾ ಹೆಗ್ಡೆ, ಮುಂಬಯಿ ಕ್ಯಾಪ್ಟನ್ ಇಂಡಿಗೋ ಏರ್ ಲೈನ್ಸ್ ಕ್ಯಾ. ಕೀರ್ತಿ ಜೆ.ಶೆಟ್ಟಿ ಭಾಗವಹಿಸಲಿದ್ದಾರೆ.

By suddi9

One thought on “ಕನಸಿನ “ಬಂಟವಾಳ ಬಂಟರ ಭವನ” ಅ.29,30,31ರಂದು ಲೋಕಾರ್ಪಣೆ”
  1. ಕಾಸರಗೋಡು ಮತ್ತು ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗರಿಷ್ಟ ಸ್ಥಳಾವಕಾಶ ಮತ್ತು ಉತ್ಕೃಷ್ಟ ಗುಣಮಟ್ಟದಲ್ಲಿ ರೂ 10ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತ ಮತ್ತು ಹವಾನಿಯಂತ್ರಿತ ‘ಬಂಟವಾಳದ ಬಂಟರ ಭವನ’ ಮುಂಬರುವ ಒಂದು ವರ್ಷದೊಳಗೆ ಸಿದ್ಧಗೊಳ್ಳಲಿದೆ. ಒಟ್ಟು 1,200 ಆಸನ ಸಾಮಥ್ರ್ಯ, 1ಸಾವಿರ ಆಸನ ಸಾಮಥ್ರ್ಯ, 500 ಆಸನ ಸಾಮಥ್ರ್ಯ, 300 ಆಸನ ಸಾಮಥ್ರ್ಯ ಹೀಗೆ ಪ್ರತ್ಯೇಕ ಬಾಲ್ಕನಿ, ಪಾರ್ಕಿಂಗ್ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ. ಈ ಕನಸಿನ ಭವನ ನಿರ್ಮಾಣಕ್ಕೆ ಸಂಘದ ಮಾಜಿ ಅಧ್ಯಕ್ಷ ದಿ.ಗಂಗಾಧರ ರೈ ಬೋಳಂತೂರು ಇವರು 65 ಸೆಂಟ್ಸ್ ಜಮೀನು ಉಚಿತವಾಗಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 5,200 ಬಂಟರ ಮನೆಗಳಿದ್ದು, ಸುಮಾರು 25ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಒಟ್ಟು 84 ಗ್ರಾಮಗಳಲ್ಲಿ 15ಕ್ಕೂ ಮಿಕ್ಕಿ ವಲಯ ಸಮಿತಿ ರಚಿಸಲಾಗಿದೆ.

    Old msg

Leave a Reply

Your email address will not be published. Required fields are marked *