ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ತಿಮ್ಮೊಟ್ಟು ಗುಡ್ಡವೊಂದರಲ್ಲಿ ಸೋಮವಾರ ಮಧ್ಯಾಹ್ನ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುಂಜಾಲಕಟ್ಟೆ ಠಾಣೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ ನಡೆದಿದೆ.

crime

ಆರೋಪಿಗಳನ್ನು ಶಶಿಧರ ಪೂಜಾರಿ ಕೊಡಂಬೆಟ್ಟು, ದಿನೇಶ ಪುಲ್ಕೇರಿ, ಕಿರಣ್ ನರಿಕೊಂಬು ಮತ್ತು ಲೋಕನಾಥ ಕೋಡಿನಾಳ ಎಂದು ಗುರುತಿಸಲಾಗಿದ್ದು, ಇವರಿಂದ ಮೂರು ಕೋಳಿ ಮತ್ತು ರೂ 1,100 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *