ಮಂಗಳೂರು: ರಕ್ತದಾನದ ಮೂಲಕ ಜೀವದಾನದ ಕೆಲಸವನ್ನು ಮಾಡಬೇಕು ಎಂದು ಬಜಪೆ ವಿಮಾನ ನಿಲ್ದಾಣ್ದ ನಿರ್ದೇಶಕ ಜೆ.ಟಿ ರಾಧಕೃಷ್ಣ ಹೇಳಿದರು. ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ ಸ್ವಚ್ಚ ಭಾರತ್ ಪಾಕ್ಷಿಕ ಆಚರಣೆ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘ ಸಂಸ್ಥೆಗಳು ರಕ್ತದಾನದ ಮೂಲಕ ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ನಮ್ಮ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಕ ಇಂತಹ ಕೆಲಸಗಳನ್ನು ನಿರಂತರ ಮಾಡುತ್ತೇವೆ ಎಂದರು ಈ ಸಂದರ್ಭ ಯೆನಪೋಯ ಅಸ್ಪತ್ರೆಯ ಡಾ,ಶಶಿಧರ್, ಡಾ. ಅಲಿ ಅಬ್ದುಲ್ ಲತೀಪ್, ವಿಮಾನ ನಿಲ್ದಾಣ ಪ್ರಾಧಿಕಾರದ ಅದಿತ್ಯ ಬಾರಧ್ವಜ್, ಪ್ರಸಾದ್ ಮತ್ತಿತರರು ಇದ್ದರು.
