ಮಂಗಳೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ಫಂಡ್ ಇಂಟರ್ ನ್ಯಾಷನಲ್ ಯು. ಎಸ್. ಎ.ವಾಮಂಜೂರು ಮತ್ತು ಸಮಾಜಕಾರ್ಯ ಕಾಲೇಜುಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ದಿನಾಂಕ 15ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಭಾರತೀಯರೆಡ್ಕ್ರಾಸ್ ಸಂಸ್ಥೆ ದಕ್ಷಿಣಕನ್ನಡಜಿಲ್ಲೆಯಚೇರ್ಮಾನ್ ಸಿ. ಎ. ಶಾಂತರಾಮ್ ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ ರೆಡ್ಕ್ರಾಸ್ ಸಂಸ್ಥೆಯು ಇಂತಹ ಶಿಬಿರದ ಮೂಲಕ ಒಟ್ಟುಗೂಡಿಸಿದ ರಕ್ತವನ್ನು ಅವಶ್ಯಕತೆ ಇರುವಂತಹ ಬಡ ವ್ಯಕ್ತಿಗಳಿಗೆ ಉಚಿತವಾಗಿ ನೀಡುತ್ತಾ ಬಂದಿರುತ್ತದೆ. ಇಂತಹ ಶಿಬಿರಗಳನ್ನು ಆಯೋಜನೆ ಮಾಡಿ ರಕ್ತದಾನ ಮಾಡಿಸಿ ಇನ್ನೊಬ್ಬರ ಜೀವವನ್ನು ಉಳಿಸುವಂತಹ ಮಹತ್ಕಾರ್ಯದಲ್ಲಿ ತೊಡಗಿದಂತಹ ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ಫಂಡ್ಇಂಟರ್ ನ್ಯಾಷನಲ್ ಯು. ಎಸ್. ಎ.ವಾಮಂಜೂರು ಮತ್ತು ಸಮಾಜಕಾರ್ಯಕಾಲೇಜು ವಿದ್ಯಾರ್ಥಿಗಳ ಕೆಲಸ ಶ್ಲಾಘನೀಯ ಮತ್ತುಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಮೋಹನ್ಎಸ್. ಸಿಂಘೆ ಮಾತನಾಡುತ್ತಾ ರಕ್ತದಾನ ಜಾಗೃತಿಯನ್ನು ಮೂಡಿಸುವ ಮೂಲಕ ಕೆಲವರಲ್ಲಿ ಇರುವಂತಹ ಅಂಜಿಕೆ, ಭಯವನ್ನು ಹೋಗಲಾಡಿಸಿ ಅವರನ್ನು ಸಹ ರಕ್ತದಾನ ಮಾಡುವ ಹಾಗೆ ಪ್ರೇರೇಪಣೆ ಮಾಡಬೇಕು. ರಕ್ತದಾನ ಮಾಡುವ ಮೂಲಕ ದಾನ ನೀಡಿದಂತಹ ವ್ಯಕ್ತಿ ಆರೋಗ್ಯದಲ್ಲಿ ಇರುವುದು ಮಾತ್ರವಲ್ಲದೆ ಇನ್ನೊಂದು ಜೀವವನ್ನು ಉಳಿಸಿದಂತಹ ಕೀರ್ತಿದಾನಿಗೆ ಸಿಗುತ್ತದೆಎಂದು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಫಂಡ್ಇಂಟರ್ ನ್ಯಾಷನಲ್ಯು.ಎಸ್. ಎ. ಇದರ ಕಾರ್ಯದರ್ಶಿಗಳಾದ ಪ್ರೋ.ಎ. ರಾಜೇಂದ್ರ ಶೆಟ್ಟಿ ವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ವೇದಿಕೆಯಲ್ಲಿ ಸ್ಕೂಲ್ಆಪ್ ಸೋಶಿಯಲ್ ವರ್ಕ್ರೋಶನಿ ನಿಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೋ. ಮೀನಾ ಮೊಂತೆರೋ, ಎಮ್. ವಿ. ಶೆಟ್ಟಿ ಕಾಲೇಜು ಸಮಾಜಕಾರ್ಯ ವಿಭಾಗ ಪ್ರಾಧ್ಯಪಕರಾದ ಪ್ರೋ.ಅಂಕಿತ್ ಎಸ್. ಕುಮಾರ್, ಎಸ್. ಡಿ. ಎಂ ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿಯಾದ ಶ್ರೀ ಗಣೇಶ್ ಭಟ್ ವಿ.,ಕಾರ್ಯಕ್ರಮದ ಆಯೋಜಕರಾದ ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಫಂಡ್ಇಂಟರ್ ನ್ಯಾಷನಲ್ಯು.ಎಸ್. ಎ. ನ ಯೋಜನಾಧಿಕಾರಿಯಾದ ಶ್ರೀ ಪುನೀತ್ ಡಿ. ಶೆಟ್ಟಿ ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ ಒಟ್ಟು 43 ದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು.
ಸ್ಕೂಲ್ಆಪ್ ಸೋಶಿಯಲ್ ವರ್ಕ್ರೋಶನಿ ನಿಲಯದ ಸಮಾಜಕಾರ್ಯ ವಿದ್ಯಾರ್ಥಿ ಜೇಸನ್ ಫ್ರಾನ್ಸಿಸ್ ಕಾರ್ಯಕ್ರಮವನ್ನು ನಿರೂಪಿಸಿ ಶೌವಾದ್ಗೂನಡ್ಕ ಸ್ವಾಗತಿಸಿದರು. ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಫಂಡ್ ಇಂಟರ್ ನ್ಯಾಷನಲ್ ಯು.ಎಸ್. ಎ. ಸಿಬ್ಬಂದಿ ಹರೀಶ್ ಕುಲಶೇಖರ ವಂದಿಸಿದರು. ಸ್ಕೂಲ್ ಆಪ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಸಂತ ಅಲೋಶಿಯಸ್ ಕಾಲೇಜು ಸಮಾಜಕಾರ್ಯ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಕಾರ್ಯ ವಿಭಾಗ, ಎಮ್. ವಿ. ಶೆಟ್ಟಿಕಾಲೇಜು ಸಮಾಜಕಾರ್ಯ ವಿಭಾಗ, ಶ್ರೀನಿವಾಸ್ಕಾಲೇಜು ಸಮಾಜಕಾರ್ಯ ಇದರ ವಿದ್ಯಾರ್ಥಿಗಳು ಸಹಕರಿಸಿದರು.