ಮಂಗಳೂರು: ಮಂಗಳೂರು ಶ್ರೀ ಆರ್ಕೇಡ್ ಬೆಂದೂರ್‍ವೆಲ್’ನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 13ನೇ ಮುಡಿಪು ಶಾಖೆಯ ಉದ್ಘಾಟನಾ ಸಮಾರಂಭವು ಅ.20ರಂದು ಗುರುವಾರ ಬೆಳಗ್ಗೆ 10ಗಂಟೆಗೆ ಮುಡಿಪು ಎ.ಬಿ. ಕಾಂಪ್ಲೆಕ್ಸ್ ಪಂಚಾಯತ್ ಆಫೀಸ್‍ನ ಎದುರು ಶುಭಾರಂಭಗೊಳ್ಳಲಿದೆ. ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಂತ ಜೋಸೆಫರ ವಂದನೀಯ ಗುರು ಥಾ| ಬೆಂಜಮಿನ್ ಪಿಂಟೋ ಆಶೀರ್ವಚನ ನೀಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಆ.ವಿ.ಸ.ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕುರ್ನಾಡ್ ಗ್ರಾ.ಪಂ. ಅಧ್ಯಕ್ಷೆ ಶೈಲಜ ಮಿತ್ತಕೋಡಿ , ದ.ಕ.ಜಿ.ಪಂ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ದ.ಕ.ಜಿ.ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಕೊಲ್ನಾಡು ಪಂ.ಸದಸ್ಯ ಹಾಗೂ ಕಟ್ಟಡ ಮಾಲಕ ಎ.ಬಿ.ಅಬ್ದುಲ್ಲ, ಬೆಂಗಳೂರು ಕ.ರಾ.ಸ.ಪ.ಸ.ಮ.ನಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಗುರುಪ್ರಸಾದ್ , ಬ್ರಹ್ಮಶ್ರೀ ನಾರಾಯಾಣ ಗುರು ಸೇ.ಸಂ.ಅಧ್ಯಕ್ಷ ಸುಭಾಷ್ ಧರ್ಮನಗರ ಆಗಮಿಸಲಿರುವರು.
ಈ ಕಾರ್ಯಕ್ರಮದಲ್ಲಿ ವಿವಿದೊದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ವೇತಾ, ಹಾಗೂ ನಿರ್ದೇಶಕರುಗಳಾದ ದಾಮೋದರ ಸಿ.ಕುಂದರ್, ವಾಮನ್ ಕೆ., ಸದಾನಂದ ಡಿ.ಎಸ್., ರಾಮ್ ದಾಸ್ ಮರೋಳಿ, ಜಿ.ಪರಮೆಶ್ವರ ಪೂಜಾರಿ, ಆನಂದ ಎಸ್ ಕೊಂಡಾಣ, ಸುರೇಶ್ ವಿ.ಪೂಜಾರಿ, ಪ್ರಶಾಂತ್ ಕುಮಾರ್ ಸನಿಲ್, ಸುರೇಶ್ ಕೆ.ಪಿ., ಜ್ಯೋತಿ ಚಂದ್ರ ಹಾಗೂ ಸಿಬ್ಬಂದಿ ವರ್ಗ ಮತ್ತು ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿರುವರು.
