ಮೂಡುಬಿದಿರೆ : ಇಲ್ಲಿನ ಪುರಸಭೆಯ ವತಿಯಿಂದ 2015-16ನೇ ಸಾಲಿನ ಎಸ್.ಎಫ್.ಸಿ ಪ್ರೋತ್ಸಾಹ ನಿಧಿಯಲ್ಲಿ ವಾರ್ಡ್ ಸಂಖ್ಯೆ 12ರ ಗೌರಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ 3ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಇಂಟರ್‍ಲಾಕ್ ಕಾಮಗಾರಿಯನ್ನು ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು.

interlock

ನಂತರ ಮಾತನಾಡಿದ ಜೈನ್ ಅವರು ಪುರಸಭೆಯು ಉತ್ತಮ ಕೆಲಸವನ್ನು ಮಾಡುವ ಮೂಲಕ ಮೂಡುಬಿದಿರೆ ಜನರಿಗೆ ಹಾಗೂ ವಾಹನ ಸವಾರರಿಗೆ ಈ ರಸ್ತೆಯಿಂದ ಉಪಯೋಗವಾಗಲಿದೆ. ಈ ರಸ್ತೆಯನ್ನು ಸ್ವಚ್ಛತೆಯಿಂದ ಕಾಪಾಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ವಾರ್ಡ್ ಸದಸ್ಯ ಲಕ್ಷ್ಮಣ್ ಪೂಜಾರಿ, ಸದಸ್ಯರಾದ ಕೊರಗಪ್ಪ, ಬಾಹುಬಲಿ ಪ್ರಸಾದ್, ರತ್ನಾಕರ ದೇವಾಡಿಗ,ವನಿತಾ, ಸುಪ್ರಿಯಾ ಡಿ.ಶೆಟ್ಟಿ, ವಿನೋದ್ ಸೆರಾವೋ, ರಾಜೇಶ್ ಕೋಟೆಗಾರ್, ವಾರ್ಡ್ ಸದಸ್ಯ ಮನೋಜ್ ಶೆಟ್ಟಿ, ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ನಾಮ ನಿರ್ದೇಶಿತ ಸದಸ್ಯರಾದ ಇಕ್ಬಾಲ್ ಕರೀಂ, ಆಲ್ವೀನ್ ಮಿನೇಜಸ್, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್, ಹಿರಿಯ ಆರೋಗ್ಯ ನಿರೀಕ್ಷಕಿ ಇಂದು, ಪರಿಸರ ಅಭಿಯಂತರೆ ಶಿಲ್ಪಾ ಮತ್ತಿತರರು ಭಾಗವಹಿಸಿದ್ದರು. ಪುರಸಭಾ ಕಂದಾಯ ನಿರೀಕ್ಷಕ ಧನಂಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *