ಬಜಪೆ: ಯಕ್ಷಗಾನ ಪ್ರಿಯೆ ಕಟೀಲು ದುರ್ಗೆಯ ಸನ್ನಿಯ ಸರಸ್ವತೀ ಸದನದಲ್ಲಿ ಸಂಪನ್ನಗೊಂಡ ಮೂರು ದಿನಗಳ ಮಕ್ಕಳ ಯಕ್ಷಗಾನ ಕಲಾಪರ್ವ ನಿಜಕ್ಕೂ ಅವಿಸ್ಮರಣೀಯ ರಂಗಸ್ಥಳದಲ್ಲಿ ಮಕ್ಕಳಾಟದ ಸೊಬಗಿಗೆ ಯಕ್ಷಲೋಕದ ದಿಗ್ಗಜರೇ ‘ಭಳಿರೇ ಶಹಬ್ಬಾಸ್’ ಎಂದು ಯಕ್ಷಗಾನಕ್ಕೆ ಅವನತಿಯ ಭೀತಿ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳುವಂತಾಯಿತು.

???????????????????????????????

ಅಪೂರ್ವ ಪೂರ್ವರಂಗ ಪ್ರಸ್ತುತಿ:
ಮೂರು ದಿನಗಳ ಕಲಾಪರ್ವದಲ್ಲೂ ದಿನದ ಆರಂಭಕ್ಕೆ ದುರ್ಗಾಮಕ್ಕಳ ಮೇಳದ ಮಕ್ಕಳ ಚೌಕಿ ಪೂಜೆ, ರಂಗಸ್ಥಳದಲ್ಲಿ ದೇವರದಲ್ಲಿ ದೇವರ ಪೂಜೆ ಬಳಿಕ ರಂಗಸ್ಥಳದಲ್ಲಿ ಪ್ರಸ್ತುತಗೊಳ್ಳುತ್ತಿರುವ ಹಾಗೂ ಪ್ರಸ್ತುತಗೊಳ್ಳದ ಪೂರ್ವರಂಗ ಪ್ರಕಾರಗಳ ಪ್ರಸ್ತುತಿ ಅಪೂರ್ವವಾಗಿತ್ತು.

???????????????????????????????

ಕೋಡಂಗಿ ಬಾಲಗೋಪಾಲ, ಚಂದಭಾಮಾ, ಚಪ್ಪರ ಮಂಚ, ಕೋಲಾಟ, ಅರೆಪಾವಿನಾಟ, ರಂಗ-ರಂಗಿ, ಮುಖ್ಯ ಸ್ತ್ರೀ ವೇಷ, ಹೊಗಳಿಕೆ, ಪ್ರಸಂಗ ಪೀಠಿಕೆ, ಪೀಠಿಕಾ ಸ್ತ್ರೀ ವೇಷ, ಷಣ್ಮುಖ ಸುಬ್ರಾಯ, ಒಡ್ಡೋಲಗ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಆಸಕ್ತರನ್ನು ಸೆಳೆಯುತ್ತಿರುವ ‘ಯಕ್ಷಗಾನ-ಗಾನ ವೈಭವ’ದಲ್ಲಿ ಪಂಚ ಭಾಗವತರ ಗಾಯನ, ಭಾಗವತಿಕೆ ಜುಗುಲ್‍ಬಂದಿ ಗಾಯನ ಸೊಬಗು ಹೆಚ್ಚಿಸಿದ್ದು ಚೆಂಡೆ ಜುಗುಲ್ ಬಿಂದಿ. ಹಿಮ್ಮೇಳ-ಮುಮ್ಮೇಳ ಎರಡೂ ವಿಭಾಗಗಳಲ್ಲೂ ದುರ್ಗಾ ಮಕ್ಕಳ ಮೇಳದ ಬಾಲ ಕಲಾವಿದರ ಪ್ರತಿಭೆ ಪ್ರಶಂಸನೀಯ.

???????????????????????????????

ಮಕ್ಕಳ ಈ ಸಾಧನೆಗೆ ಮೇಳದ ಅಧ್ಯಕ್ಷ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಕಾರ್ಯದರ್ಶಿ ವಾಸುದೇವ ಶೆಣೈ ಅವರುಗಳ ಮಾರ್ಗದರ್ಶನ ಮೇಳದ ನಾಟ್ಯ ರಾಜೇಶ್ ಐ. ಅವರ ಶ್ರಮ, ಸರ್ಪಂಗಳ ಈಶ್ವರ ಭಟ್, ಲೀಲಾವತಿ ಬೈಪಡಿತ್ತಾಯ, ಹರಿನಾರಾಯಣ ಬೈಪಡಿತ್ತಾಯ ಅವರುಗಳ ನಿರ್ದೇಶನ ಸಹಕಾರ ಮಕ್ಕಳ ಪೋಷಕರ ಆಸ್ತಕಿ ಹಾಗೂ ಪ್ರೋತ್ಸಾಹವೇ ಕಾರಣ ‘ಶ್ರೀ ರಾಮ ದರ್ಶನ’ ಸಮಾರೂಪ ಸಭಾಪರ್ವದ ಬಳಿಕ ಜರುಗಿದ ಯಕ್ಷಗಾನ ಪ್ರದರ್ಶನದಲ್ಲಿ ದುರ್ಗಾ ಮಕ್ಕಳ ಮೇಳದ 71 ಮಕ್ಕಳು ಬಣ್ಣ ಹಚ್ಚಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ್ದಾರೆ.

129 ಬಾಲಕಿಯರು, 116 ಬಾಲಕರು:
ಮೂರು ದಿನಗಳ ಯಕ್ಷಗಾನ ಕಲಾಪರ್ವದಲ್ಲಿ ರಂಗಸ್ಥಳ ಪ್ರವೇಶಿಸಿದ ಮಕ್ಕಳ ಸಂಖ್ಯೆ 245. ಅವರಲ್ಲಿ 129 ಮಂದಿ ಬಾಲಕಿಯರು ಹಾಗೂ 116 ಬಾಲಕರು. ಎಲ್ಲಾ ತಂಡಗಳ ಹಿಮ್ಮೇಳಗಳನ್ನು ಪರಿಗಣಿಸಿದರೆ ಭಾಗವತರು, ಚೆಂಡೆ, ಮದ್ದಳೆ, ಚಕ್ರತಾಳಗಳಲ್ಲಿ 51 ಮಂದಿ ಹಿರಿಯರು ಪಾಲ್ಗೊಂಡಿದ್ದು ಮಹಿಳಾ ಭಾಗವತರಾಗಿ ದುರ್ಗಾಪರಮೇಶ್ವರೀ ಕುಕ್ಕಿಲ ಅವರು ಪಾಲ್ಗೊಂಡಿದ್ದು ಬಿಟ್ಟರೆ ಉಳದವರೆಲ್ಲಾ ಪುರುಷರೇ ಮೂರು ತಂಡಗಳಿಗೆ ಮಹಿಳಾ ನಿರ್ದೇಶಕರಿದ್ದರು.

ವೇಷಧಾರಿ ಮಕ್ಕಳ ಪೈಕಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಪಂಚಮಿ ಮಾರೂರು ಮೂಡುಬಿದಿರೆಯ ಯಕ್ಷಗಾನ ತಂಡದಲ್ಲಿ ಪಾಲ್ಗೊಂಡು ‘ಸುದರ್ಶನ ವಿಜಯ’ ಪ್ರಸಂಗದಲ್ಲಿ ‘ಸುದರ್ಶನ’ ಪಾತ್ರಧಾರಿಯಾಗಿ ಕಾಣಿಸಿಕೊಂಡು ಗಮನ ಸೆಳೆದರು.

By suddi9

Leave a Reply

Your email address will not be published. Required fields are marked *