ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ಜೈನ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ದಿ. ಸೋಮಪ್ಪ ರೈ ಅವರ ಧರ್ಮಪತ್ನಿ ರತ್ನಾ ಎಸ್. ರೈ(90) ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ರತ್ನಾ ಎಸ್. ರೈ ಮೂಡುಬಿದಿರೆ ಪುರಸಭಾ ಮಾಜಿ ಸದಸ್ಯ ಹಾಗೂ ಎಂ.ಸಿ.ಎಸ್.ಬ್ಯಾಂಕಿನ ಆಡಳಿತ ಮಂಡಳಿಯ ಮಾಜಿ ಸದಸ್ಯರಾಗಿದ್ದರು. ಅವರು ಓರ್ವ ಪುತ್ರಿ, ಇಬ್ಬರು ಪುತ್ರರರನ್ನು ಅಗಲಿದ್ದಾರೆ.
