ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಪಶ್ಚಿಮ ವಲಯ ಸಂಸ್ಥೆಯ ಪದಾಧಿಕಾರಿಗಳು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ (ಬೋರಿವಿಲಿ) ಸಂಸದ ಗೋಪಾಲ ಸಿ.ಶೆಟ್ಟಿ ನೇತೃತ್ವದಲ್ಲಿ ಇತ್ತೀಚೆಗೆ ನವಿಮುಂಬಯಿ ಬೇಲಾಪುರ ಅಲ್ಲಿನ ಕೊಂಕಣ್ ರೈಲ್ವೇ ಕಾರ್ಪೊರೇಶನ್ ನಿಯಮಿತ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಂಜಯ್ ಗುಪ್ತಾ ಅವರನ್ನು ಭೇಟಿ ನೀಡಿದರು.

railway-yatri-2

ನಿಯೋಗದಲ್ಲಿ ರೈಲ್ವೇ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಪಿ.ಕೋಟ್ಯಾನ್, ಕಾರ್ಯದರ್ಶಿ ಶೀಲಾ ಶೆಟ್ಟಿ, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ, ಉಪಸ್ಥಿತರಿದ್ದು, ಸಂಜಯ್ ಗುಪ್ತಾ ಅವರನ್ನು ಅಭಿವಂದಿಸಿದರು.

railway-yatri

ಕಳೆದ ದೀಪಾವಳಿ, ಕ್ರಿಸ್ಮಸ್, ನೂತನ ವರ್ಷಕ್ಕೆ ಕೊಂಕಣ್ ರೈಲ್ವೇಯು ಪ್ರ್ರಯಾಣಿಕರ ಅನುಕೂಲಕರ ಸೇವೆಯನ್ನಾಗಿಸಿ ವಿಶೇಷ ರೈಲು ಸೇವೆ ಆರಂಭಿಸಿತ್ತು. ಇದು ನಮ್ಮ ತುಳುನಾಡ ಜನತೆಗೆ ವರವಾಗಿ ಪರಿಣಮಿಸಿದರೆ ಮಹಾರಾಷ್ಟ್ರದ ಕೊಂಕಣ ಭಾಗದ ಹಾಗೂ ಗೋವಾ ರಾಜ್ಯದ ಪ್ರಯಾಣಿಕರಿಗೂ ಅನುಕೂಲವಾಗಿತ್ತು. ಅಂತೆಯೇ ಈ ಬಾರಿಯೂ ಕೊಂಕಣ್ ರೈಲ್ವೇಯು ಇಂತಹ ವಿಶೇಷ ಸೇವೆಯ ಆಶಯದಲ್ಲಿ ನಾವಿದ್ದೇವೆ.

railway-yatri-3

ಗುಜರಾತ್ ಮೂಲಕ ಮಹಾನಗರ ಸೇರಿದಂತೆ ದೇಶದ ವಿವಿದೆಡೆಗಳಿಗೆ ಸಾಗುವ ನೂರಾರು ರೈಲುಗಳು ವಸಾಯಿ ರೋಡ್ ಜಂಕ್ಷನ್ ಮೂಲಕವೇ ಸಾಗುತ್ತಿವೆ. ಆದರೆ ಈ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ ಮಾರ್ಪಡಿಸುವಂತೆ ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಸಂಸದ ಗೋಪಾಲ ಶೆಟ್ಟಿ ಅವರು ಗುಪ್ತಾ ಅವರಿಗೆ ಮನವರಿಸಿದರು.

ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಕೊಂಕಣ್ ರೈಲ್ವೇ ಮುಖ್ಯಸ್ಥರು ಕೊಂಕಣ ರೈಲ್ವೇ ಮಾರ್ಗವಾಗಿ ಪ್ರತೀಯೊಂದು ಪ್ರಯಾಣಿಕರ ಬಗ್ಗೆ ವಿಶೇಷವಾದ ಕಾಳಜಿ ಇರಿಸಿ ಸುಖಕರ ಮತ್ತು ಆರಾಮದಾಯಕ ಪ್ರಯಾಣಕ್ಕೆ ಸಂಸ್ಥೆ ಪ್ರಯತ್ನಿಸುವುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ಕೆಆರ್‍ಸಿಎಲ್ ಸಂಸ್ಥೆ ಕಾರ್ಯಾನುಮುಖವಾಗಿದ್ದು, ನಮ್ಮೆಲ್ಲರ ಕನಸು ನನಸಾಗಲಿದೆ ಎಂದು ಸಂಸದ ಗೋಪಾಲ ಶೆಟ್ಟಿ ತಿಳಿಸಿದರು.

ಮೂಲಭೂತ ಸೌಕರ್ಯಗಳ ಕೊರತೆ, ಕಷ್ಟಕರವಾದ ವಿರುದ್ಧ ದಿಕ್ಕಿನ ಸಾಧನಗಳ ತೊಡಕುಗಳು, ಸಮಯದ ಪರ್ಯಾಲೋಚನೆ, ಆರ್ಥಿಕ ನಷ್ಟ ಇತ್ಯಾದಿಗಳ ಬಗ್ಗೆ ಚಿಂತಿಸಿ ಕ್ರಮಕೈಗೊಳ್ಳಲಾಗುವುದು. ನಾವು ಎಲ್ಲವನ್ನೂ ಇತಿಮಿತಿಗಳೊಳಗಿನ ವ್ಯವಸ್ಥೆಯನ್ನು ಪರಿಗಣಿಸಿ ಸೇವೆಯನ್ನು ಒದಗಿಸಬೇಕಾಗಿದೆ. ತಮ್ಮೆಲ್ಲರ ಆಶಯವು ಅಗತ್ಯವೂ ಅನಿವಾರ್ಯವೂ ಹೌದು. ಶೀಘ್ರವೇ ಈ ಬಗ್ಗೆ ದಕ್ಷಿಣ, ಮಧ್ಯ ಹಾಗೂ ಪಶ್ಚಿಮ ರೈಲ್ವೇ ನಿಗಮಗಳ ನಿರ್ದೇಶಕರಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಸಂಜಯ್ ಗುಪ್ತಾ ಭರವಸೆ ನೀಡಿರುವುದಾಗಿ ರೈಲ್ವೇ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ತಿಳಿಸಿದರು.

By suddi9

Leave a Reply

Your email address will not be published. Required fields are marked *