ಬಂಟ್ವಾಳ: ಇತ್ತೀಚೆಗೆ ದೈವರಾಧಕರಾದ ಕೂಟ ಕೇಂದ್ರ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ದೈವರಾಧಕರ ಕೂಟ ಬುಡೋಳಿ-ಶೇರಾ ವಲಯ ಸಮಿತಿ ಶೇರಾ ಕೊರಗಜ್ಜ ಸಾನಿಧ್ಯದಲ್ಲಿ ಜರಗಿತು.
ಬುಡೋಳಿ-ಶೇರಾ ಸಮಿತಿಯ ಗೌರವಾಧ್ಯಕ್ಷರಾಗಿ ಕುಶಾಲ ಎಂ.ಪೇರಾಜೆ ಮತ್ತು ಲೋಕಯ್ಯ ಶೇರಾ,ಅಧ್ಯಕ್ಷರಾಗಿ ಚೆನ್ನಪ್ಪ ಅಂಚನ್ ಸುರ್ಲಾಜೆ,ಉಪಾಧ್ಯಕ್ಷರಾಗಿ ಮೋಹನ್ ಸಾದಿಕುಕ್ಕು,ಕಾರ್ಯದರ್ಶಿಯಾಗಿ ಜನಾರ್ದನ ಬುಡೋಳಿ,ಜೊತೆ ಕಾರ್ಯದರ್ಶಿಯಾಗಿ ದಯಾನಂದ ಶೇರಾ ಮತ್ತು ದೀಪಕ್ ಮಂಡಲ,ಸಂಚಾಲಕರಾಗಿ ಹರೀಶ್ ಮಂಜೊಟ್ಟಿ,ಗೌರವ ಸಲಹೆಗಾರರಾಗಿ ಶಿವಪ್ರಸಾದ್ ಶೆಟ್ಟಿ ಮಿತ್ತಿಮಾರು,ಗಂಗಾಧರ ಗೌಡ ಅಲುಂಬುಡ,ದೇಜಪ್ಪ ಪಂಡಿತ್ ಶೇರಾ. ಜನಾರ್ದನ ಏನಾಜೆ,ಆನಂದ ಬುಡೋಳಿ ಅವರು ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಶಿವಪ್ರಸಾದ್ ಶೆಟ್ಟಿ ಮಿತ್ತಿಮಾರು ಅವರು ವಹಿಸಿದ್ದರು. ದೈವರಾಧಕರ ಸಂಘಟನೆಯ ಬಗ್ಗೆ ಲೋಕಯ್ಯ ಶೇರಾ ಅವರು ಮಾತನಾಡಿದರು.ಹರೀಶ್ ಮಂಜೊಟ್ಟಿ ಅವರು ಕೂಟದ ಉದ್ದೇಶವನ್ನು ವಿವರಿಸಿದರು. ಶೇರಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಅಂಚನ್, ದೈವನರ್ತಕ ಆನಂದ ಬುಡೋಳಿ,ದೇಜಪ್ಪ ಪಂಡಿತ್,ಪೆರಾಜೆ ಗ್ರಾ.ಪಂ.ಸದಸ್ಯರಾದ ತಿಮ್ಮಪ್ಪ ಗೌಡ ಮಂಜೊಟ್ಟಿ,ನೀಲಯ್ಯ ಪೂಜಾರಿ ಜೋಗಿಬೆಟ್ಟು, ಕೇಂದ್ರ ಸಮಿತಿಯ ಪರವಾಗಿ ಲೋಕಯ್ಯ ಶೇರಾ ಮತ್ತು ಹರೀಶ್ ಮಂಜೊಟ್ಟಿ ಉಪಸ್ಥಿತರಿದ್ದರು. ದಿನೇಶ್ ಜೋಗಿಬೆಟ್ಟು ಅವರು ಸ್ವಾಗತಿಸಿದರು.ದಿವಾಕರ್ ಪಾನೋರು ಅವರು ವಂದಿಸಿದರು.ವಸಂತ ಟೈಲರ್ ಮತ್ತು ದೀಪಕ್ ಮಂಡಲ ಅವರು ಕಾರ್ಯಕ್ರಮ ನಿರೂಪಿಸಿದರು.