ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ನಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದ ದಿವಂಗತ ರವಿಕುಮಾರ್ ಅಭಿಮಾನಿ ಬಳಗ ಮತ್ತು ಎ.ಜೆ. ಆಸ್ಪತ್ರೆ ಸಂಶೋಧನಾ ಕೇಂದ್ರ ವತಿಯಿಂದ ನ. 6ರಂದು ಬೆಳಿಗ್ಗೆ ಮೆಲ್ಕಾರ್ ಎ.ಜೆ. ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ಪ್ರಥಮ ವರ್ಷದ ಚಿರಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
