ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟೂರು, ಸಜೀಪಮುನ್ನೂರು, ಹಾಗೂ ಸಜೀಪಮೂಡ ಈ ಮೂರು ಗ್ರಾಮಗಳನ್ನು ಸಂಪಕರ್ಿಸುವ ತಾರಾಬರಿ ರಸ್ತೆ ಕಾಂಗ್ರೆಸ್ ಕಾರ್ಯಕರ್ತನೋರ್ವನ ತಗಾದೆಯಿಂದಾಗಿ 100 ಮಿ. ರಸ್ತೆ ಡಾಮಾರೀಕರಣಗೊಳ್ಳದೆ ಜನರು ತೊಂದರೆ ಪಡುವಂತಹ ಸ್ಥಿತಿ ನಿಮರ್ಾಣಗೊಂಡಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಅಮ್ಟೂರು ಆರೋಪಿಸಿದ್ದಾರೆ.

ಸುಮಾರು 200 ವರ್ಷಗಳಿಂದಲೂ ಈ ಈ ಭಾಗದ ಜನರಿಗೆ ಈ ರಸ್ತೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ವಿದ್ಯಾಥರ್ಿಗಳು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಸಾವಿರಾರು ಮಂದಿ ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ನೂರಾರು ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿದೆ. ಈ ಮೂರು ಗ್ರಾಮಗಳ ಸಂಪರ್ಕ ರಸ್ತೆಗೆ ಇದೀಗ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಶರತ್ ಎಂಬವರು ತನ್ನ ಜಮೀನೆಂದು ತಗಾದೆ ತೆಗೆದಿರುವುದರಿಂದ ರಸ್ತೆ 100 ಮೀಟರ್ ಡಾಮರೀಕರಣಗೊಳ್ಳದೇ ಉಳಿಯುವಂತಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಂತಾಗಿ ಮಾರ್ಪಟುಗೊಂಡು ಜನರು ನಡೆದಾಡಲು ತೊಂದರೆ ಪಡುವಂತಾಗಿದೆ, ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ಹೋಗುವ ಸ್ಥಿತಿ ನಿಮರ್ಾಣಗೊಂಡಿದೆ ಎಂದು ಅವರು ದೂರಿದ್ದಾರೆ.
ನಬಾಡರ್್ ಯೋಜನೆಯಡಿ ಮುರಿದು ಬಿದ್ದಿರುವ ಕಿರು ಸೇತುವೆ ಪುನರ್ ನಿಮರ್ಾಣ ಹಾಗೂ ರಸ್ತೆ ಅಭಿವೃದ್ದಿ ಗೊಂಡಾಗ ಸ್ಥಳೀಯ ಹಲವು ಮಂದಿ ತಮ್ಮ ಜಮೀನು ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದಾರೆ. ಆದರೆ ಈ ವ್ಯಕ್ತಿಯ ತಗಾದೆಯಿಂದ ರಸ್ತೆ 100 ಮೀಟರ್ ಡಾಮರೀಕರಣಗೊಳ್ಳದೇ ರಸ್ತೆ ಇದ್ದು ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಭೇಟಿ:
ಕೆಸರು ಗದ್ದೆಯಂತಾಗಿರುವ ವಿವಾದಿತ ರಸ್ತೆಯನ್ನು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಂಗಳವಾರ ಸಂಜೆ ವೀಕ್ಷಿಸಿದರು. ವಿವಾದಿತ ರಸ್ತೆಯನ್ನು ಪರಿಶೀಲಿಸಲು ಬುಧವಾರ ಮಂಗಳೂರು ಸಹಾಯಕ ಆಯುಕ್ತರು ಆಗಮಿಸುವುದಾಗಿ ಅವರು ಮಾಹಿತಿ ನೀಡಿದರು. ಈ ಸಂದರ್ಭ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ಚಂದ್ರಶೇಖರ್ ಟೈಲರ್, ಅಮ್ಟೂರು ಗ್ರಾ.ಪಂ.ಸದಸ್ಯ ಗೋಪಾಲ ಪೂಜಾರಿ, ಶರತ್ ಅಮಟೂರು, ಗಣೇಶ್ ಕುಲಾಲ್, ಕೃಷ್ಣಪ್ಪ ಪೂಜಾರಿ, ವಿಜಯ ಕುಮಾರ್ ಮತ್ತಿತರರು ಹಾಜರಿದ್ದರು.
ಚಿತ್ರ: ತಾರಾಬರಿ ವಿವಾದಿತ ರಸ್ತೆಯನ್ನು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಪರಿಸೀಲನೆ ನಡೆಸಿದರು

