ಉಡುಪಿ:-ಹೆಚ್.ಡಿ.ಎಫ್.ಸಿ ಬ್ಯಾಂಕ್ ಉಡುಪಿ,ಕರಾವಳಿ ಯೂತ್ ಕ್ಲಬ್,ಗಾಂಧಿ ಆಸ್ಪತ್ರೆ ಉಡುಪಿ,ಸ್ನೇಹ ಟ್ಯುಟೋರಿಯಲ್ ಕಾಲೇಜು,ಜೇಸಿಐ ಉಡುಪಿ ಸಿಟಿ ಮತ್ತು ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿ ಕೇಂದ್ರ ಮಣಿಪಾಲ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್.9 ಶುಕ್ರವಾರ ನಗರದ ಗಾಂಧಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

vitla

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಟಿ ವೆಂಕಟೇಶ್,ರಕ್ತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು ಯುವ ಜನಾಂಗ ಒಂದಾಗಿ ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಕರೆ ನೀಡಿದರು. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಹರಿದು ಉತ್ತಮ ರೀತಿಯ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದರು.

ಅದ್ಯಕ್ಷತೆಯನ್ನು ಗಾಂಧಿ ಆಸ್ಪತ್ರೆ ಆಡಳಿತ ನಿರ್ಧೇಶಕ ಡಾ|| ಎಂ ಹರಿಶ್ಚಂದ್ರ ಶಿಬಿರದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಶಾಖಾ ಪ್ರಭಂಧಕ ಮಧುಕೇಶ್ವರ ಹೆಗ್ಡೆ,ಕರಾವಳಿ ಯೂತ್ ಕ್ಲಬ್ ಅದ್ಯಕ್ಷ ಅಶೋಕ್, ನೀರೆ ಗ್ರಾ.ಪಂ ಮಾಜಿ ಅದ್ಯಕ್ಷ ರಮೆಶ್ ಕಲೊಟ್ಟೆ,ಜೇಸಿಐ ಉಡುಪಿ ಸಿಟಿ ನಿಯೋಜಿತ ಅದ್ಯಕ್ಷ ಕರುಣಾಕರ ಬಂಗೇರ,ಗಾಂಧಿ ಅಸ್ಪತ್ರೆಯ ವೈದ್ಯಕೀಯ ನಿರ್ಧೇಶಕ ಡಾ||ವ್ಯಾಸರಾಜ ತಂತ್ರಿ, ಹೆಚ್.ಡಿ.ಎಫ್.ಸಿ ಬ್ಯಾಂಕ್ ಪ್ರಭಂಧಕ ಮನೋಜ್ ಪುತ್ರನ್,ಮಲ್ಪೆ ಲಯನ್ಸ್ ಕ್ಲಬ್ ಅದ್ಯಕ್ಷೆ ಗಿರಿಜಾ ಶಿವರಾಮ ಶೆಟ್ಟಿ ಮುಂತಾದವರಿದ್ದರು.ಕೆ.ಎಂ.ಸಿ ರಕ್ತನಿಧಿ ಕೇಂದ್ರದ ಮುಖ್ಯಸ್ತರಾದ ಡಾ|| ಶಮ್ಮಿಶಾಸ್ರೀ ಮಾಹಿತಿ ನೀಡಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *