ಮುದುಂಗಾರುಕಟ್ಟೆ, : ಆಂಗ್ಲ ಭಾಷೆಯ ಗುಂಗಿನಲ್ಲಿ ನಮ್ಮ ನಾಡ ಭಾಷೆ ಕನ್ನಡವನ್ನು ಮರೆಯುವುದು ಸರಿಯಲ್ಲ. ಕನ್ನಡ ಮಣ್ಣಲ್ಲಿ ಹುಟ್ಟಿದ ಮೇಲೆ ಪೋಷಕರು ತಮ್ಮ ಮಕ್ಕಳಿಗೆ ಕನ್ನಡದ ಪ್ರಾಥಮಿಕ ಜ್ಞಾನವನ್ನು ನೀಡುವುದು ಆದ್ಯ ಕರ್ತವ್ಯ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಹಾಗೂ 12ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪಾತಿಮತ್ ತಬ್‍ಶಿರಾ ಅಭಿಪ್ರಾಯಪಟ್ಟರು.

download

ಅವರು ಬಾಳೆಪುಣಿ ಮುದುಂಗಾರು ಕಟ್ಟೆಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಲೋಕ ಕನ್ನಡ ಸಾಹಿತ್ಯ ಪರಿಷತ್. ಬಂಟ್ವಾಳ ತಾಲೂಕು ಘಟಕ ಇವರ ಆಶ್ರಯದಲ್ಲಿ ಶನಿವಾರ ನಡೆದ ಬಂಟ್ವಾಳ ತಾಲೂಕು 12ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಆಂಗ್ಲಭಾಷೆ ಅನಿವಾರ್ಯತೆ ಹೆಚ್ಚಾಗುತ್ತಿದಂತೆ ಶಿಕ್ಷಣ ವ್ಯವಸ್ಥೆಯೂ ಆಂಗ್ಲ ಮಯವಾಗುತ್ತಿದೆ.ಕೆಲವೊಂದಿನಸಾಹಿತಿಗಳು ಸಂಪ್ರದಾಯವಾದಿಗಳು ತಮ್ಮ ಭಾಷೆ ಅಳಿಯುತ್ತಿದೆ ಎಂದು ಬೊಬ್ಬಿಟ್ಟರು ತಮ್ಮ ಮಕ್ಕಳನ್ನು ಮಾತ್ರ ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿರುವುದು ವಾಸ್ತವ, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಎಗ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದು ಅನಿವಾರ್ಯ ಎನ್ನುವ ಸ್ಥಿತಿಗೆ ಬಂದಿದ್ದು, ಆಂಗ್ಲ ಭಾಷೆ ಸೇರಿದಂತೆ ಇತರ ಭಾಷೆಯ ಜ್ಞಾನ ಅಗತ್ಯವಾದರೂ ಅದರೊಂದಿಗೆ ಕನ್ನಡಕ್ಕೂ ಆದ್ಯತೆ ನೀಡುವ ಕಾರ್ಯವನ್ನು ಹೆತ್ತವರು ಮಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‍ನ ದ.ಕ.ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ನಮ್ಮ ಪರಂಪರೆ, ನಮ್ಮ ಜೀವನ ಧರ್ಮ ಕೇವಲ ಅದು ಬಾಷೆ ಮಾತ್ರ ಅಲ್ಲ ತುಳು, ಬ್ಯಾರಿ ಕೊಂಕಣಿ ಭಾಷಿಗರಾಗಿದ್ದು ನಾವು ತುಳುನಾಡಿನವರಾದರೂ ಅನುಷ್ಠಾನದಲ್ಲಿ ನಾವು ಕನ್ನಡಿಗರು, ಕನ್ನಡಿಗರಾಗಿದ್ದು ಭಾರತೀಯತೆಯನ್ನು ನಾವು ತೋರ್ಪಡಿಸಬೇಕು ಎಂದ ಅವರು ನಮ್ಮ ಶಿಕ್ಷಣ ನೀತಿಯಿಂದಾಗಿ ಸಮಸ್ಯೆಗಳಿದ್ದರೂ ಇರುವ ವ್ಯವಸ್ಥೆಯೊಳಗೆ ಕನ್ನಡತನವನ್ನು ನಾವು ಶಕ್ತಿಯುತವಾಗಿ ಬೆಳೆಸುವ ಕಾರ್ಯದೊಂದಿಗೆ ಮಕ್ಕಳ ಬದುಕನ್ನು ಕಟ್ಟಿಕೊಡುವ ಕಾರ್ಯವಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಕಡಿಮೆ ಅದರಲ್ಲೂ ಮಕ್ಕಳ ಸಾಹಿತ್ಯ ಸಮ್ಮೇಲನ ಮಾಡುವ ಮೂಲಕ ಮಕ್ಕಳಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಹೊರ ತರುವ ಕಾರ್ಯ ಶ್ಲಾಘನೀಯವಾಗಿದ್ದು, ಆ ಮೂಲಕ ಇದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಕಲಿಕೆಯೊಂದಿಗೆ ಸಾಹಿತಿಗಳಾಗಿ ಹೊರ ಹೊಮ್ಮಲಿ ಎಂದರು.

ಕಾರ್ಯಕ್ರಮಕ್ಕೆ ಮಾಣಿ ಪ್ರೌಢಶಾಲೆಯ ವಿದ್ಯಾರ್ಥಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಜತ್ ಜೆ.ಪಿ. ಸಮ್ಮೇಳನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಪುಸ್ತಕ ಬಿಡುಗಡೆ ಮಾಡಿದರು.  ಶಾಲಾ ಹಸ್ತ ಪತ್ರಿಕೆ `ಸಿರಿ‘ಯನ್ನು ಬಂಟ್ವಾಳ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿ.ಕುನ್ಹಾ, ಕನ್ನಡ ಸಾಹಿತ್ಯ ಪರಿಷತ್‍ನ ಬಂಟ್ವಾಳ ತಾಲೂಕು ಆಶಯ ಭಾಷಣ ಮಾಡಿದರು.

ಮೂಳೂರು ಶಾಲಾ ವಿದ್ಯಾರ್ಥಿ ಮಹಮ್ಮದ್ ಅನಸ್ ಸ್ವಾಗತಿಸಿದರು. ಮಕ್ಕಳ ಲೋಕ ಕನ್ನಡ ಇದರ ಅಧ್ಯಕ್ಷ ಭಾಸ್ಕರ ಅಡ್ವಳ ಪ್ರಸ್ತಾವನೆಗೈದರು. ಮೂಳೂರು ಶಾಲಾ ವಿದ್ಯಾರ್ಥಿ ಲಕ್ಷ್ಮಣ್ ಮತ್ತು ಮೂಳೂರು ಶಾಲಾ ಶಿಕ್ಷಕ ರಮೇಶ್ ನಾಯ್ಕ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಅನಿಶ್ ವಂದಿಸಿದರು.

ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಮೆರವಣಿಗೆಗೆ ಬಾಳೆಪುಣಿ ಮುದುಂಗಾರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ಅವರು ಚಾಲನೆ ನೀಡಿದರು. ಇರಾ ಪರಪ್ಪು ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲಾ ಸಹಶಿಕ್ಷಕ ಯತೀಶ್ ಪಿ., ಬಾಳೆಪುಣಿ ಶಾಲಾ ವಿದ್ಯಾರ್ಥಿನಿ ನೌಶೀಯಾ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಪರಿಷತ್‍ನ ಧ್ವಜಾರೋಹಣವನ್ನು ರಮೇಶ್ ಶೇಣವ ನಡೆಸಿದರು. ಸಾಂಬಾರ್‍ತೋಟ ಶಾಲಾ ಸಹಶಿಕ್ಷಕ ನೀಲಯ್ಯ, ಬಾಳೆಪುಣಿ ಶಾಲಾ ವಿದ್ಯಾರ್ಥಿ ಅಹಮ್ಮದ್ ಸಫ್‍ವಾನ್ ಕಾರ್ಯಕ್ರಮ ನಿರ್ವಹಿಸಿದರು.

ಮನುಷ್ಯ ಎಷ್ಟು ಎತ್ತರಕ್ಕೆ ಬೇಕಾದರೂ ಹೋಗಬಹುದು ಆದರೆ ಉಸಿರಾಡುವುದನ್ನು ಬಿಡಲು ಸಾಧ್ಯವಿಲ್ಲ. ಹಾಗೆಯೇ ಆಂಗ್ಲ ಭಾಷೆ ಎಷ್ಟೇ ಅನಿವಾರ್ಯವಾದರೂ ಮಾತೃಭಾಷೆ ಕನ್ನಡವನ್ನು ಮರೆಯಲು ಸಾಧ್ಯವಿಲ್ಲ. ಭಾಷಣದಿಂದ ಕನ್ನಡ ಉಳಿಯಲು ಸಾಧ್ಯವಿಲ್ಲ. ಪ್ರೀತಿಯಿಂದ ಒಪ್ಪಿಕೊಂಡರ ಮಾತ್ರ ಕನ್ನಡ ಉಳಿಯಲು ಸಾಧ್ಯವಿದ್ದು, ಆಡಳಿತ ಮತ್ತು ವ್ಯವಹಾರದಲ್ಲಿ ಹೆಚ್ಚಾಗಿ ಕನ್ನಡವನ್ನು ಬಳಕೆ ಮಾಡಿಕೊಂಡಾಗ ಮಾತ್ರ ಕನ್ನಡವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾದ್ಯವಿಲ್ಲ.(*ಪಾತಿಮತ್ ತಬ್‍ಶಿರಾ ).

By suddi9

Leave a Reply

Your email address will not be published. Required fields are marked *