ಬಂಟ್ವಾಳ: ತುಳುನಾಡ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ತಮ್ಮ ಜೀವಿತ ಕಾಲದಲ್ಲಿ ಶೋಷಣೆ,ಜಾತಿ ತಾರತಮ್ಯ, ದೌರ್ಜನ್ಯದ ವಿರುದ್ಧ ನಡೆಸಿದ ಹೋರಾಟ ಇಂದಿನ ಸಾಮಾಜಿಕ ನ್ಯಾಯದ ಜೀವನ ಪದ್ಧತಿಗೆ ಬುನಾದಿಯಾಗಿದೆ. ಸತ್ಯ,ಧರ್ಮ,ನ್ಯಾಯ ಮಾರ್ಗದಲ್ಲಿ ನಡೆದ ಅವರು ಮಾನವ ಧರ್ಮ ತತ್ವದಡಿಯಲ್ಲಿ ಸಮಾಜವನ್ನು ಕಟ್ಟಲು ಪ್ರೇರಣೆಯಾದವರು. ತಮ್ಮ ಹೋರಾಟದ ಬದುಕಿನಿಂದ ಮಾದರಿಯಾಗಿ ಸರ್ವ ಸಮಾಜದಿಂದ ಆರಾ„ಸಲ್ಪಡುತ್ತಿರುವುದು ಗಮನಾರ್ಹವಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

kakyapadavu-1

ಅವರು ಮಂಗಳವಾರ ಸುಮಾರು 3 ಕೋ.ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕು ಉಳಿ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಪುನರ್‍ನಿರ್ಮಾಣ ಸಮಿತಿಯ ಪದಗ್ರಹಣ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.

ಹಿಂದಿನ ಕಾಲದ ಸಮಾಜದ ಸ್ಥಿತಿ ಗತಿ,ಹಿರಿಯರ ಜೀವನ ಪದ್ಧತಿ ಇವುಗಳ ಬಗ್ಗೆ ಇತಿಹಾಸದ ನೆನಪು ಮಾಡುವುದು ಅಗತ್ಯವಾಗಿದೆ. ನಿರ್ದಿಷ್ಟ ಸೈದ್ಧಾಂತಿಕ ನಿಲುವುಗಳಿಂದ ಇಂದು ಶೋಷಣೆಮುಕ್ತ ಸಮಾಜದ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದ ಅವರು ಕಕ್ಯಪದವುನಲ್ಲಿ ಆದಿಕಾಲದಿಂದ ಆರಾ„ಸಿಕೊಂಡು ಬರುತ್ತಿರುವ ಕೋಟಿ-ಚೆನ್ನಯರ ಗರಡಿಯನ್ನು ಸಂಪ್ರದಾಯಬದ್ಧವಾಗಿ ಪುನರ್‍ನಿರ್ಮಾಣಗೊಳಿಸಲಾಗುತ್ತಿದ್ದು ಸರ್ವರೂ ಸಹಕಾರ ನೀಡಬೇಕು ಮತ್ತು ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಇದೇ ವೇಳೆ ಸಚಿವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಪುನರ್‍ನಿರ್ಮಾಣ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಸಿದರು.

ಬಂಟ್ವಾಳ ತಾಲೂಕು ಬಿಲ್ಲವರ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬೆಳ್ತಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಪಿತಾಂಬರ ಹೇರಾಜೆ, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಕಕ್ಯಪದವು ಎಲ್‍ಸಿಆರ್ ವಿದ್ಯಾಸಂಸ್ಥೆ ಸಂಚಾಲಕ ರೋಹಿನಾಥ್ ಪಾದೆ, ಉದ್ಯಮಿ ರಾಜವೀರ ಜೈನ್, ಶ್ರೀ ಪಂಚದುರ್ಗಾ ಪರಮೇಶ್ವರಿ ಕ್ಷೇತ್ರದ ಆಸ್ರಣ್ಣ ಶ್ರೀನಿವಾಸ ಅರ್ಮುಡ್ತಾಯ ಉದ್ಯಮಿಗಳಾದ ನಿತ್ಯಾನಂದ ಕೆಂತಲೆ, ಲೋಕೇಶ್ ಆಚಾರ್ಯ, ವಿಶ್ವನಾಥ ಬಿ.ಗಾಣದಪಡ್ಪು, ಜಯಪ್ರಕಾಶ್ ಜೆ.ಎಸ್., ರಾಜೇಶ್ ಸುವರ್ಣ, ವಾಸುದೇವ ಭಟ್ ಕುಂಜತ್ತೋಡಿ, ಪ್ರಶಾಂತ್ ಪುಂಜಾಲಕಟ್ಟೆ , ವರದ ಶಂಕರ್, ರವಿ ಕಕ್ಯಪದವು, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಶಿಕ್ಷಕ ಮಹೇಶ್ ಕುಮಾರ್, ಶ್ರೀ ಕ್ಷೇತ್ರ ಕಕ್ಯಬೀಡು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್, ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ, ಗೇರು ನಿಗಮ ನಿರ್ದೇಶಕ ಜಗದೀಶ ಕೊೈಲ,ಗ್ರಾ.ಪಂ.ಸದಸ್ಯ ಶಿವಪ್ಪ ಪೂಜಾರಿ ಹಟದಡ್ಕ,ವಿಶ್ವನಾಥ ಸಾಲ್ಯಾನ್ ಬಿತ್ತ, ರಬ್ಬರ್ ಮತ್ತು ಜೇನು ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಗುಣಶೇಖರ ಕೊಡಂಗೆ,ನ್ಯಾಯವಾದಿ ನವನೀತ ಹಿಂಗಾಣಿ,ಉಪನ್ಯಾಸಕ ಶರತ್ ಕುಮಾರ್ ಕೇದಿಗೆ,ಮಾಣಿ ಸಿ.ಎ.ಬ್ಯಾಂಕ್ ಪ್ರಬಂಧಕ ಸಂಜೀವ ಪೂಜಾರಿ,ಪ್ರಮುಖರಾದ ಮಜಲು ವಾಸು ಪೂಜಾರಿ,ಜಯ ಬಂಗೇರ ಕಜೆಕಾರು,ಆನಂದ ಸಾಲ್ಯಾನ್ ಶಂಭೂರು,ಪ್ರಶಾಂತ್ ಎಂ. ಪ್ರತಿಮಾ ನಿಲಯ,ವಾಸ್ತು ಶಿಲ್ಪಿ ಪ್ರಮೋದ್ ಕುಮಾರ್,ಜಯರಾಂ ಆಚಾರ್ ನಕ್ರೆ,ಕಜೆಕಾರು ಗ್ರಾ.ಪಂ.ಅಧ್ಯಕ್ಷ ವಜ್ರ ಪೂಜಾರಿ ಬಾರ್ದೊಟ್ಟು,ಕಜೆಕಾರು ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ,ಪಾಂಡವರಕಲ್ಲು ಬ್ರಹ್ಮ ಬೈದರ್ಕಳ ಗರಡಿ ಮೊಕ್ತೇಸರ ರತ್ನಕುಮಾರ್ ಆರಿಗ,ಜಯಂತ ನಡುಬೈಲ್, ಗೆಜ್ಜೆಗಿರಿ ನಂದನಬಿತ್ತಿಲು ಪ್ರವೀಣ್ ಕುಮಾರ್ ಕಡೆಂಜಿಗುತ್ತು, ಉಲ್ಲಾಸ್ ಕೋಟ್ಯಾನ್, ಸದಾಶಿವ ಸುವರ್ಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿ ಉಪಾಧ್ಯಕ್ಷ ಡಾ.ರಾಜಾರಾಂ ಕೆ.ಬಿ.ಅವರು ಸ್ವಾಗತಿಸಿದರು. ಉಳಿ ಸೇ.ಸ.ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪ ಸಾಲ್ಯಾನ್ ಅವರು ಪ್ರಸ್ತಾವಿಸಿದರು. ಸಮಿತಿ ಉಪಾಧ್ಯಕ್ಷ ಮೋನಪ್ಪ ಪೂಜಾರಿ ಕಂಡೆತ್ಯಾರು ವಂದಿಸಿದರು. ಪತ್ರಕರ್ತ ಗೋಪಾಲ್ ಅಂಚನ್ ಅವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *