ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮನಪಾ ಕಾರ್ಪೊರೇಟರ್ ವಿಶ್ವನಾಥ ಪೂಜಾರಿ ನೇತೃತ್ವದಲ್ಲಿ ನಗರ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್ ಅವರನ್ನು ಭೇಟಿ ಮಾಡಿ ನೂತನ ಡ್ಯಾಂ ನೀರು ಸಂಗ್ರಹಿಸಿ ರೈತರಿಗಾದ ಅನ್ಯಾಯದ ಬಗ್ಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಆಯುಕ್ತರು 5 ಮೀ. ಎತ್ತರದ ಮುಳುಗಡೆ ಪ್ರದೇಶದ ಲಿಖಿತ ಮಾಹಿತಿ ನೀಡಿದರು.

dam-2

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರಗಿದ ಮುಳುಗಡೆಗೊಳಗಾಗುವ ಸಂತ್ರಸ್ತ ರೈತರ ಸಭೆಗೆ ಕರೆ ಬಾರದ ಸಂತ್ರಸ್ತ ರೈತರ ಜಮೀನು ಜಲಾವೃತಗೊಂಡಲ್ಲಿ ಅಂತಹ ರೈತರು ತಹಶೀಲ್ದಾರ್ ಮತ್ತು ಆಯುಕ್ತರಿಗೆ ಲಿಖಿತ ಅರ್ಜಿ ನೀಡಿದ್ದಲ್ಲಿ ಅಂತಹ ರೈತರಿಗೂ ಮುಳುಗಡೆ ಭೂಮಿಗೆ ಪರಿಹಾರ ಬಾಡಿಗೆ ರೂಪದಲ್ಲಿ ನೀಡಲಾಗುವುದೆಂದು ತಿಳಿಸಿದರು. ಪ್ರಸ್ತುತ 4 ಗ್ರಾಮಗಳಲ್ಲಿ 18-20 ಎಕರೆ ಭೂಪ್ರದೇಶ ಮುಳುಗಡೆಯಾಗಲಿದ್ದು ಭೂಮಾಲಿಕರಿಗೆ ಒಟ್ಟು 16,25,050 ರೂ.ನ್ನು 2 ಕಂತಿನಲ್ಲಿ ನೀಡಲಾಗುವುದು ಎಂದು ಲಿಖಿತವಾಗಿ ತಿಳಿಸಿರುತ್ತಾರೆ. 1 ಮೀ.ಎತ್ತರಕ್ಕೆ ವೈಜ್ಞಾನಿಕವಾಗಿ ಶಿಫಾರಸ್ಸುಗೊಂಡಂತೆ ಹೆಚ್ಚಾವರಿ ಭೂ ಪ್ರದೇಶದ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಲಿಖಿತ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್,ಎನ್.ಕೆ.ಇದಿನಬ್ಬ,ಪಿ.ಸುದೇಶ ಮಯ್ಯ,ಬಾಲಕೃಷ್ಣ ಗಟ್ಟಿ ಮೊದಲಾದವರಿದ್ದರು. ಎಲ್ಲಾ ಸಂತ್ರಸ್ತ ರೈತರಿಗೆ ಏಕಗಂಟಿನಲ್ಲಿ ಏಕಕಾಲದಲ್ಲಿ ಪರಿಹಾರ ಧನ ವಿತರಿಸುವಂತೆ ಮನವಿ ಸಲ್ಲಿಸಲಾಯಿತು. ತಾರತಮ್ಯ ರಹಿತ ಬಾಡಿಗೆ ನಿಗದಿ ಪಡಿಸುವಂತೆ ವಿನಂತಿಸಲಾಯಿತು.

By suddi9

Leave a Reply

Your email address will not be published. Required fields are marked *