ಬಂಟ್ವಾಳ:ತುಂಬೆ ಡ್ಯಾಂ ಮುಳುಗಡೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡದೆ ಕೃಷಿಕರ ಮಾತಿಗೆ ಬೆಲೆ ಕೊಡದೆ ಸತಾಯಿಸುತ್ತಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ,ನಿದ್ದೆಯಲ್ಲಿರುವ ರಾಜ್ಯ ಸರಕಾರವನ್ನು ಎಚ್ಚರಿಸುವಂತೆ,ಕರಾವಳಿ ಭಾಗದ ರೈತರ ಆಶೋತ್ತರಗಳನ್ನು ಈಡೇರಿಸುವಂತೆ ರೈತ ನಾಯಕ,ಮಾಜಿ ಮುಖ್ಯಮಂತ್ರಿ ,ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರನ್ನು ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿ,ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಮಾಜಿ ಶಾಸಕರುಗಳಾದ ಶ್ರೀ.ಎ ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ,ಬಿಜೆಪಿ ಪ್ರಮುಖರಾದ ಉದಯ ಕುಮಾರ್ ರಾವ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ,ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ,ಬಿಜೆಪಿ ಪ್ರಮುಖರಾದ ಉದಯ ಪ್ರಕಾಶ್ ಅಂಚನ್,ಮಹಾಬಲ ಶೆಟ್ಟಿ,ಗೋವಿಂದ ಪ್ರಭು,ನಂದರಾಮ ರೈ,ರಮಾನಾಥ ರಾಯಿ,ಗಣೇಶ್ ರೈ ಮಾಣಿ,ಅಬ್ದುಲ್ ರಝಾಕ್,ವಸಂತ ಅಣ್ಣಳಿಕೆ,ಪುಷ್ಪರಾಜ ಚೌಟ ಮಾಣಿ,ವಜ್ರನಾಥ ಕಲ್ಲಡ್ಕ,ಸಂತೋಷ್ ಕುಮಾರ್ ರಾಯಿ,ಪುರುಷೋತ್ತಮ ಶೆಟ್ಟಿ ಮಾದಪದವು,ಗುರುದತ್ ನಾಯಕ್,ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು