ಬಂಟ್ವಾಳ:ಬ್ರಹ್ಮರಕೊಟ್ಲುವಿನ ಟೋಲ್ ಬೂತ್ ದ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿರುವ ಪುರಸಭಾ ಸದಸ್ಯ ಶರೀಫ್ ಕಳೆದ ತಿಂಗಳ ಸಾಮಾನ್ಯ ಸಭೆಗೆ ಚಕ್ಕರ್ ಆಗಿದ್ದರೂ ಬಳಿಕ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿರುವ ಪ್ರಕರಣ ಜೀವಂತ ಇರುವಾಗಲೇ ಅದೇ ಸಭೆಯಲ್ಲಿ ಕೋಟ್ಯಾಂತರ ರೂಪಾಯಿಗೆ ಕ್ರಿಯಾ ಯೋಜನೆ ತಯಾರಿಸಿ ಅಕ್ರಮ ನಿರ್ಣಯ ದಾಖಲಿಸಿರುವ ಪ್ರಕರಣವೊಂದು ಬಯಲಿಗೆ ಬಂದಿರುವ ಹಿನ್ನಲೆಯಲ್ಲಿ ಎಚ್ಚೆತ್ತ ಜಿಲ್ಲಾಧಿಕಾರಿಯವರು ಶುಕ್ರವಾರ ಸಂಜೆ ಬಂಟ್ವಾಳ ಪುರಸಭೆಯ ಅಧಿಕಾರಿಗಳನ್ನು ತಮ್ಮ ಕಚೇರಿಗೆ ತುತರ್ು ಬುಲಾವ್ ಮಾಡಿ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ಮಧ್ಯೆ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭುರವರು ಆಡಳಿತ ಪಕ್ಷದ ಅಧಿಕಾರ ದುರುಪಯೋಗ ಮತ್ತು ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಇ-ಮೇಲ್ ಮೂಲಕ ಸಮಗ್ರವಾದ ವಿವರವನ್ನೊಳಗೊಂಡ ದೂರನ್ನು ರವಾನಿಸಿದ್ದರು.ಇದರ ಪ್ರತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಕಳುಹಿಸಲಾಗಿತ್ತು. ಇದಕ್ಕೆ ಕೂಡಲೆ ಸ್ಪಂದಿಸಿದ ಸಂಸದರು ಜಿಲ್ಲಾಧಿಕಾರಿಯವರನ್ನು ಸಂಪಕರ್ಿಸಿ ಬಂಟ್ವಾಳ ಪುರಸಭೆಯ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬ್ರಹ್ಮರಕೊಟ್ಲುವಿನ ಟೋಲ್ ಬೂತ್ ದ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿರುವ ಪುರಸಭಾ ಸದಸ್ಯ ಶರೀಫ್ ಜೂನ್ 16ರಂದು ಸಾಮಾನ್ಯ ಸಭೆಗೆ ಚಕ್ಕರ್ ಆಗಿದ್ದರೂ ಬಳಿಕ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲೆ ವಿಪಕ್ಷ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಇದೀಗ ಅದೇ ದಿನದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಾರದೆ ಸುಮಾರು 3.33ಕೋಟಿಗೂ ಅಧಿಕ ರೂ.ಗೆ (3,33,14,000.00) ಕ್ರಿಯಾ ಯೋಜನೆ ತಯಾರಿಸಿ ಅಕ್ರಮವಾಗಿ ನಿರ್ಣಯ ಕೈಗೊಂಡ ಹಾಗೂ 15 ದಿನವಾದರೂ ನಿರ್ಣಯ ಪುಸ್ತಕದಲ್ಲಿ ಅಂದಿನ ಸಭಾ ನಡಾವಳಿಯಲ್ಲಾದ ನಿರ್ಣಯವನ್ನು ದಾಖಲಿಸಲಿರುವುದು ಮತ್ತು ಶುಕ್ರವಾರ (ಜು.4) ನಿರ್ಣಯದ ಪ್ರತಿಯನ್ನು ನಿರ್ಣಯ ಪುಸ್ತಕಕ್ಕೆ ಹಚ್ಚಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪುಸ್ತಕಕ್ಕೆ ಹಚ್ಚಿದ ನಿರ್ಣಯ ಪ್ರತಿ
ಜೂನ್ 16ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸಭೆ ನಡೆದು 15 ದಿನಗಳಾದರೂ ಪುಸ್ತಕದಲ್ಲಿ ದಾಖಲಿಸದಿರುವುದರಿಂದ ವಿಪಕ್ಷ ಬಿಜೆಪಿ ಸದಸ್ಯರು ಬುಧವಾರದಂದು ಪುರಸಭೆಯಲ್ಲಿ ಧರಣಿ ನಡೆಸಿದ್ದು ಈ ಸಂದರ್ಭದಲ್ಲಿ ತರಾತುರಿಯಾಗಿ ಕಂಪ್ಯೂಟರ್ನಲ್ಲಿ ನಿರ್ಣಯ ದಾಖಲಿಸಿ ಅದರ ಪ್ರತಿಯನ್ನು ಧರಣಿ ನಿರತ ಬಿಜೆಪಿ ಸದಸ್ಯರಿಗೆ ನೀಡಿದ್ದರು. ಅಂದು ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾ ಯೋಜನಾಧಿಕಾರಿ ತಾಕತ್ ರಾವ್ ಅವರು ಪರಿಶೀಲಿಸಿದಾಗ ನಿರ್ಣಯ ಪುಸ್ತಕದಲ್ಲಿ ಸಭೆಯ ನಿರ್ಣಯ ದಾಖಲಾಗದಿರುವುದು ದೃಡಪಟ್ಟಿತ್ತು. ಈ ಸಂಬಂಧವಾಗಿ ಬಿಜೆಪಿ ಸದಸ್ಯರಿಗೆ ಲಿಖಿತ ಪರಿಶೀಲನಾ ವರದಿಯನ್ನು ನೀಡಿದ್ದರು. ಅದೇ ರೀತಿ ಇದರ ಪ್ರತಿಯನ್ನು ಜಿಲ್ಲಾಧಿಕಾರಿಗೂ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಪರಿಣಾಮ ಪುರಸಭೆಯ ಅಧಿಕಾರಿಗಳನ್ನು ಡಿ.ಸಿ ಯವರು ಕರೆಸಿದ್ದಾರೆಂದು ಶುಕ್ರವಾರ ಮದ್ಯಾಹ್ನ ಪುರಸಭೆಯ ಸಿಬ್ಬಂದಿಗಳು ಕಂಪ್ಯೂರೀಕೃತ ನಿರ್ಣಯದ ಪ್ರತಿಯನ್ನು ನಿರ್ಣಯ ಪುಸ್ತಕಕ್ಕೆ ಹಚ್ಚಿದ್ದಾರೆಂದು ತಿಳಿದು ಬಂದಿದೆ.
