ಬಂಟ್ವಾಳ : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಬಂಟ್ವಾಳ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ತಾಲೂಕು ವ್ಯಾಪ್ತಿಯ ಸದಸ್ಯರನ್ನು ನೇಮಿಸಿ ಸರಕಾರವು ಆದೇಶ ಹೊರಡಿಸಿದೆ. ಕಾವಳಪಡೂರು ಗ್ರಾಮದ ಪಿಲಿಂಗಾಲು ಸತೀಶ್ ಕುಮಾರ್, ನರಿಕೊಂಬು ಗ್ರಾಮದ ಉಮೇಶ್ ಬೋಳಂತೂರು, ಮಾಣಿಲ ಗ್ರಾಮದ ರಾಜೇಶ್ ಬಾಳೆಕಲ್ಲು, ಕೊಳ್ನಾಡು ಗ್ರಾಮದ ಅಗರಿ ಅಬ್ದುಲ್ಲ ಎ.ಬಿ, ಕಾವಳಪಡೂರು ಗ್ರಾಮದ ಲಿಂಗಪ್ಪ ಕೈಲಾರು ಹಾಗೂ ಮಣಿನಾಲ್ಕೂರು ಗ್ರಾಮದ ತಿಂಗಳಾಡಿ ಕಾಂಚಲಾಕ್ಷಿ ಅವರು ನೂತನವಾಗಿ ನಾಮನಿರ್ಧೇಶನಗೊಂಡ ಸದಸ್ಯರು.