ಬಂಟ್ವಾಳ: ಇಲ್ಲಿನ ಕೆಳಗಿನಪೇಟೆಯಿಂದ ಅಗ್ನಿಶಾಮಕ ದಳ ಠಾಣೆಯವರೆಗಿನ ಚರಂಡಿಯಲ್ಲಿ ಕೊಳಚೆ ನೀರು ಸರಿಯಾಗಿ ಹರಿದು ಹೋಗದೆ ಗಬ್ಬು ವಾಸನೆ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

c 2

c 3

ಈ ಭಾಗದಲ್ಲಿ ನೂರಾರು ಮನೆಗಳು ಹಾಗೂ ಹೊಟೇಲ್, ಅಂಗಡಿಗಳು ಇದ್ದು ಇಲ್ಲಿನ ತ್ಯಾಜ್ಯ ನೀರು ಚರಂಡಿಯ ಮೂಲಕ ಹರಿದು ನದಿಯನ್ನು ಸೇರುತ್ತಿದೆ. ಆದರೆ ಕೆಲವು ಸಮಯದಿಂದ ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ತ್ಯಾಜ್ಯ ನೀರು ಸರಿಯಾಗಿ ಹರಿಯದೆ ಗಬ್ಬು ವಾಸನೆ ಬೀರುತ್ತಿದೆ. ಚರಂಡಿ ಪಕ್ಕದಲ್ಲಿರುವ ಮನೆಯವರಿಗೆ ಮನೆಯಲ್ಲಿ ವಾಸ ಮಾಡಲು ಕೂಡಾ ಆಗದ ಸ್ಥಿತಿ ಇದ್ದು ಈ ಬಗ್ಗೆ ಸ್ಥಳೀಯ ಪುರಸಭೆ ಹಾಗೂ ಪ್ರತಿನಿಧಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

charandi

ಈ ಪ್ರದೇಶ ಪುರಸಭಾ ಕಚೇರಿಗೆ ಕಾಲ್ನಡಿಗೆ ದೂರದಲ್ಲಿದ್ದು ಚರಂಡಿಯಲ್ಲಿ ತ್ಯಾಜ್ಯ ನೀರು ನಿಂತಿದ್ದರಿಂದ ಸೊಳ್ಳೆಗಳು ಉತ್ಪತಿಯಾಗಿ ಸಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ. ಚರಂಡಿಯ ಮೇಲ್ಭಾಗಕ್ಕೆ ಮುಚ್ಚಲ ಅಳವಡಿಸಬೇಕೆಂದು ಕೂಡಾ ಪುರಸಭೆಗೆ ಮನವಿ ಮಾಡಿದ್ದರೂ ಈ ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಇಲ್ಲಿನ ಚರಂಡಿಯಲ್ಲಿ ತುಂಬಿರುವ ಹೂಳನ್ನು ಎತ್ತಿ ತ್ಯಾಜ್ಯ ನೀರು ಸರಿಯಾಗಿ ಹರಿಯಲು ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *