ಬೋಂದೆಲ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ದೆಪ್ಪಣಿಗುತ್ತು ದಿ| ಸದಾಶಿವ ಶೆಟ್ಟರ ಹಾಗೂ ಮೇಗಿನಮನೆ ದಿ| ಜಯರಾಮ ನಾಯ್ಕರ ಸೇವಾರ್ಥ “ಸತಿ-ಶಕ್ತಿ ವಿಲಾಸ” ಎಂಬ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಬೋಂದೆಲ್‍ನಲ್ಲಿ ಫೆ.4 ಶನಿವಾರದಂದು ಜರುಗಲಿದೆ.ಈ ಸಂದರ್ಭದಲ್ಲಿ ಶ್ರೀ ಕಟೀಲು ಮೇಳದ ಹಿರಿಯ ಕಲಾವಿದ ಯಕ್ಷಗಾನ – ತಾಳಮದ್ದಳೆ ಕ್ಷೇತ್ರಗಳಲ್ಲಿ ಕೀರ್ತಿ ಸಂಪಾದಿಸಿರುವ ” ಸುಣ್ಣಂಬಳ ವಿಶ್ವೇಶ್ವರ್ ಭಟ್”ಗೆ ಗೌರವ ಸನ್ಮಾನ ಹಾಗೂ ಬಿರುದು ಪ್ರದಾನವನ್ನು ಮಾಡಲಿದ್ದಾರೆ.1

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೋರ್ತಿ ಶ್ರೀನಿವಾಸ ಭಟ್ ಇವರ ದಿವ್ಯ ಉಪಸ್ಥಿತಿಯಲ್ಲಿ, ಮಂಗಳೂರು ಬಂಟರ ಯಾನೆ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕೂಳೂರು ಬೀಡು ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣ, ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಮಂಗಳೂರು ಟೈಮ್ಸ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕ ಕದ್ರಿ ನವನೀತ್ ಶೆಟ್ಟಿ, ಬೋಂದೆಲ್ ಸುಣ್ಣಂಬಳ ವಿಶ್ವೇಶ್ವರ್ ಭಟ್ ಸನ್ಮಾನ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಸದಸ್ಯರುಗಳಾದ ಕೆ.ಬಾಲರಾಜ್ ರೈ, ಡಾ| ಹರಿಕಿಶನ್ ನಾಯ್ಕ್, ದೀಪಕ್ ಕಿರಣ್ ನಾಯ್ಕ್, ಸಮೀರ್ ಎಸ್. ಶೆಟ್ಟಿ, ಶಿವದುರ್ಗ ಶೆಟ್ಟಿ ಉಪಸ್ಥಿತರಿರುವರು. ತದನಂತರ ರಾತ್ರಿ 8.30ಕ್ಕೆ ಚೌಕಿ ಪೂಜೆ ನಡೆಯಲಿದೆ. ಎಂದು ಶಿವ ದುರ್ಗಾ ಶೆಟ್ಟಿ ಸುದ್ದಿ9 ಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *