ಮಂಗಳೂರು: ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಇದರ ಆಶ್ರಯದಲ್ಲಿ ಶನಿವಾರ ಜುಲೈ 12ರಂದು ನಗರದ ಕೊಡಿಯಾಲ್ಬೈಲ್ನಲ್ಲಿರುವ ಎಸ್ಡಿಎಂ ಕಾನೂನು ಕಾಲೇಜ್ ಸಭಾಂಗಣದಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ವ್ಯಾಸಪೂಜೆ, ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ, ಸನಾತನದ ಶ್ರದ್ಧಾಸ್ಥಾನರಾದಂತಹ ಪರಾತ್ಪರಗುರು ಡಾ.ಜಯಂತ ಅಠವಲೆ ಇವರ ಏಕಮೇವಾದ್ವಿತೀಯ ಕಾರ್ಯ ಹಾಗೂ ಹಿಂದುತ್ವನಿಷ್ಠ ಅತಿಥಿಗಳಿಂದ ಮಾರ್ಗದರ್ಶನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ.
ಹಿಂದೂ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆ ಪ್ರಮುಖವಾಗಿದ್ದು, ಗುರುಪೂರ್ಣಿಮೆಯ ದಿನದಂದು ಗುರುವರ್ಯರಿಗೆ ನಮಿಸುವುದು ಮಾತ್ರವಲ್ಲದೆ ಅದು ಗುರುಗಳಿಗೆ ಅಪೇಕ್ಷಿತವಾಗಿರುವ ಗುರುಸೇವೆಯನ್ನು ಮಾಡುವ ಸಂಕಲ್ಪದ ದಿನವೂ ಆಗಿದೆ. ಈ ಸಂದೇಶವನ್ನು ಸಾರಲು ಸಂಘಟನೆ ಪ್ರತೀವರ್ಷ ಗುರುಪೂರ್ಣಿಮೆಯ ಮಹೋತ್ಸವ ಆಚರಿಸುತ್ತಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಸಂಘಟನೆಯ ಪ್ರಕಟಣೆ ಹೇಳಿದೆ.