ಕುಡುಪು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್‍ಧ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದ ಪ್ರಾಚೀನ ಕಾಲದ ಸುತ್ತುಪೌಳಿ ಕಟ್ಟಡವನ್ನು ಕುಡುಪು ಮತ್ತು ಆಸುಪಾಸಿನ ಗ್ರಾಮಗಳ ಸ್ವಯಂ ಸೇವಕರ ಶ್ರಮದಾನದಿಂದ ಕೆಡವಿ, ತೆರವುಗೊಳಿಸಲಾಯಿತು.
ಹಳೆ ಕಟ್ಟಡದ ಅಮೂಲ್ಯ ಸ್ವತ್ತುಗಳನ್ನು ಸಂರಕ್ಷಿಸಲಾಗಿದೆ. ಸುಮಾರು 1200 ವರ್ಷಗಳ ಪ್ರಾಚೀನತೆಯನ್ನು ಹೊಂದಿದ್ದು, ಸಂಪೂರ್ಣ ಜೀರ್ಣವ್ಯವಸ್ತೆ ತಲುಪಿತ್ತು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ವಾಸ್ತು ವಿನ್ಯಾಸದೊಂದಿಗೆ ನೂತನ ಸುತ್ತುಪೌಳಿ ನಿರ್ಮಿಸಲು ನಿರ್ಧರಿಸಿದ್ದು, ಕಾಮಗಾರಿಯೂ ಪೂರ್ವ ತಯಾರಿ ಹಂತದಲ್ಲಿದೆ.

ಶ್ರಮದಾನದಲ್ಲಿ 300ಕ್ಕೂ ಅಕ ಸ್ವಯಂ ಸೇವಕರು ಭಾಗವಹಿಸಿದ್ದರು. ದೇವಳದ ಕಾರ್ಯನಿರ್ವಹಣಾಕಾರಿ, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
