ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ 68 ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿದ್ದು, ಮುಖ್ಯ ಅತಿಥಿಯಾಗಿ ಆಗಮಿಸಿದ ವಿಟ್ಲ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾದ ಶ್ರೀಯುತ ಅರುಣ ವಿಟ್ಲ ಇವರು ಧ್ವಜಾರೋಹಣಗೈದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿಜ್ಞಾನ ಪ್ರತಿಭಾ ಪರೀಕ್ಷೆ – 2016 ರಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಮನರಂಜನಾ ಕಾರ್ಯಕ್ರಮದೊಂದಿಗೆ ಗಣರಾಜ್ಯ ದಿನಾಚರಣೆಗೆ ಹೆಚ್ಚಿನ ಶೋಭೆ ನೀಡಿದರು, ಕಾರ್ಯಕ್ರಮದ ವೇದಿಕೆಯಲ್ಲಿ ಸಲಹಾ ಸಮಿತಿ ಗೌರವ ಸಲಹೆಗಾರರಾದ ಶ್ರೀಯುತ ಸುದರ್ಶನ್ ಪಡಿಯಾರ್, ಸಲಹಾ ಸಮಿತಿಯ ಸದಸ್ಯರಾದ ಶ್ರೀಯುತ ಮಹಮ್ಮದ್ ಶಾಫಿ ಹಾಗೂ ಶಾಲಾ ಹಿತೈಷಿ ಸಿ.ಎಫ್. ಸಿಕ್ವೇರಾ ಇವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದರು.

11

By suddi9

Leave a Reply

Your email address will not be published. Required fields are marked *