ಮುಂಬಯಿ, : ವಿೂರಾರೋಡ್, ಬೊಯಿಸರ್‍ನಲ್ಲಿ ಆರೋಗ್ಯಭಾಗ್ಯದ ಕಾಳಜಿಗೆ ಹೆಸರುವಾಸಿಯಾದ ತುಳು-ಕನ್ನಡಿಗರ ಸಂಚಾಲಕತ್ವದ `ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್’ ಇದೀಗ ಮುಂಬಯಿ ಉಪನಗರದ ಮಲಾಡ್ ಪಶ್ಚಿಮದಲ್ಲೂ ಸೇವಾರಂಂಭಿಸಿದ್ದು, ಇಲ್ಲಿನ ಎಸ್.ವಿ ರೋಡ್ ಮುಂಭಾಗದಲ್ಲಿನ ಗೋರಸ್ವಾಡಿ ಲೇನ್‍ನ ಸಿಂಡಿಕೇಟ್ ಬ್ಯಾಂಕ್‍ನ ಮುಂಭಾಗದ ಕಟ್ಟಡದಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ `ತುಂಗಾ ಸೂಪರ್ ಸ್ಪೆಶಿಯಾಲಿಟಿ ಹಾಸ್ಪಿಟಲ್’ಸಿದ್ಧಗೊಳಿಸಿ ಕಳೆದ ಗುರುವಾರ ಧಾರ್ಮಿಕ ಪೂಜಾಧಿಗಳೊಂದಿಗೆ ಸೇವೆಗೆ ಸನ್ನದ್ಧ ಗೊಳಿಸಿದೆ.
ಮೀರಾರೋಡ್‍ನ ವಿದ್ವಾನ್ ಕೃಷ್ಣರಾಜ್‍ತಂತ್ರಿ ತಮ್ಮ ಪೌರೋಹಿತ್ಯದಲ್ಲಿ ವಾಸ್ತುಹೋಮ, ವಾಸ್ತುಬಲಿ, ಪುಣ್ಯಾವಚನ, ನವಗ್ರಹಪೂಜೆ, ಪೂಜೆ, ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‍ನ ಭೋಜ ಮೋಹನ್ ಶೆಟ್ಟಿ (ತುಂಗಾ ಮೆಡಿಕಲ್ ಟ್ರಸ್ಟ್‍ನ ಸಂಸ್ಥಾಪಕ ವಿಶ್ವಸ್ಥ) ಹಾಗೂ ವಸಂತಿ ಬಿ.ಶೆಟ್ಟಿ ಬಜ್ಪೆ, ಅವರ ಸುಪುತ್ರ ಡಾ| ಸತೀಶ್ ಬಿ.ಶೆಟ್ಟಿ (ಮೆಡಿಕಲ್ ಡೈರೆಕ್ಟರ್) ಮತ್ತು ಡಾ| ದಿವ್ಯ ಎಸ್.ಶೆಟ್ಟಿ, ವಿಶ್ವಸ್ಥ ನಿರ್ದೇಶಕರುಗಳಾದ ಉಮೇಶ್ ಎ.ಶೆಟ್ಟಿ ಮುಂಡ್ಕೂರು ಮತ್ತು ಪೂಜಾ ಯು.ಶೆಟ್ಟಿ, ರಾಜೇಶ್ ಬಿ.ಶೆಟ್ಟಿ ಮತ್ತು ಅರ್ಚನಾ ಆರ್.ಶೆಟ್ಟಿ ಹಾಗೂ ಹರಿಪ್ರಸಾದ್ ಬಿ.ಶೆಟ್ಟಿ ಮತ್ತು ಕಾಂತಿ ಹೆಚ್.ಶೆಟ್ಟಿ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಮಲಾಡ್ ಪಶ್ಚಿಮದ ಎಸ್.ವಿ ರೋಡ್ ಮುಂಭಾಗದಲ್ಲಿನ ಗೋರಸ್ವಾಡಿ ಲೇನ್‍ನಲ್ಲಿನ ಏಳು ಮಹಡಿಗಳ ಭವ್ಯ ಕಟ್ಟಡದಲ್ಲಿ ಸುಮಾರು 62,000 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶದಲ್ಲಿ ರೂಪಿಸಲ್ಪಟ್ಟ ಈ ಸೂಪರ್ ಸ್ಪೆಶಿಯಲಿಟಿ ಹೈ-ಟೆಕ್ ಹೆಲ್ತ್ ಕೇರ್ ಸೆಂಟರ್‍ನ್ನು ಇದೇ ಫೆ.27ನೇ ಸೋಮವಾರ ಪೂರ್ವಾಹ್ನ 11.00 ಗಂಟೆಗೆ ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಆಶೀರ್ವಚನಗಳೊಂದಿಗೆ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಗೋಪಾಲ್ ಸಿ.ಶೆಟ್ಟಿ ಸೇವಾರ್ಪಣೆ ಮಾಡಲಿದ್ದಾರೆ.
ನೂರಾರು ಆಧುನಿಕ ತಂತ್ರಜ್ಞಾಗಳುಳ್ಳ ಅತ್ಯಾಧುನಿಕ ಸೌಲತ್ತುಗಳೊಂದಿಗೆ ಜನಸಾಮಾನ್ಯರ ಕೂಡಾ ಆರೋಗ್ಯ ಕಾಳಜಿಯುಳ್ಳ ಪ್ರಕೃತಿಕ ಮನಸ್ವಾಸ್ಥ ್ಯ ಸೇವಾ ಕೇಂದ್ರವಾಗಿ ಆಧುನಿಕ ವಿಶೇಷತೆಗಳೊಂದಿಗೆ ಸಿದ್ಧಗೊಂಡಿರುವ ಈ ಖಾಸಗಿ ಆಸ್ಪತ್ರೆಯು ಎಲ್ಲಾ ರೋಗಿಗಳಿಗೂ ಮಾನವೀಯ ಸೆಳೆಯ ಆಸಕ್ತಿಯೊಂದಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರೀತಿ ವಾತ್ಸಲ್ಯ ಭರಿತ ಕರುಣಾಮಯ ಆರೈಕೆಗೈದು ಗುಣಹೊಂದುವ ಸೇವೆಯನ್ನೇ ಧ್ಯೇಯೋದ್ದೇಶವಾಗಿ ಕಾರ್ಯಚರಿಸಲಿದೆ. ಸೇವೆಯಲ್ಲಿ ತುಳು-ಕನ್ನಡಿಗರಿಗೆ ವಿಶೇಷ ರಿಯಾಯಿತಿ ಇದ್ದು, ಈ ಹೈ-ಟೆಕ್ ಹೆಲ್ತ್ ಕೇರ್ ಸೆಂಟರ್ ಅನೇಕತ್ವದ ವೈವಿಧ್ಯತೆಯ ಸೇವೆಗೆ ಪಾತ್ರವಾಗಲಿದೆ ಎಂದು ತುಂಗಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ| ಸತೀಶ್ ಬಿ.ಶೆಟ್ಟಿ ತಿಳಿಸಿದ್ದಾರೆ. ಫೆ.27ರ ಉದ್ಘಾಟನಾ ಸಮಾರಂಭಕ್ಕೂ ಮಹಾನಗರದಲ್ಲಿನ ಸರ್ವ ತುಳು ಕನ್ನಡಿಗರಿಗೆಲ್ಲರಿಗೂ ಆದರಪೂರ್ವಕ ಸ್ವಾಗತವಿದ್ದು ಸರ್ವರ ಸಹಯೋಹ ಕೋರಲಾಗಿದೆ ಎಂದು ರಾಜೇಶ್ ಬಿ.ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸೇವಾರ್ಪಣೆಗೈಯಲಿದ್ದಾರೆ. ಭಾರತ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿ ಉಪನಗರದಲ್ಲಿ ಅತೀವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತುಳು-ಕನ್ನಡಿಗರ ಪಾಲಿಗೆ ಮಿನಿಮಂಗಳೂರು ಎಂದೇ ಪ್ರಸಿದ್ಧಿಯಲ್ಲಿರುವ ವಿೂರಾರೋಡ್‍ನಲ್ಲಿ (ವಿೂರಾ-ಭಯಂದರ್) ಜನಹಿತ ಪ್ರಾಧಾನ್ಯತೆಯ ಬಹುಸಂಖ್ಯಾ ವಿಶೇಷಜ್ಞ ಆರೋಗ್ಯ ಕೇಂದ್ರವಾಗಿರಿಸಿ ಸುಮಾರು ಏಳು ವರ್ಷಗಳ ಹಿಂದೆ ವಿೂರಾರೋಡ್ ಪೂರ್ವದ ಶಿವಾರ್ ಗಾರ್ಡನ್ ಮುಂಭಾಗದಲಿನ್ಲ ಎನ್.ಹೆಚ್ ಇಂಗ್ಲೀಷ್ ಹೈಸ್ಕೂಲ್‍ನ ಸಮೀಪದಲ್ಲಿ ಚಿಕ್ಕದಾಗಿ ಆರಂಭಿಸಿದ್ದ ತುಂಗಾ ಹೆಲ್ತ್ ಕೇರ್ ಸೆಂಟರ್‍ನ್ನು ಇದೀಗ ಅಧಿಕ ಸೇವಾ ಕೇಂದ್ರವಾಗಿ ಸೇರ್ಪಡೆಗೊಂಡು ಡಾ| ಸತೀಶ್ ಬಿ.ಶೆಟ್ಟಿ ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ಮೂಲಕದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಇಲ್ಲಿನ ಭೋಜ ಮೋಹನ್ ಶೆಟ್ಟಿ (ಸಂಸ್ಥಾಪಕ ವಿಶ್ವಸ್ಥ) ಹಾಗೂ ಮಂಗಳೂರು ತಾಲೂಕಿನ ಬಜ್ಪೆ ಮೂಲದ ಶ್ರೀಮತಿ ವಸಂತಿ ಬಿ.ಶೆಟ್ಟಿ ಇವರ ಸುಪುತ್ರ ಡಾ| ಸತೀಶ್ ಬಿ.ಶೆಟ್ಟಿ (ಎಂ.ಡಿ-ಉಡುಪಿ ಹಾಗೂ ಎಫ್‍ಎಜಿಇ-ಮಣಿಪಾಲ್) ಇವರ ಆಡಳಿತ ನಿರ್ದೇಶಕತನದ ಮತ್ತು ಕಿನ್ನಿಗೋಳಿ ಮುಂಡ್ಕೂರು ಮೂಲದ ಉಮೇಶ್ ಎ.ಶೆಟ್ಟಿ (ಸಿಇಒ) ಆಡಳಿತ್ವದ ಸಂಸ್ಥೆಯಲ್ಲಿ ನಿರ್ದೇಶಕರುಗಳಾಗಿ ಡಾ| ದಿವ್ಯ ಎಸ್.ಶೆಟ್ಟಿ (ಎಂ.ಡಿ), ಹರಿಪ್ರಸಾದ್ ಬಿ.ಶೆಟ್ಟಿ, ರಾಜೇಶ್ ಬಿ.ಶೆಟ್ಟಿ, ಶ್ರೀಮತಿ ಪೂಜಾ ಯು.ಶೆಟ್ಟಿ ಮತ್ತು ವಿಠಲ್ ಜಿ.ಶೆಟ್ಟಿ ಸೇವಾ ನಿರತರಾಗಿದ್ದಾರೆ.




