ಮೂಡುಬಿದಿರೆ : ಅಕ್ಷರ ದಾಸೋಹ ನೌಕರರ ಸಂಘ ಮೂಡುಬಿದಿರೆ ವಲಯ ಸಮಿತಿಯಿಂದ ಶಾಸಕ ಅಭಯಚಂದ್ರ ಅವರಿಗೆ ಮನವಿಯೊಂದನ್ನು ನೀಡಲಾಯಿತು.
ಅಕ್ಷರ ದಾಸೋಹದ ನೌಕರರಾಗಿ ದುಡಿಯುತ್ತಿರುವ ಮಹಿಳೆಯರು ಇದುವರೆಗೆ 2 ಸಾವಿರ ರೂಪಾಯಿಗಳ ಸಂಭಾವನೆಯಲ್ಲಿ ಜೀವನ ನಡೆಸುತ್ತಿದ್ದು, ಬೆಲೆಯೇರಿಕೆಯ ಈ ದಿನಗಳಲ್ಲಿ ಅವರ ಬದುಕು ದುಸ್ತರವಾಗಿದೆ. ಈ ಮಹಿಳೆಯರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಯಾಗುವ ತನಕ ಕನಿಷ್ಠ ರಾಜ್ಯ ಸರಕಾರ 5 ಸಾವಿರ ರೂಪಾಯಿ ವೇತನ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡುವಂತೆ ಹಾಗೂ ಇದಕ್ಕಾಗಿ ಬಜೆಟ್‍ನಲ್ಲಿ 428 ಕೋಟಿ ಹಣವನ್ನು ತೆಗೆದಿರಿಸುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

mbd_march1_7
ಮನವಿ ನೀಡಿದ ಸಂದರ್ಭ ಸಿಐಟಿಯು ಅಧ್ಯಕ್ಷೆ ರಮಣಿ, ಕಾರ್ಯದರ್ಶಿ ಶಂಕರ ವಾಲ್ಪಾಡಿ, ಸಂಚಾಲಕರಾದ ಗಿರಿಜಾ, ನೌಕರರ ಸಂಘದ ಅಧ್ಯಕ್ಷೆ ರೇಣುಕಾ, ಕಾರ್ಯದರ್ಶಿ ಯಶೋಧಾ, ಕೋಶಾಧಿಕಾರಿ ಶೋಭಾ ಉಪಸ್ಥಿತರಿದ್ದರು.
—

By suddi9

Leave a Reply

Your email address will not be published. Required fields are marked *