ಬದಲಾವಣೆಗಾಗಿ ಧೈರ್ಯಸ್ಥರಾಗಿ’ ಇದು ಈ ವರ್ಷದ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯ. ಈ ವಾಕ್ಯ ನಮ್ಮ ಸಮಾಜದ ಪ್ರತಿಯೊಬ್ಬ ಮಹಿಳೆಯನ್ನೂ ಬದಲಾವಣೆಗೆ ಎದ್ದು ನಿಲ್ಲುವಂತೆ ಪ್ರೇರೇಪಿಸುತ್ತದೆ ಮತ್ತು ಅವರ ಮಹಾತ್ವಾಕಾಂಕ್ಷೆಗಳನ್ನು ಸಾಧಿಸಲು ಸಹಾಯವಾಗುತ್ತದೆ ಅದೇ ರೀತಿ ಸಾಮಾಜಿಕ ಆಥಿರ್ಕ ಸಾಮಥ್ರ್ಯದ ಮೇಲಿನ ನಿಯಂತ್ರಣಗಳನ್ನು ಸಡಿಲಿಸಿ ಸರ್ವತೋಮುಖ ಅಭಿವೃದ್ದಿಗೆ ಗಣನೀಯ ಕೊಡುಗೆಗಳನ್ನು ನೀಡಲು ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ಇತ್ತೀಚೆಗೆ ಎಜ್ಯುಕೇಷನ್ ಇವ್ಹಾಂಜೆಲಿಸ್ಟ್ ಓಫ್ ದಿ ಇಯರ್ ಪ್ರಶಸ್ತಿ ವಿಜೇತೆ ರಾಯಾನ್ ಅಂತರಾಷ್ಟ್ರೀಯ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ನುಡಿದಿದ್ದಾರೆ.

Madam Grace Pinto -1

ಹೆಣ್ತನ ಎಂಬುದು ದೇವರು ನೀಡಿದ ಅತ್ಯಂತ ವಿಶೇಷ ವೃತ್ತಿ ಎಂದರೆ ಅತಿಶಯೋಕ್ತಿಯಲ್ಲ. ಮಹಿಳೆಯರು ಕುಟುಂಬ ಮತ್ತು ಸಮಾಜಗಳೆರಡರ ಸಂಸ್ಥಾಪಕರಾಗಿದ್ದಾರೆ. ಒಬ್ಬ ಮಹಿಳೆ ತನ್ನನ್ನು ಅರಸಿ ಬಂದವರಿಗೆ ಜೀವನವನ್ನೇ ಮುಡಿಪಾಗಿಟ್ಟು ಸಹಕರಿಸುತ್ತಾಳೆ, ಧೈರ್ಯ ತುಂಬುತ್ತಾಳೆ, ತನ್ನನ್ನು ನಂಬಿದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಾಳೆ. ಹಾಗಾಗಿ ಒಬ್ಬ ಮಹಿಳೆ ಸ್ವನಂಬಿಕೆ, ಆತ್ಮ ವಿಶ್ವಾಸ, ದೇವರು ನೀಡಿರುವ ಸಾಮಥ್ರ್ಯ, ಅನನ್ಯ ಕೌಶಲ್ಯ ಪ್ರತಿಭೆ ಇವುಗಳನ್ನೆಲ್ಲಾ ಬಳಸಿಕೊಂಡು ಮುಖ್ಯವಾಗಿ ಸ್ವತಃ ತನ್ನನ್ನು ತಾನು ಅರಿತುಕೊಂಡು ತನ್ನಲ್ಲಿರುವ ಸಾಮಥ್ರ್ಯಗಳನ್ನು ನಿರ್ಭೀತಿಯಿಂದ ಉಪಯೋಗಿಸಿಕೊಂಡು ಜಗತ್ತಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಬೇಕು ಈ ಸಂದರ್ಭದಲ್ಲಿ ಎಲೀನರ್ ರೂಸ್‍ವೆಲ್ಡ್ ಹೇಳಿದ ಮಾತೊಂದು ಸಂದರ್ಭೋಚಿತ ಎಂದು ಕಾಣುತ್ತಿದೆ. “ನಿಮ್ಮ ಅನುಮತಿಯಿಲ್ಲದೆ ಯಾರೊಬ್ಬರೂ ನಿಮ್ಮನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ”

ಇಂದು ನಾವು ಸಮಾಜದಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದಕ್ಕೆ ಸಾಕ್ಷಿಯಾಗಬೇಕು. ಮಹಿಳೆಯರು ಮನೆಯಿಂದ ಹೊರನಡೆದು ಭೋಧನೆ, ವೈದ್ಯಕೀಯ ಸೇವೆ ಮತ್ತು ಜಾಗತಿಕ ಸಂಸ್ಥೆಗಳನ್ನು ಮುನ್ನಡೆಸಬೇಕು. ಹೆಚ್ಚು ಹೆಚ್ಚು ಮಹಿಳೆಯರು ತಮ್ಮ ಸಾಮಥ್ರ್ಯ ಪ್ರದರ್ಶನಕ್ಕಾಗಿ ಹೊಸ ಅವಕಾಶಗಳಿಗಾಗಿ ಎದುರು ನೋಡಬೇಕು. ಹಲವಾರು ಪುರುಷ ಪ್ರಧಾನ ವಲಯಗಳಲ್ಲಿ ಮಹಿಳೆಯರು ಮುಂದೆ ಬರುವುದು ದೊಡ್ಡ ಸವಾಲಿನ ಕೆಲಸವೇ ಸರಿ. ನಾನು ಸ್ವತಃ ಒಬ್ಬ ಮಹಿಳಾ ಮುಖಂಡಳಾಗಿ ಈ ಸವಾಲನ್ನು ಎದುರಿಸಿದ್ದೇನೆ. ಇದರಿಂದ ನಾನು ಗಮನಿಸಿದ್ದೇನೆಂದರೆ ನಿರಂತರ ಸವಾಲುಗಳಿಂದ ಮಹಿಳೆಯೊಬ್ಬಳಿಗೆ ತನ್ನ ಜೀವನದ ಗುರಿಯನ್ನು ರೂಪಿಸಲು ನೆರವಾಗುತ್ತದೆ, ಮಾತ್ರವಲ್ಲ ಆಕಾಂಕ್ಷೆಗಳನ್ನು ಈಡೇರಿಸಲು ಸ್ಪೂರ್ತಿಯಾಗುತ್ತದೆ.

ಮಹಿಳೆಗೆ ದೇವರು ಅನನ್ಯ ಗುಣಲಕ್ಷಣಗಳನ್ನು ದಯಪಾಲಿಸಿದ್ದಾನೆ. ಅಂತಃದೃಷ್ಟಿ, ಧೈರ್ಯ, ಧೀರ್ಘ ಪ್ರಯತ್ನ ಹಾಗೂ ಇನ್ನೂ ಹಲವು ಅಂಶಗಳು ಮಹಿಳೆಯ ಘನತೆಯನ್ನು ಅಲಂಕರಿಸಿವೆ. ಇವುಗಳನ್ನು ರಚನಾತ್ಮಕವಾಗಿ ಬಳಸಿಕೊಂಡರೆ ಮಹಿಳೆಯ ಜೀವನ ಮೌಲ್ಯಯುತ ಮತ್ತು ಶಕ್ತಿಯುತವಾಗಿರುತ್ತದೆ. ಮಹಿಳೆಯರು ಬಹು ಸವಾಲುಗಳು ಮತ್ತು ಅಸಾಧಾರಣ ಸಾಮಥ್ರ್ಯಗಳೊಂದಿಗೆ ಮುಂದೆ ಬಂದರೆ ಒಬ್ಬ ನಾಯಕಿಯಾಗಿ ಮೆರೆಯಬಲ್ಲಳು.

ಪ್ರಸಕ್ತ ದಿನಗಳಲ್ಲಿ ಶಿಕ್ಷಣ ಮಹಿಳೆಯರಿಗೆ ಹೊಸ ದಾರಿಗಳನ್ನು ತೋರಿಸಿದೆ. ಶಿಕ್ಷಣ ಮಹಿಳೆಯರಲ್ಲಿ ವಿಭಿನ್ನವಾದ ಚಿಂತನೆಗಳನ್ನು ಮೂಡಿಸಿದೆ. ಅದೇ ರೀತಿ ಮಹಿಳೆಯರ ನಿರ್ವಹಣಾ ಕೌಶಲ್ಯವನ್ನು ವಿಶೇಷವಾಗಿ ವೃದ್ದಿಸಿದೆ. ಜನರೊಂದಿಗೆ ಅದ್ಭುತವಾಗಿ ಅತ್ಯಂತ ಸುಲಭವಾಗಿ ಸಂಪರ್ಕಿಸಬಲ್ಲಳು. ಇನ್ನೊಂದು ಪ್ರಮುಖ ಅನುಕೂಲತೆಯೆಂದರೆ ಮಹಿಳೆ ತನ್ನ ಮನೋವೃತ್ತಿ ಮತ್ತು ಜೀವನ ಹಾದಿಯಲ್ಲಿ ಸ್ಥಿರತೆ ಮತ್ತು ಪರಿಶ್ರಮವನ್ನು ಮೈಗೂಡಿಸಬಲ್ಲಳು. ಇದರಿಂದ ಆಕೆ ಕುಟುಂಬ ಅಥವಾ ಸಮುದಾಯ ಅಥವಾ ಸಮಾಜ ಹೀಗೆ ಯಾವುದೇ ಇರಬಹುದು, ಆಕೆ ಸ್ವತಃ ಕಂಡುಕೊಂಡ ವಾತಾವರಣದಲ್ಲಿ ಮಹತ್ವದ ಫಲಿತಾಂಶಗಳನ್ನು ಪಡೆಯಬಲ್ಲಳು.

ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಮಾಡಿರುವ ಸಾಧನೆ ಮತ್ತು ಸಂಚಲನಗಳು ಮಾನವನ ಜ್ಞಾನ ಮತ್ತು ಕೌಶಲ್ಯಕ್ಕೆ ಸೇರ್ಪಡೆಯಾಗಿದೆ. ಮಹಿಳೆಯರು ಸಂಸ್ಥೆಗಳು ಅದೇ ರೀತಿ ಸಮಾಜ ಉದ್ಯಮಶೀಲತೆಯ ಜನ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ಮಾಡಿದ್ದಾರೆ. ಆದ್ದರಿಂದ ಇಂದು ನಾವು ಸರಿಯಾದ ಬದಲಾವಣೆಗೆ ಮುನ್ನುಗ್ಗಬೇಕಾದ ಅವಶ್ಯಕತೆ ಇದೆ. ಶಿಕ್ಷಣದ ಮೂಲಕ ಮಹಿಳೆಯ ಶಕ್ತಿಯನ್ನು ಕೇಂದ್ರೀಕರಿಸಬೇಕು ಇದು ಮಹಿಳೆಯರಿಗೆ ಸ್ವತಂತ್ರ ಚಿಂತನೆಯ ಸಾಮಥ್ರ್ಯವನ್ನು ನೀಡುತ್ತದೆ. ಈ ಮೂಲಕ ಮಹಿಳೆಯರು ಸಮಾಜದಲ್ಲಿ ಬದಲಾವಣೆ ತರುವ ರೂವಾರಿಗಳಾಗಬೇಕು.

ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಎಲ್ಲಾ ಮಹಿಳೆಯರು ತಮ್ಮ ಹೆಣ್ತನವನ್ನು ಉಜ್ವಲ ಭವಿಷ್ಯದ ಭರವಸೆಯೊಂದಿಗೆ ಆಚರಿಸುವ ದಿನವಾಗಬೇಕು. ಈ ದಿನಾಚರಣೆ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯ ಸೆಳೆಯಾಗಬೇಕು. ಎಲ್ಲಾ ಮಹಿಳೆಯರಿಗೆ ನಾನು ಹೇಳುವುದೇನೆಂದರೆ ಕನಸು ದೊಡ್ಡದಿರಲಿ, ಆ ಕನಸಿಗೆ ನೀವು ಹೆದರದೇ ಇದ್ದರೆ ಎಂತಹ ಕನಸುಗಳೂ ದೊಡ್ಡದೆನಿಸಲಾರವು. “ಸ್ಪರ್ಧೆಯಿಂದ ಕೊಡುಗೆಯತ್ತ ಚಲಿಸೋಣ… ಈ ಮೂಲಕ ನಮ್ಮ ಜೀವನವನ್ನು ಆಚರಿಸೋಣ…“ಮುನ್ನುಗ್ಗಿ… ಎಂದೂ ಹಿನ್ನಡೆಯಬೇಡಿ…” ಎಂದು ಮೇಡಂ ಪಿಂಟೋ ನಾಡಿನ ಸಮಸ್ತ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣಾ ಸಂದೇಶದಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *