ಮುಂಬಯಿ, : ಬಿಲ್ಲವರ ಅಸೋಸಿಯೇಶನ್ ಮುಂಬಯಿ ವತಿಯಿಂದ ಕಳೆದ ಬುಧವಾರ ರಾತ್ರಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಥಾಣೆ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆಯಾಗಿ ಟಿಎಂಸಿ ನೂತನ ಮೇಯರ್ ಆಗಿ ಆಯ್ಕೆಗೊಂಡ ವಿೂನಾಕ್ಷಿ ಪೂಜಾರಿ ಮತ್ತು ಬೃಹನ್ಮುಂಬಯಿ ಮಹಾನಗರಪಾಲಿಕೆ (ಬಿಎಂಸಿ) ಕಾಪೆರ್Çೀರೇಟರ್ ಆಗಿ ಚುನಾಯಿತ ಜಗದೀಶ್ ಕೆ.ಅವಿೂನ್ ಅವರನ್ನು ಅಸೋಸಿಯೇಶನ್ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.Billawa Assn. Mayor-Corporator Sanman-4

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಪದಾಧಿಕಾರಿಗಳೊಂದಿಗೆ ಚುನಾಯಿತ ಸ್ವಸಮಾಜ ಬಂಧುಗಳಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪಗುಪ್ಚ, ಸ್ಮರಣಿಕ, ಮಾನಪತ್ರ ಪ್ರದಾನಿಸಿ ಸನ್ಮಾನಿಸಿದರು.

ನಾನೋರ್ವ ತುಳುನಾಡ ಅಪ್ಪಟ ಬಿಲ್ಲವಳು ಎನ್ನಲು ಅಭಿಮಾನ ಮತ್ತು ಗೌರವವೆಣಿಸುತ್ತದೆ. ರಾಜಕೀಯ ವೇದಿಕೆ ನನಗೆ ಪ್ರಾಮಾಣಿಕ ಸಮಾಜಸೇವೆ ಮಾಡುವ ವೇದಿಕೆ ಒದಗಿಸಿದ್ದು ಆ ಮೂಲಕ ಇಂತಹ ಸ್ಥಾನಮಾನದ ಪ್ರತಿಷ್ಠೆಯನ್ನು ಒದಗಿಸಿದೆ. ಆದುದರಿಂದ ನನ್ನ ಪಾಲಿಗೆ ರಾಜಕಾರಣ ಅಭಿನಯವಲ್ಲ (ಆ್ಯಕ್ಟರ್) ಅಭಿಮಾನವಾಗಿದೆ.
ನನಗೆ ಜನತೆ ಸಮಾಜ ಸೇವೆ ಮಾಡಲು ಅವಕಾಶ ಒದಗಿಸಿದ್ದು ಅದಕ್ಕೆ ಬದ್ಧಳಾಗಿ ನಾನು ಜನಸೇವೆ ಮಾಡುವೆ. ನಾನೆಂದೂ ಸಮಾಜ ಸೇವಕಿಯ ವೇಷಧಾರಿಣಿ (ನಟಿ) ಆಗಲು ಸಾಧ್ಯವೇ ಇಲ್ಲ ಎಂದು ಮೇಯರ್ ವಿೂನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ ನುಡಿದರು.Billawa Assn. Mayor-Corporator Sanman-1

ಬಹುಶಃ ಸ್ವಸಮುದಾಯದ ಸಂಸ್ಥೆಗಳು ನಾವು ಕಣಕ್ಕಿಳಿದು ಮತಯಾಚಿಸುತ್ತಿರುವಾಗ ಬೆಂಬಲಿಸುತ್ತಿದ್ದರೆ ಇನ್ನೂ ಹೆಚ್ಚು ಪೆÇ್ರೀತ್ಸಹ ಸಿಕ್ಕಿದಂತಾಗುತ್ತಿತ್ತು. ಗೆದ್ದು ಬಂದ ನಂತರದ ಸತ್ಕಾರ, ಶ್ಲಾಘನೆಕ್ಕಿಂತ ಸ್ಪರ್ದಾವಧಿಯ ಸಹಯೋಗ, ಉತ್ತೇಜನ ಹೆಚ್ಚು ಸಮರ್ಥನೀಯ ಆಗಬಲ್ಲದು. ಮಾತೃಭಾಷೆ ಮತ್ತು ಜಾತಿಯ ಅಭಿಮಾನ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದುದರಿಂದ ಜಾತಿಯ ಬೆಂಬಲ ಹೆಚ್ಚು ಪೆÇ್ರೀತ್ಸಾಹದಾಯಕ. ಇನ್ನಾದರೂ ನಮ್ಮ ಸಂಸ್ಥೆಗಳು ಸಮಾಜ ಬಂಧುಗಳನ್ನು ಬೆಂಬಲಿಸಬೇಕು. ನಾವು ನಮ್ಮ ಮಕ್ಕಳಿಗೂ ಹೆಚ್ಚಿನ ಶಿಕ್ಷಣ ಕೊಡಿಸಿ ಸಂಸ್ಕಾರವನ್ನು ತುಂಬಿ ಪೆÇ್ರೀತ್ಸಾಹಿಸುವ ಅಗತ್ಯವಿದೆ. ಇಂತಹ ಅರ್ಹತೆಗಳೇ ನನ್ನನ್ನು ಥಾಣೆಯ ಮಹಾಪೌರ ವಿರಾಜಮಾನಕ್ಕೆ ಸಾಧ್ಯವಾಯಿತು ಎಂದೂ ವಿೂನಾಕ್ಷಿ ಪೂಜಾರಿ ತಿಳಿಸಿದರು.



Billawa Assn. Mayor-Corporator Sanman-5

Billawa Assn. Mayor-Corporator Sanman-7

Billawa Assn. Mayor-Corporator Sanman-9

Billawa Assn. Mayor-Corporator Sanman-10

Billawa Assn. Mayor-Corporator Sanman-11

Billawa Assn. Mayor-Corporator Sanman-12
ನಾನು ಸುಮಾರು ಏಳು ವರ್ಷ ಬಿಲ್ಲವರ ಭವನ ಅಥವಾ ಬಿಲ್ಲವ ಸಮುದಾಯದ ಒಡನಾಟದಲ್ಲಿರಲಿಲ್ಲ. ಆದರೆ ನನ್ನ ಸ್ವಸಮಾಜದ ಪ್ರೇರಣೆ ನನ್ನ ಗೆಲುವಿಗೆ ಆಶಾದಾಯಕವಾಯಿತು. ನಾವು ವಾಸಿಸುವ ಭೂಮಿ ಮರಾಠಿ ಆಗಿದ್ದು ಇಲ್ಲಿನ ಮೂಲವಾಸಿಗಳಿಗೆ, ಮರಾಠಿಗರಿಗೆ ಮೊದಲ ಆದ್ಯತೆ ನೀಡಲೇಬೇಕು. ಬರೇ ಸನ್ಮಾನದಿಂದ ಏನೂ ಸಿದ್ಧಿಸಲಾಗದು. ಸಮಾಜ ಬಾಂಧವರ ಸಹಯೋಗವೂ ಅವಶ್ಯವಾಗಿರಬೇಕು. ಬಿಲ್ಲವರು ಯಾವುದೇ ಪಕ್ಷದಿಂದ ಕಣಕ್ಕಿಳಿಯಲಿ ನಾವು ಬೆಂಬಲಿಸಬೇಕು. ಪೆÇಲಿಟೀಶನ್ಸ್ ಅಂದರೆ ಆ್ಯಕ್ಟರ್ಸ್‍ಗಳಿದ್ದಂತೆ ಅದಕ್ಕೂ ಮಿಗಿಲಾಗಿ ಮತದಾರರು ಆ್ಯಕ್ಟರ್ಸ್ ಆಫ್ ಆ್ಯಕ್ಟರ್ ಆಗಿದ್ದಾರೆ. ಪೆÇಲಿಟೀಶನ್‍ಗಳ ಮುಂದೆ ಬಾಲಿವುಡ್ ಆ್ಯಕ್ಟರ್‍ಗಳು ಏನೂಅಲ್ಲ. ಸಮುದಾಯದ ವ್ಯಕ್ತಿಯೋರ್ವರು ಗೆದ್ದರೆ ಅದು ಆ ಸಮಾಜಕ್ಕೆನೇ ಒಳಿತಾಗುವುದು ಎಂದು ಜಗದೀಶ್ ಅವಿೂನ್ ಅಭಿಪ್ರಾಯ ಪಟ್ಟರು.

Billawa Assn. Mayor-Corporator Sanman-20

ಬಿಲ್ಲವ ಸಮಾಜ ಬಾಂಧವರ ರಾಜಕೀಯ ಗೆಲುವು ಸಮಗ್ರ ಬಿಲ್ಲವರ ಅಭಿಮಾನವಾಗಿದೆ. ನಮ್ಮಲ್ಲಿನ ಭವಿಷ್ಯತ್ತಿನ ರಾಜಕಾರಣಿಗಳನ್ನು ಪೆÇ್ರೀತ್ಸಹಿಸುವ ಉದ್ದೇಶ ಇದಾಗಿದೆ. ರಾಜಕೀಯ ಶಕ್ತಿ ರಾಷ್ಟ್ರದ ಪ್ರಬಲಶಕ್ತಿ ಆಗಿದ್ದು ಯುವಜನತೆ ಸಮಾಜ ಸೇವೆಯನ್ನು ಮೈಗೂಡಿ ರಾಜಕಾರಣದತ್ತ ಒಲವು ತೋರಬೇಕು ಎಂದು ಜಯ ಸುವರ್ಣರು ಕರೆಯಿತ್ತರು.

ರಾಜನೀತಿಜ್ಞರಿಂದಲೇ ರಾಷ್ಟ್ರ ಮುನ್ನಡೆಯಿತ್ತಿದ್ದು ರಾಜಕಾರಣವಿನಃ ಏನೂ ಸಾಧ್ಯವಾಗದ ಪ್ರಸಕ್ತ ಕಾಲದಲ್ಲಿ ರಾಜಕೀಯವಾಗಿ ಬೆಳೆಯುವ ಅಗತ್ಯ ಎಲ್ಲಾ ಸಮಾಜಕ್ಕಿದೆ. ಆದುದರಿಂದ ಬಿಲ್ಲವರು ರಾಜಕೀಯ ಚತುರರಾಗಬೇಕು. ಇದು ಅಭಿನಂದನಾ ಸಂಭ್ರಮ ಮಾತ್ರವಲ್ಲ ಬಿಲ್ಲವರನ್ನು ಉತ್ತೇಜನ ನೀಡುವ ಕಾರ್ಯಕ್ರಮ ಎಂದು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.Billawa Assn. Mayor-Corporator Sanman-22

ಕಾರ್ಯಕ್ರಮದಲ್ಲಿ ವೇದಿಕೆಯಾಲ್ಲಿ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಎನ್‍ಸಿಪಿ ಮುಂಬಯಿ ಪ್ರದೇಶ ಉಪಾಧ್ಯಕ್ಷ ಲಕ್ಷ್ಮಣ್ ಸಿ.ಪೂಜಾರಿ, ರಾಜಕೀಯ ಧುರೀಣ ಶ್ರಿನಿವಾಸ ಆರ್.ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ವಿದ್ಯಾ ರಾಜ.ಸಾಲ್ಯಾನ್, ಮಕ್ಕಳ ಮನಶಾಸ್ತ್ರಜ್ಞೆ ಡಾ| ಮೇಘ ಭಯಾನಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಯರುಗಳಾದ ವಿಲಾಸಿನಿ ಕೆ.ಸಾಲ್ಯಾನ್ ಮತ್ತು ಪ್ರಭಾ ಕೆ.ಬಂಗೇರಾ, ಜೊತೆ ಕಾರ್ಯದರ್ಶಿಗಳಾದ ಡಾ| ಗೀತಾಂಜಲಿ ಎಲ್.ಸಾಲ್ಯಾನ್, ಲಕ್ಷ್ಮೀ ಎಸ್.ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಡಾ| ಗೀತಾಂಜಲಿ ಎಲ್. ಸಾಲ್ಯಾನ್, ಬೇಬಿ ಎಸ್.ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದು ಅವರನ್ನು ಗೌರವಿಸಿ ಅಭಿನಂದಿಸಿದರು.Billawa Assn. Mayor-Corporator Sanman-24

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ ಇತರ ಪದಾಧಿಕಾರಿಗಳು, ವ್ಯವಸ್ಥಾಪಕ ಭಾಸ್ಕರ ಟಿ.ಪೂಜಾರಿ ಸ್ಥಳೀಯ, ಸಮನ್ವಯ ಸಮಿತಿಗಳ ಮುಖ್ಯಸ್ಥರು, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಸೇರಿದಂತೆ ಅಪಾರ ಸಂಖ್ಯೆಯ ಬಿಲ್ಲವರು ಹಾಜರಿದ್ದರು.

ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಸನ್ಮಾನಿತರನ್ನು ಪರಿಚಯಿಸಿ ಮಾನಪತ್ರ ವಾಚಿಸಿದರು. ಮಹಿಳಾ ವಿಭಾಗದ ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ವಿ.ಬಂಗೇರ ವಂದನಾರ್ಪಣೆ ಗೈದರು.

Billawar Ass. Meenakshi Sanmana-A2

By suddi9

Leave a Reply

Your email address will not be published. Required fields are marked *