ಬಂಟ್ವಾಳ :ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿ ಮಂಗಳೂರು, ಜಿಲ್ಲಾಡಳಿತ , ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಇವರು ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಮಜಿ ವೀರಕಂಭ ವನ್ನು ಜಿಲ್ಲಾ ಹಳದಿ ಶಾಲೆ ಎಂದು ಗುರುತಿಸಿ ಪರಿಸರ ಮಿತ್ರ ಪ್ರಶಸ್ತಿ ಪ್ರದಾನ ಮಾಡಿದರು.

01
ಮಜಿ ಶಾಲೆಯು ಪರಿಸರದ ಸ್ವಚ್ಛತೆ, ತರಕಾರಿ ತೋಟ, ಪಠ್ಯೇತರ ಚಟುವಟಿಕೆ ಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಶಾಲೆಯಾಗಿದೆ. ಶಾಲಾ ಇಕೋ ಕ್ಲಬ್ ತಂಡದಿಂದ ವಿದ್ಯಾರ್ಥಿಗಳು ತರಕಾರಿ ತೋಟ, ಔಷದೀಯ ಸಸ್ಯಗಳು , ಬಾಳೆಗಿಡ, ತೆಂಗು, ಹಲಸು, ಚಿಕ್ಕು, ನುಗ್ಗೆ, ಪಪ್ಪಾಯಿ, ದೀವಿಗೆ ಹಲಸು ಮುಂತಾದ ಹಲವಾರು ಸಸಿಗಳ ನಿರ್ವಹಣೆ ಮಾಡಲಾಗುತ್ತಿದೆ. ಪ್ರತೀ ಮಗುವಿಗೂ ಅವರದೇ ಹೆಸರಿನ ಅಡಿಕೆ ಸಸಿಗಳನ್ನು ಹೊಂದಿದ್ದು ಅದರ ನಿರ್ವಹಣೆ ಮಾಡುವುದು, ತುಂತುರು ನೀರಾವರಿ ಅಳವಡಿಸುವುದರ ಮೂಲಕ ನೀರಿನ ಉಳಿತಾಯದ ಅರಿವು ಮೂಡಿಸಲಾಗಿದೆ. ಭತ್ತದ ಕೃಷಿಯ ಮಹತ್ವ ವನ್ನು ತಿಳಿಯುವಲ್ಲಿ ವಿದ್ಯಾರ್ಥಿಗಳೇ ಭತ್ತದ ಕೃಷಿಯಲ್ಲಿ ತೊಡಗಿಸಿ ಕೊಂಡು ಬಿತ್ತನೆ ಯಿಂದ ಕಟಾವಿನ ವರೆಗಿನ ಪ್ರತೀ ಹಂತದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಮುಖ್ಯಶಿಕ್ಷಕ ನಾರಾಯಣ ಪೂಜಾರಿಯವರ ನೇತೃತ್ವದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ, ಶಾಲಾ ಶುಚಿತ್ವ , ಪರಿಸರ ಸಂರಕ್ಷಣೆ ತ್ಯಾಜ್ಯದ ನಿರ್ವಹಣೆ, ಶಾಲಾ ಸೌಂದರೀಕರಣ ಮುಂತಾದ ಹಲವಾರು ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ    ನೀಡಲಾಗಿದೆ.

By suddi9

Leave a Reply

Your email address will not be published. Required fields are marked *