ಮಾಮೇಶ್ವರ :ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪೂರ್ವ ತಯಾರಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಭೆಯಲ್ಲಿ ಬ್ರಹ್ಮ ಕಲಶೋತ್ಸವದ ಗೌರವ ಸಲಹೆಗಾರರು ಮತ್ತು ಮಾರ್ಗದರ್ಶಕರಾದ ಕೊಡಿಂಬಾಡಿ ಅಶೋಕ್ ಕುಮಾರ್ ರೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೋಂಕೋಡಿ ಪದ್ಮನಾಭ, ಅಧ್ಯಕ್ಷ ಸದಾಶಿವ ಆಚಾರ್ಯ ಕೈಂತಿಲ, ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಕಾರ್ಯದರ್ಶಿ ವಿಶ್ವನಾಥ ನಾಯ್ತೊಟ್ಟು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೃಷ್ಣಪ್ರಕಾಶ್ ಒಕ್ಕೆತ್ತೂರು, ಸಲಹಾ ಮಂಡಳಿಯ ಸದಸ್ಯ ಸುರೇಶ್ ಮುಕ್ಡೆ, ಅರ್ಚಕ ಶ್ರೀನಿವಾಸ ಅಗ್ರಿತ್ತಾಯ, ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಪುರಂದರ ಸ್ವಾಗತಿಸಿದರು, ಬ್ರಹ್ಮ ಕಲಶ ಸಮಿತಿ ಸಂಚಾಲಕ ವೀರಪ್ಪ ಗೌಡ ರಾಯರಬೆಟ್ಟು ವಂದಿಸಿದರು. ಕಾರ್ಯದರ್ಶಿ ದಿನೇಶ್ ಮಾಮೇಶ್ವರ ಕಾರ್ಯಕ್ರಮ ನಿರ್ವಹಿಸಿದರು, ಚಂದ್ರೇಶ್ ಸಹಕರಿಸಿದರು.

1 (2)

By suddi9

Leave a Reply

Your email address will not be published. Required fields are marked *