ಮದರ್ ವೆರೋನಿಕಾಯಾ ಸೋಫಿ ಲೀವ್ಸ್ 1862ರಲ್ಲಿ ಭಾರತದಸ್ತ್ರೀಯರ ಹೀನಾಯ ಪ್ರರಿಸ್ಥಿತಿಯನ್ನುಕಂಡುಜೋಸೆಫ್‍ಆಫ್‍ದಅಪರೇಷನ್ ಸಂಘಟನೆಯ ಸಹೋದರಿಯಾಗಿಕಾನ್ಸ್‍ಸ್ಟಾಂಟಿನೋಪಲ್‍ನಿಂದಇಲ್ಲಿಗೆ ಬಂದರು. ಇಲ್ಲಿನ ಸಮಾಜ, ಬಡತನ,ನಿತ್ಯಮಾದಕಸೇವನೆಯಿಂದಕೂಡಿದಜನತೆಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವೇ ಇರಲಿಲ್ಲ. ವಾಸ್ತವದ ಭಾರತದಚಿತ್ರಣದಿಂದ ಒತ್ತಟ್ಟಿಗೊಳಪಟ್ಟು ದೇವರ ಶಕ್ತಿಗೆ ಶರಣಾಗಿಆಕೆಯಆಂತರ್ಯದಲ್ಲಿಒಂದು ಪಿಸುಮಾತುಸದಾಧ್ವನಿಸುತ್ತಿತ್ತು. “ಕಾರ್ಮೆಲ್‍ಗೆ ನಿನ್ನನ್ನು ನಾನು ಅಪೇಕ್ಷಿಸುವೆ”. ಬಿಷಪ್ ಮಾರಿಎಫ್ರೆಮ್, ಮಂಗಳೂರಿನ  ಮತ ಬೋಧಕರ ಸಹಾಯದಿಂದಅವರುಒಂದು ಹೊಸ ಸಂಘಟನೆಯನ್ನು ಸ್ಥಾಪಿಸಿದರು. 1868ಜುಲೈ 16ರಲ್ಲಿ ಫ್ರಾನ್ಸಿನ ಬಯೋನ್‍ನಿಂದ‘ ಅಪೋಸ್ತಲಿಕ್ಕಾರ್ಮೆಲ್’ಎಂದುಇಲ್ಲಿಗೆ ಮೂರನೇ ಸಾಮಾನ್ಯಆಜ್ಞೆದೊರೆಯಿತು. ಅವರಕರುಣಾಭರಿತ ನೋಟಗಳ ಹಲವು ಕಾರ್ಯಗಳೊಂದಿಗೆ ಸಂಘಟನೆಯ ಪ್ರಮುಖಕರ್ತವ್ಯವಾಗಿ ಶಿಕ್ಷಣವನ್ನು ಇರಿಸಿಕೊಂಡರು.ಅಪೆÇೀಸ್ತಲ್‍ಕಾರ್ಮೆಲ್‍ಈವರೆಗೆ 8 ದೇಶಗಳಲ್ಲಿ 1700 ಭಗಿನಿಯರನ್ನು ಒಳಗೊಂಡ 188 ಕನ್ಯಾಮಠಗಳು ಮಾನವೀಯ ನೆಲೆಯಲ್ಲಿ ಶಿಕ್ಷಣ ಪ್ರಸಾರ ಮಾಡುವಲ್ಲಿತಮ್ಮನ್ನುತಾವು ಸಮರ್ಪಿಸಿಕೊಂಡಿವೆ. ಈ ಶಿಕ್ಷಣದಿಂದ ಕೋಟಿಕೋಟಿ ಕುಟುಂಬಗಳು ಸಂತೃಪ್ತವಾಗಿವೆ. ಕರ್ನಾಟಕದಲ್ಲಿನ 67 ಸಂಸ್ಥೆಗಳಲ್ಲಿ 28,439 ವಿದ್ಯಾರ್ಥಿಗಳು ವಿವಿಧ ಶಾಲೆ, ಕಾಲೇಜುಗಳಲ್ಲಿ ಅಭ್ಯಾಸಗೈಯುತ್ತಿದ್ದಾರೆ.

4. Veronica
ಈ ಸಂಘಟನೆಅದರ ಆದಿಯಿಂದ 150ವರ್ಷಗಳತ್ತ ಸಾಗುತ್ತಿರುವಸುಸಂದರ್ಭದಲ್ಲಿ ಸುಪೀರಿಯರ್‍ಜನರಲ್ ಭಗಿನಿ ಎಂ. ಸುಶೀಲ ಎ.ಸಿ. ಪ್ರಕೃತ ಸಂಘಟನೆತನ್ನ 150 ವರ್ಷದ ಸವಿನೆನಪಿಗಾಗಿ ನಿರ್ವಸಿತ ಬಡವರಿಗೆ ಗೃಹನಿರ್ಮಾಣದ ಸದ್ಯೋಜನೆಯನ್ನು ನಿರ್ಮಿಸುವಚಿಂತೆಯನ್ನುಕೈಗೊಂಡರು- ಪ್ರತಿ ಪ್ರಾಂತ್ಯವೂ 2018ರವಳಗೆ 25 ಗೃಹ ನಿರ್ಮಿಸುವುದು.ಕರ್ನಾಟಕ ಪ್ರಾಂತ್ಯವು ಈಗಾಗಲೇ ಬೆಂಗಳೂರು, ನಂಜನಗೂಡು, ಬೀದರ್, ಲಿಂಗಸುಗೂರು, ಗಂಗೊಳ್ಳಿ, ಕುಂದಾಪುರ, ಮೈಸೂರು, ಮೊಡಂಕಾಪು, ಮೂಡಬಿದ್ರೆ ಹಾಗೂ ಮಂಗಳೂರಿನಲ್ಲಿ 25 ಮನೆಗಳನ್ನು ನಿರ್ಮಿಸುವಯೋಜನೆಗೆ ಸ್ಥಳದ ಆಯ್ಕೆ ನಡೆದಿದೆ. ಎಲ್ಲಾ ಕನ್ಯಾಸ್ತ್ರೀ ಮಠಗಳೂ ಈ ಮಾನವತಾಯೋಜನೆಗೆಒಟ್ಟಾಗಿ ಸೇವಾ ಕಾರ್ಯದಲ್ಲಿತೊಡಗಿಕೊಂಡಿವೆ. ಕರ್ನಾಟಕ ಪ್ರಾಂತ್ಯವೂ ಈಗಾಗಲೇ 12 ಮನೆಗಳನ್ನು ದೀನದಲಿತರಿಗೆ ನೀಡಿದೆ. ಆ ಮನೆಗಳಲ್ಲಿ ವಾಸಿಸುವ ಜನರ ಮುಖದಲ್ಲಿ ನಗುವಿನ ಹೊಂಬೆಳಕು ಮೂಡಿದೆ. ಇನ್ನು 11 ಮನೆಗಳು ನಿರ್ಮಾಣದ ಹಂತದಲ್ಲಿದೆ. 2 ಮನೆಗಳ ನಿರ್ಮಾಣ ಸಧ್ಯದಲ್ಲಿ ಪ್ರಾರಂಭವಾಗುವುದು. ಡಿಸೆಂಬರ್ 2017ರ ಒಳಗೆ ಈ ಅರ್ಥಪೂರ್ಣಯೋಜನೆ ಸಂಪೂರ್ಣಗೊಳ್ಳಲಿದೆ. ಹಲವಾರು ಮಂದಿ ಈ ನಮ್ಮ ಪ್ರಾಮಾಣಿಕಕಾರ್ಯದಲ್ಲಿ ಕೈ ಜೋಡಿಸಿರುತ್ತಾರೆ. ಸೈಂಟ್‍ಆಗ್ನೆಸ್, ಸೈಂಟ್ ಮೇರಿಸ್ ಹಾಗೂ ಸೈಂಟ್‍ಆನ್ಸ್‍ಕನ್ಯಾ ಸ್ತ್ರೀ ಮಠಗಳು ಆಯಾ ವಠಾರದ ವಿವಿಧ ಸಂಸ್ಥೆಗಳು ವಸ್ತುಗಳ ಮಾರಾಟ, ‘ಬಲೆ ತೆಲಿಪಾಲೆ’ ಪ್ರಶಂಸಾತಂಡ -ಕಾಪುಕಲಾವಿದರಿಂದತೆಲಿಕೆದ ಬರ್ಸ ಎಂಬ ತುಳು ಹಾಸ್ಯ ಸಂಜೆ ಎಂಬ ವಿನೂತನ ಕಾರ್ಯಕ್ರಮಗಳನ್ನೂ ಈ ಹಿನ್ನೆಲೆಯಲ್ಲಿ ನಡೆಸಿದೆ.ಇದಕ್ಕಾಗಿಅದೆಷ್ಟೋಜನರು ಶ್ರಮಿಸಿರುತ್ತಾರೆ. ನಾವು ಈ ಎಲ್ಲಾ ಸತ್ಕಾರ್ಯಗಳಲ್ಲಿ ನೆರವಿತ್ತವರಿಗೆ, ಉದಾರ ದಾನಿಗಳಿಗೆ ಪ್ರಾಮಾಣಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ದೇವರುಇವರೆಲ್ಲರನ್ನುಅಪಾರವಾಗಿ ಆಶೀರ್ವದಿಸುತ್ತಾನೆ. ನಾವೂ ಇವರಿಗಾಗಿಧೈನ್ಯದಿಂದ ಪ್ರಾರ್ಥಿಸುತ್ತೇವೆ.
ಭಗಿನಿ ರೋಸ್‍ಆ್ಯಗ್ನೆಸ್ ಎ.ಸಿ.
ಪ್ರಾಂತೀಯ ಗೃಹ, ಸೈಂಟ್‍ಆನ್ಸ್‍ಕಾನ್ವೆಂಟ್, ಮಂಗಳೂರು.

By suddi9

Leave a Reply

Your email address will not be published. Required fields are marked *