ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸುವ ಸಹಕಾರ ಸಂಘಗಳ ಅಭಿವೃದ್ಧಿ -ಟಿ.ಜಿ.ರಾಜಾರಾಂ ಭಟ್
ಬಂಟ್ವಾಳ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಛೇರಿ ಮತ್ತು ಗೋದಾಮು ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ಪುಂಜಾಲಕಟ್ಟೆಯಲ್ಲಿರುವ ಸ್ವಂತ ನಿವೇಶನದಲ್ಲಿ ಗುರುವಾರ ಜರಗಿತು.
ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಸೇವಾ ಮನೋಭಾವದ ಅತ್ಯುತ್ತಮ ಸೇವೆಯಿಂದ ಗ್ರಾಹಕರಿಗೆ ಸಂತೃಪ್ತಿಯಾದಾಗ ಸಹಕಾರಿ ಸಂಘಗಳು ಅಭಿವೃದ್ಧಿಯಾಗುವುದು. ಇಂತಹ ಉತ್ತಮ ಕಾರ್ಯದಿಂದ ಪಿಲಾತಬೆಟ್ಟು ಸೇವಾ ಸಹಕಾರ ಸಂಘ ಮಾದರಿಯಾಗಿದೆ. ಇದರ ನೂತನ ಕಟ್ಟಡ ನಿರ್ಮಾಣ ಕಾರ್ಯ ದೈವಾನುಗ್ರಹದಿಂದ ಸಾಂಘವಾಗಿ ನೆರವೇರಲಿ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಂ ಭಟ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಘಗಳಲ್ಲಿ ಕೇವಲ ಬ್ಯಾಂಕಿಂಗ್ ವ್ಯವಹಾರ ನಡೆಸುವುದು ಮಾತ್ರವಲ್ಲದೆ ಪಡಿತರ ವ್ಯವಸ್ಥೆಯ ಮೂಲಕ ಸದಸ್ಯರೊಂದಿಗೆ ನಿರಂತರ ಸಂಪರ್ಕ ಹೊಂದಿ ಅವರ ಕಷ್ಟ-ನಷ್ಟಗಳನ್ನು ಅರಿಯಬೇಕು. ಪಿಗ್ಮಿ,ಸ್ವಸಹಾಯ ಸಂಘ,ಗೊಬ್ಬರ ವಿತರಣೆ ಜೊತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೆಳವಣಿಗೆ ಹೊಂದಬೇಕು ಎಂದ ಅವರು ಸಂಘದ ಸದಸ್ಯರಿಗೆ ಸರ್ವ ರೀತಿಯ ಸವಲತ್ತುಗಳನ್ನು ಒದಗಿಸುವ ದಕ್ಷತೆ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಅಭಿನಂದಾರ್ಹರು. ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕಾಗಿ ಅವರನ್ನು ಒಂದೆಡೆ ಸೇರಿಸಿ ಸ್ಪಂದಿಸಲು ನೂತನ ಕಟ್ಟಡದಲ್ಲಿ ಸಭಾಭವನ ನಿರ್ಮಾಣವಾಗಬೇಕು ಎಂದು ಹೇಳಿದರು.

1 (1)
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ರೈತರು ಸಾಲದ ಸಂಕಷ್ಟದಲ್ಲಿ ಸಿಲುಕಿದ್ದು ಪ್ರಸ್ತುತ ಬಜೆಟ್‍ನಲ್ಲಿ ಸರಕಾರ ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆಯಲ್ಲಿದ್ದರು. ರೈತರ ಸಾಲ ಮನ್ನಾ ಮಾಡುವಲ್ಲಿ ಸರಕಾರ ಸ್ಪಂದಿಸಬೇಕು ಎಂದ ಅವರು ಒಗ್ಗಟ್ಟಿನಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿ, ಸಹಕಾರ ಸಂಘದ ಮೂಲಕ ರೈತರ ಅಭಿವೃದ್ಧಿ ಆಗುವುದು ಎಂದು ಹೇಳಿದರು.
ವೇ|ಮೂ| ಉದಯ ಪಾಂಗಣ್ಣಾಯ ಅವರು ಧಾರ್ಮಿಕ ವಿ„ ವಿಧಾನಗಳನ್ನು ನೇರವೇರಿಸಿದರು.
ಪ್ರಗತಿಪರ ಕೃಷಿಕ ಉದಯ ಕುಮಾರ್ ಕಟ್ಟೆಮನೆ , ತಾ.ಪಂ.ಸದಸ್ಯ ರಮೇಶ್ ಕುಡ್ಮೇರು,ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷೆ ಸುಜಾತ,ಮಾಜಿ ಮುಖ್ಯ ಕಾರ್ಯನಿರ್ವಹಣಾ„ಕಾರಿ ಕೆ.ಬೂಬ,ಮಡಂತ್ಯಾರು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾ„ಕಾರಿ ಸು„ೀರ್, ಸಂಘದ ಅಧ್ಯಕ್ಷ ಸುಂದರ ನಾಯ್ಕ, ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,ನಿರ್ದೇಶಕರಾದ ಬೂಬ ಸಪಲ್ಯ, ರತ್ನವರ್ಮ ಹೆಗ್ಡೆ , ಸೀತಾರಾಮ ಶೆಟ್ಟಿ, ಉಮೇಶ್ ಪೂಜಾರಿ, ನಾರಾಯಣ ಪೂಜಾರಿ, ಚಂದ್ರಶೇಖರ ಹೆಗ್ಡೆ , ಹರ್ಷಿಣಿ, ವಾಯ್ಲೆಟ್ ಫೆರ್ನಾಂಡಿಸ್,ಬ್ಯಾಂಕ್ ಪ್ರತಿನಿ„ ಕೇಶವ ಕಿಣಿ,ಪ್ರಮುಖರಾದ ಸೀತಾರಾಮ ಹೆಗ್ಡೆ,ದೇವಪ್ಪ ಶೆಟ್ಟಿ,ಅಣ್ಣು ಪೂಜಾರಿ, ಸಿಪ್ರಿಯನ್ ರೊಡ್ರಿಗಸ್,ಪಿಲಾತಬೆಟ್ಟು ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಿ ಜೆ.ಬಂಗೇರ,ಸಂಘದ ಮಾಜಿ ನಿರ್ದೇಶಕ ನಾರಾಯಣ ಶೆಟ್ಟಿ,ಮಾಜಿ ಅಧ್ಯಕ್ಷ ಚಂದ್ರಶೇಖರ ಭಟ್ ವಿ.ಯು.ಎಸ್., ಪಿಲಾತಬೆಟ್ಟು ಮತ್ತು ನಯನಾಡು ಶಾಖೆಯ ಸಿಬಂದಿ ವರ್ಗ, ಅವರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ,ಹಾಲಿ ನಿರ್ದೇಶಕ ಲಕ್ಷ್ಮಿನಾರಾಯಣ ಉಡುಪ ಅವರು ಸ್ವಾಗತಿಸಿ ಪ್ರಸ್ತಾವಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ವಂದಿಸಿದರು. ಭರತ್‍ರಾಜ್ ಜೈನ್ ಅವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *