ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕರು ಯಥಾರೀತಿ ನಿತ್ಯ ಪೂಜೆಗಳನ್ನು ಮುಂದುವರಿಸುವಂತೆ ಆಡಳಿತ ಮಂಡಳಿಗೆ ಹೈಕೋರ್ಟ್ ಆದೇಶಿಸಿದೆ.

1603pktG1 (proof)
ಈ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದ ವ್ಯಾಸ ಉಡುಪ ಮತ್ತು ಬಾಲಕೃಷ್ಣ ಪಾಂಗಣ್ಣಾಯ ಅವರು ಇಲ್ಲಿ ಪೂಜೆ ನಡೆಸಲು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದ್ದು ಇದರ ವಿರುದ್ಧ ಅರ್ಚಕರು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ವಾದ-ವಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾದೀಶರು ಈ ಅರ್ಚಕರಿಗೆ ನಿತ್ಯಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಮಧ್ಯಂತರ ಆದೇಶ ನೀಡಿದೆ ಎಂದು ಅರ್ಚಕ ವ್ಯಾಸ ಉಡುಪ ಅವರು ತಿಳಿಸಿದ್ದಾರೆ. ವಾದಿಗಳ ಪರವಾಗಿ ನ್ಯಾಯಾವಾದಿ ಚಂದ್ರಕಾಂತ ಆರಿಗ ಅವರು ವಾದಿಸಿದ್ದರು.

By suddi9

Leave a Reply

Your email address will not be published. Required fields are marked *