ಮಕ್ಕಳಲ್ಲಿ ಕಲೆಯ ಅಭಿರುಚಿ ಬೆಳೆಯುವಂತೆ ಪ್ರೇರಣೆ ಅಗತ್ಯ
ಮೂಡುಬಿದಿರೆ : ಕಲೆ ಮನುಷ್ಯನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಸೇತುವಾಗುತ್ತದೆ. ಜೀವನದ ಪಾಠ ಕಲೆ ಕಲಿಸುತ್ತದೆ ಎಚಿದು ಮಂಗಳೂರು ಕರ್ನಾಟಕ ಬ್ಯಾಂಕ್ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶ್ಪಾಂಡೆ ಹೇಳಿದರು.
ಕಿನ್ನಿಗೋಳಿ ಯುಗಪುರುಷದ ಆಶ್ರಯದಲ್ಲಿ ಯಕ್ಷಲಹರಿಯ ಸಹಕಾರದೊಂದಿಗೆ ನಡೆದ ಬೆಳುವಾಯಿ ಶ್ರೀ ಯಕ್ಷದೇವ-ವಿಂಶತಿ ಕಲೋತ್ಸವ 8ನೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಸಾದನ ಕಲಾವಿದ ದಿ.ಕಿನ್ನಿಗೋಳಿ ದಾಮೋದರ ಶೆಟ್ಟಿಗಾರ್ ಸಂಸ್ಮರಣಾ ಬಾಷಣವನ್ನು ಭಾಸ್ಕರ ಪಡುಬಿದ್ರೆ ನೆರವೇರಿಸಿದರು. ಯಕ್ಷಗಾನ ಭಾಗವತ, ಶಿಕ್ಷಕ ಕಟೀಲು ರಮಾನಂದ ರಾವ್ ಅವರನ್ನು ಸಂಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ನೆರವೇರಿಸಿದರು. ಕಟೀಲು ದೇವಸ್ಥಾನದ ಆರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ಚಚನವಿತ್ತು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಯುಗಪುರುಷದ ಭುವನಾಭಿರಾಮ ಉಡುಪ, ನಿಡ್ಡೋಡಿ ಚಾವಡಿ ಮನೆ ಜಗನ್ನಾಥ್ ಶೆಟ್ಟಿ, ಯಕ್ಷಲಹರಿಯ ಅಧ್ಯಕ್ಷ ಸತೀಶ್ ರಾವ್, ಸಾಗರಿಕ ಧನಂಜಯ ಶೆಟ್ಟಿಗಾರ್, ಶ್ರೀ ಯಕ್ಷದೇವ ಮಿತ್ರಕಲಾಮಂಡಳಿಯ ಕಾರ್ಯಾಧ್ಯಕ್ಷ ದೇವಾನಚಿದ ಭಟ್ ಉಪಸ್ಥಿತರಿದ್ದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ವಂದಿಸಿದರು.
ಬಳಿಕ ಸಂಸ್ಥೆಯ ಮಕ್ಕಳಿಂದ ಯಕ್ಷಗಾನ ‘ಶಶಿಪ್ರಭಾ ಪರಿಣಯ’ ಜರಗಿತು.