ಮೂಡುಬಿದಿರೆ: ಸಂಗೀತವೆಂಬುದು ಕೇವಲ ಮನರಂಜನೆಗಾಗಿ ಅಲ್ಲ. ಅದರ ಸಾಹಿತ್ಯ ಜೀವನಕ್ಕೆ ಮಾರ್ಗದರ್ಶನ ನೀಡುವುದಾಗಿದೆ. ಆದರೆ ಈಗಿನ ಚಲನಚಿತ್ರಗಳ ಗೀತೆಗಳ ಸಾಹಿತ್ಯ ಆತಂಕ ಮೂಡಿಸುವಂತಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಆಶಾ ಕಿರಣ್ ಮೆಲೋಡಿಸ್‍ನ ವತಿಯಿಂದ ಮೂಡುಬಿದಿರೆ ಸಮಾಜ ಮಂದಿರದ ಬಯಲು ರಂಗ ಮಂದಿರದಲ್ಲಿ ಭಾನುವಾರ ಸಂಜೆ ಪ್ರಸ್ತುತ ಪಡಿಸಿದ ಮಹಮ್ಮದ್ ರಫಿಯವರು ಹಾಡಿರುವ ಹಳೆಯ ಹಿಂದಿ ಚಿತ್ರಗೀತೆಗಳ ಝಲಕ್ ಆಜ್ ಕಿ ಶಾಮ್ ರಫಿ ಕೆ. ನಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಳೆಯ ಚಲನಚಿತ್ರ ಗೀತೆಗಳು ಸೌಂದರ್ಯ ಪ್ರಜ್ಞೆಯನ್ನು ಬೆಳೆಸುವ, ಹೆಚ್ಚು ಹೆಚ್ಚು ಕೇಳುಗಳನ್ನು ಸೆಳೆಯುವ ಮೌಲ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

mbd_march21_5
ಶಾಸಕ ಮೊೈದಿನ್ ಬಾವ, ಉದ್ಯಮಿ ಕೆ. ಶ್ರೀಪತಿ ಭಟ್, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಆ್ಯಂಡ್ರೂ ಡಿಸೋಜ, ಬ್ಯಾರಿ ಕಲಾ ಸಂಘಟನೆಯ ಅಬ್ದುಲ್ ಅಜೀಜ್ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದ ಸಂಯೋಜಕ,ಗಾಯಕ ಪಿ.ಎಂ ಹಸನಬ್ಬ ಉಪಸ್ಥಿತರಿದ್ದರು. ಗಿಟಾರ್‍ವಾದಕ ರಾಜ್‍ಗೋಪಾಲ್, ಕಾರ್ಯಕ್ರಮ ನಿರ್ವಾಹಕ ಪ್ರೇಮ್ ಕುಮಾರ್, ಜ್ಯೂನಿಯರ್ ಮಹಮ್ಮದ್ ರಫಿ ಎಂದು ಖ್ಯಾತಿ ಪಡೆದಿರುವ ಇಮ್ರಾನ್ ಕಾಟಿಪಳ್ಳ ಅವರನ್ನು ಸನ್ಮಾನಿಸಲಾಯಿತು. ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *