ಬಂಟ್ವಾಳ: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ವಿಕಲಚೇತನ ಮಕ್ಕಳೊಂದಿಗೆ ನಿರ್ಮಲ ಹೃದಯದಲ್ಲೊಂದು ಒಂದು ದಿನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿ ಗಮನ ಸೆಳೆದಿದೆ.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಿಕಲಚೇತನ ಮಕ್ಕಳಿಗಾಗಿ ಫಿಸಿಯೋತೆರಫಿ ಚಿಕತ್ಸಾ ಕೇಂದ್ರವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಪ್ರತಿ ಸೋಮವಾರ ಹಾಗೂ ಬುಧವಾರ ತಜ್ಞ ವೈದ್ಯರು ಆಗಮಿಸಿ ವಿಕಲ ಚೇತನ ಮಕ್ಕಳಿಗೆ ಫಿಸಿಯೋ ತೆರಫಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಲಯನೆಸ್ ಕ್ಲಬ್ ಅಧ್ಯಕ್ಷೆ ದೇವಿಕಾ ದಾಮೋದರ್ ಹಾಗೂ ಲಯನ್ಸ್‍ನ ಅನಿಶ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ಈ ಮಕ್ಕಳೊಂದಿಗೆ ನಿರ್ಮಲ ಹೃದಯದಲ್ಲೊಂದು ದಿನ ಎನ್ನುವ ಕಾರ್ಯಕ್ರಮದ ಮೂಲಕ ಆಚರಿಸಿ ಆದರ್ಶ ಮೆರೆದಿದೆ.
ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ್ ಅಗ್ರಬೈಲು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೆಶ್ ಸಿ., ಲಯನ್ಸ್ ಜಿಲ್ಲಾ ಸಮಿತಿಯ ದೇವದಾಸ ಭಂಡಾರಿ, ಸುಖಲತಾ ಭಂಡಾರಿ, ಡಾ. ಗೋಪಾಲಾಚಾರ್, ದಾಮೋಧರ್ ಬಿಎಂ., ರಂಗಕರ್ಮಿ ಮಂಜು ವಿಟ್ಲ ಹಾಜರಿದ್ದು ಶುಭಕೋರಿದರು.
ಶ್ರೀನಿವಾಸ್ ಸ್ವಾಗತಿಸಿ, ದಾಮೋದರ್ ಬಿ.ಎಂ. ವಂದಿಸಿದರು.
