ಬಂಟ್ವಾಳ: ಕೂಲಿ ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಕಂಚಿಲ ಎಂಬಲ್ಲಿ ನಡೆದಿದೆ. ಕಾಣೆಯಾದ ವ್ಯಕ್ತಿ ಮಂಚಿ ಗ್ರಾಮದ ಕಂಚಿಲ ನಿವಾಸಿ ಸುಂದರ ನಾಯ್ಕ (46) ಎಂದು ಗುರುತಿಸಲಾಗಿದೆ. ಫೆ.27ರಂದು ಮನೆಯಿಂದ ಕೂಲಿ ಕೆಲಸಕ್ಕೆಂದು ಬೆಳಿಗ್ಗೆ ಹೊರಟವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಸುಂದರ ನಾಯ್ಕರ ಸಹೋದರ ಮೋನಪ್ಪ ನಾಯ್ಕ ದೂರು ನೀಡಿದ್ದಾರೆ. ಸುಂದರ ನಾಯ್ಕ ಅವರು ವಿಪರೀತ ಕುಡಿತದ ಚಟ ಹೊಂದಿದ್ದಾರೆಂದು ತಿಳಿಸಲಾಗಿದೆ. ಸುಂಅಋಊ 50.4 ಎತ್ತರ , ಗೋದಿ ಮೈಬಣ್ಣ, ಕೋಲು ಮುಖ ಸಾದಾರಣ ದೇಹ, ಕಪ್ಪು ಪ್ಯಾಂಟು, ಹಳದಿ ಬಣ್ಣದ ಟೀ ಶರ್ಟು ಮತ್ತು ತುಳು ಭಾಷೆ ಮಾತನಾಡುವ ಈತನ ಸುಳಿವು ಸಿಕ್ಕಲ್ಲಿ ಬಂಟ್ವಳ ಗ್ರಾಮಾಂತರ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

IMG_20170328_201133867

By suddi9

Leave a Reply

Your email address will not be published. Required fields are marked *