ಬಂಟ್ವಾಳ: ಅಂತರ್ಜಲ ಕಡಿಮೆಯಾಗುತ್ತಿರುವ ಈ ಸನ್ನಿವೇಶದಲ್ಲಿ ನಾವು ಇತಿಹಾಸವನ್ನು ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಹೇಳಿದರು. ಬಂಟ್ವಾಳ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯ ಕೇಂದ್ರದಲ್ಲಿ ನಡೆದ ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು, ಸಾಮಾಜಿಕ ಚರಿತ್ರೆಯ ಪುನರ್ ರಚನೆ ಎಂಬ ವಿಷಯದ ಕುರಿತು ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.4bhsamaropa

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಡೀ ಕೃಷಿಯೇ ನಾಶವಾಗುವ ಸ್ಥಿತಿ ಹಾಗೂ ಅಂತರ್ಜಲ ಸಹಿತ ನೀರಿನ ಸೆಲೆಗಳೇ ನಾಶವಾಗುವ ಪರಿಸ್ಥಿತಿ. ಮಳೆಯೂ ಬರುತ್ತಿಲ್ಲ. ಇದಕ್ಕೆ ಕಾರಣ ನಾವು ಇತಿಹಾಸವನ್ನು ಮರೆತಿರುವುದು ಎಂದು ನಂಜುಂಡೇಗೌಡ ಹೇಳಿದರು.ಉದ್ಯಮಿ ಸಿ.ಎ.ನಂದಗೋಪಾಲ ಶೆಣೈ , ನಿವೃತ್ತ ಪ್ರಾಂಶುಪಾಲ ಡಾ.ಪಿ.ಎನ್.ಎನ್.ಮೂರ್ತಿ, ಸೆಂಟರ್ ಫಾರ್ ಪಬ್ಲಿಕ್ ಹಿಸ್ಟರಿಯ ಸ್ಥಾಪಕ ನಿರ್ದೇಶಕಿ ಡಾ.ಇಂದಿರಾ ಚೌಧುರಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕೇಂದ್ರದ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ತುಳು ಬದುಕಿನ ಜೀವಂತಿಕೆಯನ್ನು ಉಳಿಸುವ ಅಗತ್ಯವನ್ನು ಒತ್ತಿ ಹೇಳಿದರು.

ನಿರೇನ್ ಜೈನ್, ಗೋಪಿ, ಶೋಭಾ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಸಮಾರಂಭದ ಹಿನ್ನೋಟ ನೀಡಿದರು. ಪ್ರೊ.ತುಕಾರಾಮ ಪೂಜಾರಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ವಂದಿಸಿದರು.

By suddi9

Leave a Reply

Your email address will not be published. Required fields are marked *