ಬಂಟ್ವಾಳ:ಬುಧವಾರ ಸಿಡಿಲಾಘತಕ್ಕೆ ಗಂಭೀರ ಗಾಯಗೊಂಡು ಮಂಗಳೂರಿನ ಅಸ್ಪತ್ರಯೊಂದಕ್ಕೆ ದಾಖಲಾಗಿದ್ದ ಎರಡರ ಹರೆಯದ ಲಿಖಿತ ಪ್ರಾಣಾಪಾಯದಿಂದ ಪಾರಾಗಿದ್ದು,ಅಸ್ಪತ್ರೆಯಿಂದ ಲಿಖಿತಾಳನ್ನು ಡಿಸ್ಚಾಜ್೯ಗೊಳಿಸಿ ಊರಿಗೆ ಕರೆದು ಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ. ಹಾಗೆಯೇ ಮ್ರತಪಟ್ಟ ಮಗುವಿನ ತಾಯಿಕಣಕಮ್ಮ,ಜಯಮ್ಮಮತ್ತು ಶಶಿಕಲಾರ ಮ್ರತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಗುರುವಾರ ಬೆಳಿಗ್ಗೆ ಕುಟುಂಬಿಕರು ಕೊಂಡುಹೋಗಿದ್ದಾರೆ.ಸಿಡಿಲಾಘತಕ್ಕೆ ಬದುಕುಳಿದ ಲಿಖಿತಾ ಮಾತ್ರ ತನ್ನ ತಾಯಿಯ ಮಮತೆಯಿಂದ ಶಾಶ್ವತವಾಗಿ ವಂಚಿತಳಾಗಿದ್ದಾಳೆ.
ತುಮಕೂರು ಜಿಲ್ಲೆಯ ಶಿರಾತಾ.ನಡ್ಯಾಗೇರಹಳ್ಳಿಯ ನಿವಾಸಿಗಳಾದ ತಿಮ್ಮಯ್ಯ ಎಂಬವರ ಪತ್ನಿಕಣಕಮ್ಮ ರವರ ಮಗಳೇ ಲಿಖಿತಾ . ಬಂಟ್ವಾಳದಾದ್ಯಂತ ಬುಧವಾರ ಮಧ್ಯಾಹ್ನ ಪ್ರಖರವಾದ ಬಿಸಿಲು,ಮಳೆ,ಗುಡುಗಿನ ಮುನ್ಸೂಚನೆಯು ಇರಲಿಲ್ಲ.ಆಕಶವು ಶುಭ್ರವಾಗಿತ್ತು.ಇದ್ದಕ್ಕಿದ್ದಂತೆ ಸಂಜೆ ೪ಗಂಟೆಯ ಹೊತ್ತಿಗೆ ಹಠಾತ್ತನೇ ದೊಡ್ಡಸದ್ದಿನೊಂದಿಗೆ ಸಿಡಿಲು ಅಬ್ಬರಿಸಿತ್ತು.ಈಸಂದರ್ಭದಲ್ಲಿ ಜಕ್ರಿಬೆಟ್ಟು ಬಳಿ ನೇತ್ರಾವತಿ ನದಿನೀರಿನಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರಿಬ್ಬರು ಸಿಡಿಲಾಘಾತಕ್ಕೆ ಸ್ಥಳದಲ್ಲೇ ಮ್ರತಪಟ್ಟರೆ.ಬಂಡೆ ಮೇಲೆ ಕುಳಿತಿದ್ದ ಮಕ್ಕಳಿಬ್ಬರು ಗಂಭೀರ ಸ್ವರೂಪದ ಗಾಯಗೊಂಡಿದ್ದರು.ತಕ್ಷಣ ಸ್ಥಳಿಯರು ಧಾವಿಸಿ ಗಾಯಾಳು ಮಕ್ಕಳಿಬ್ಬರನ್ನು ಅಸ್ಪತ್ರೆಗೆ ಸಾಗಿಸಿದ್ದು,ಈಪೈಕಿ ಐದರ ಹರೆಯದ ಶಶಿಕಲಾ ದಾರಿ ಮಧ್ಯೆ ಸಾವನ್ನಪ್ಪಿದ್ದಳು, ಲಿಖಿತಾಳನ್ನು ಮಂಗಳೂರಿನ ಅಸ್ಪತ್ರೆಗೆ ಸೃರಿಸಲಾಗಿತ್ತು.ಸದ್ಯ ಈಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಡ್ಯಗೇರಹಳ್ಳಿಯ ಜಯಣ್ಣ ಎಂಬವರ ಪತ್ನಿ ಜಯಮ್ಮ,ತಿಮ್ಮಯ್ಯ ಎಂಬವರ ಪತ್ನಿ ಕಣಕಮ್ಮ ಈರಣ್ಣ ಎಂಬವರ ಪುತ್ರಿ ಶಸಿಕಲಾ ಮ್ತಪಟ್ಟವರಾಗಿದ್ದಾರೆ.ಜಕ್ರಿಬೆಟ್ಟು
ಇವರು ನದಿ ಕಿನಾರೆಯ ಬಳಿ ತಗಡಿ ಶೆಡ್ ನಿರ್ಮಿ ಸಿ ವಾಸ್ತವ್ಯ ಹೂಡಿದ್ದರು. ಬುಧವಾರ ಮಧ್ಯಾಹ್ನದ ಬಳಿಕ ಕಣಕಮ್ಮ,ಜಯಮ್ಮ ಇಬ್ಬರು ಮಕ್ಕಳೊಂದಿಗೆ ಬಟ್ಟೆ ಒಗೆಯಲೆಂದು ನದಿಗೆ ತೆರಳಿದ್ದರು.ನ್ನು ಬಂಡೆ ಮೇಲೆ ಕುಳ್ಳಿರಿಸಿ ಇವರಿಬ್ಬರು ನೀರಿನಲ್ಲಿ ನಿಂತು ಬಟ್ಟೆ ಒಗೆಯುತ್ತಿದ್ದರು.ಅಗ ಜವರಾಯ ಸಿಡಿಲರೂಪದಲ್ಲಿ ಇವರಿಗೆ ಬಡಿದಿದೆ.ಅಘಾತಕ್ಕೆ ಜಯಮ್ಮಹಾಗೂ ಕಣಕಮ್ಮ ದಾರುಣವಾಗಿ ಸ್ಥಳದಲ್ಲೆ ಮ್ರತಪಟ್ಟಿದ್ದಾರೆ.ಈಹಠಾತ್ ಘಟನೆಯಿಂದ ನದಿಕಿನಾರೆಯಲ್ಲಿ ನೆಲೆಸಿದ್ದ ಇಡೀ ಕುಟುಂಬ ತತ್ತರಿಸಿತ್ತು.ಅವರ ಅರಣ್ಯ ರೋದನ ಮುಗಿಲು ಮುಟ್ಟಿತ್ತು.ಈ ಹ್ರದಯವಿದ್ರಾವಕ ಘಟನೆ ಸ್ಥಳದಲ್ಲಿ ನೆರೆದಿದ್ದ ಜನಸ್ತೋಮದ ಕಂಬನಿಗೂ ಸಾಕ್ಷಿಯಾಯಿತು.