ಮೂಡುಬಿದಿರೆ: ಎಂಬಿಎ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಗಳನ್ನು ಹೊಂದಿರಬೇಕು. ಗುರಿಸಾಧನೆಗೆ ಸದಾ ಕಾರ್ಯನಿರತರಾಗಿರಬೇಕು. ವೈಫಲ್ಯವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ನಾವು ನಮ್ಮ ಗುರಿಗಳನ್ನು ಬದಲಾಯಿಸದೆ ಗುರಿಸಾಧನೆಗೆ ಬಳಸುವ ಮಾರ್ಗವನ್ನು ಬದಲಾಯಿಸಿ ಜಯಗಳಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಜ್ಞಾನವೇ ಶಕ್ತಿ. ವಿಶಿಷ್ಟ ಜ್ಞಾನದ ಮೂಲಕ ನಾವು ಕಾಪೆರ್Çರೇಟ್ ಯುಗದಲ್ಲಿ ಸ್ಥಾನ ಗಳಿಸಿಕೊಳ್ಳಬಹುದು ಎಂದು ಸಿಎ ಎಸ್.ಎಸ್ ನಾಯಕ್ ತಿಳಿಸಿದರು.mbd_april18_1

ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಕಾರ್ಪರೇಟ್ ಸಾಮಾಜಿಕ ಜವಾಬ್ದಾರಿ” ಸಂಘದ ವತಿಯಿಂದ ಆಯೋಜಿಸಲ್ಪಟ್ಟ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .ಸಾಂಘಿಕ ಯತ್ನದಿಂದ ಜಯ ಸಾಧ್ಯ. ಯಶಸ್ವಿ ಉದ್ಯಮಶೀಲತೆಯ ಮೂಲಮಂತ್ರವು ಸಾಂಘಿಕ ಪ್ರಯತ್ನ, ನಾಯಕತ್ವ , ಹಣಕಾಸು ವ್ಯವಸ್ಥೆ, ಉತ್ತಮ ಪರಿಕಲ್ಪನೆ ಮತ್ತು ದೂರದೃಷ್ಟಿತ್ವ ವಾಗಿದೆ ಎಂದು ಅವರು ತಿಳಿಸಿದರು. ಹೂಡಿಕೆಗೆ ಲಭ್ಯವಿರುವ ಅವಕಾಶಗಳು, ಲಘು ಉದ್ಯಮಗಳ ಸ್ಥಾಪನೆಗೆ ಇರುವ ಹೇರಳ ಅವಕಾಶಗಳ ಬಗ್ಗೆ ನಾಯಕ್ ಅವರು ಮಾಹಿತಿಯಿತ್ತರು .
ಡೀನ್ ಪ್ರೊ . ಪಿ. ರಾಮಕೃಷ್ಣ ಚಡಗ ಪ್ರಸ್ತಾವನೆಗೈದರು. ಸಂಯೋಜಕ ಡಾ. ನಾಗೇಂದ್ರ , ಗುರುದತ್ ಸೋಮಯಾಜಿ ಉಪಸ್ಥಿತರಿದ್ದರು. ಅನ್ವಿತಾ ನಿರೂಪಿಸಿ, ನಿತೇಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *