ಬಂಟ್ವಾಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಹುಡುಗಿಯೋರ್ವಳು ಸೋಮವಾರ ಮುಂಜಾನೆಯಿಂದ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಹುಡುಗಿ ಕಡೇಶಿವಾಲಯ ನಿವಾಸಿ ಶಿವರಾಮ ಕುಲಾಲ್ ಅವರ ಮಗಳು ಮಮತಾ (20). ಇವಳು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದು , ಸುಮಾರು 6 ತಿಂಗಳ ಹಿಂದೆ ಅವಳಿಗೆ ಮಾನಸಿಕ ಕಾಯಿಲೆಯ ಹಿನ್ನಲೆಯಿಂದ ಶಿಕ್ಷಣ ನಿಲ್ಲಿಸಿದ್ದಳು. ಬಳಿಕ ಚಿಕಿತ್ಸೆ ಪಡೆದು ಹುಷಾರಾಗಿದ್ದಳು.
ಇತ್ತೀಚೆಗೆ ಆಕೆಗೆ ಮತ್ತೆ ಮಾನಸಿಕ ಕಾಯಿಲೆ ಮರುಕಳಿಸಿದ್ದು ಮನೆಯಲ್ಲಿಯೇ ಇದ್ದಳು. ನಿನ್ನೆ ರಾತ್ರಿ ಎಂದಿನಂತಯೇ ಊಟ ಮಾಡಿ ಮಲಗಿದ್ದವಳು ಮುಂಜಾನೆ ಸುಮಾರು 5 ಗಂಟೆಗೆ ಎದ್ದು ನೋಡುವಾಗ ಕಾಣೆಯಾಗಿದ್ದಳು. ಗೋಧಿ ಮೈ ಬಣ್ಣ, ಉದ್ದ ಮುಖ, ಸಾದರಣ ಮೈಕಟ್ಟು, ಕಪ್ಪು ಬಣ್ಣ ಲೆಗ್ಗಿನ್ಸ್ , ಹಳದಿ ಬಣ್ಣದ ಹೂಗಳ ಡಿಸೈನ್ ಇರುವ ಕಂದು ಬಣ್ಣದ ಟಾಫ್ ಬಟ್ಟೆ ಧರಿಸಿದ್ದಳು ಇವಳ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ದೂರವಾಣಿ ಸಂಖ್ಯೆ 08255235000.