ಬಂಟ್ವಾಳ, : ಮೀನು ಸಾಗಾಟದ ಲಾರಿಯೊಂದ ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದಾರುಣ ಘಟನೆ ಕಲ್ಲಡ್ಕದಲ್ಲಿ ನಸುಕಿನ ಜಾವ 2:30ರ ಸುಮಾರಿಗೆ ನಡೆದಿದೆ. ಪೆರಾಜೆ ಗ್ರಾಮದ ಪಾಲ್ಯಾ ನಿವಾಸಿ ಈಶ್ವರ ನಾಯ್ಕ ಎಂಬವರ ಪುತ್ರ ಹರೀಶ್ ನಾಯ್ಕ(30), ಈಶ್ವರ ನಾಯ್ಕರ ಅಳಿಯ ಪುತ್ತೂರಿನ ಸ್ವರ್ಗ ನಿವಾಸಿ ನಾರಾಯಣ(38) ಹಾಗೂ ಈಶ್ವರ ನಾಯ್ಕರ ಇನ್ನೋರ್ವ ಮಗನ ಮಗ ವಿಶ್ವಾಸ್(12) ಮೃತಪಟ್ಟವರು.

IMG-20170511-WA0003 (1) IMG-20170511-WA0004

ಮೃತರಾದ ಮೂವರು ಕಾರ್ಕಳದ ಕಬಕಾರು ಈಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಪಾಲ್ಗೊಂಡು ಬೈಕ್‍ನಲ್ಲಿ ವಾಪಸ್ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಾಣಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಮೀನು ಸಾಗಾಟದ ಲಾರಿ ಬೈಕ್‍ಗೆ ಮುಖಾಮುಖಿ ಢಿಕ್ಕಿ ಹೊಡೆದಿದ್ದು ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಬೈಕ್ ಚಲಾಯಿಸುತ್ತಿದ್ದ ಹರೀಶ್ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಗಾಯಗೊಂಡಿದ್ದ ನಾರಾಯಣ ಮತ್ತು ವಿಶ್ವಾಸ್ ಆಸ್ಪತ್ರೆಗೆ ಸಾಗಿಸಿದ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *