ಬಂಟ್ವಾಳ; 2016-17 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಉತ್ತಮ ಸಾಧನೆ ಮಾಡಿದ್ದು ತಾಲೂಕಿನ ಎಸ್ವಿಎಸ್ ಆಂಗ್ಲಮಾಧ್ಯಮ ವಿದ್ಯಾಗಿರಿ ಶಾಲೆಯ ಪಲ್ಲವಿ ಡಿ.ಶೆಟ್ಟಿ ಹಾಗೂ ಮಂಚಿ ಕುಕ್ಕಾಜೆ ಯ ಪ್ರಗತಿ ಆಂಗ್ಲಮಾಧ್ಯಮ ಶಾಲೆಯ ಶ್ರೇಯಾ 622 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಚತುರ್ಥ ಸ್ಥಾನಿಯಾಗಿದ್ದು, ತಾಲೂಕಿನಲ್ಲಿಯೇ ಪ್ರಥಮ ಸ್ಥಾನಿ ಎನ್ನಿಸಿಕೊಂಡಿದ್ದಾರೆ.
621 ಅಂಕ ಗಳಿಸಿರುವ ಎಸ್ವಿಎಸ್ ವಿದ್ಯಾಗಿರಿಯ ವಿದ್ಯಾರ್ಥಿನಿ ಮೈನಾ ಅಂಜುಮ್ ಹಾಗೂ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀಲಕ್ಷ್ಮೀ 621 ಅಂಕಗಳಿಸಿ ರಾಜ್ಯದಲ್ಲಿ ಪಂಚಮ ಸ್ಥಾನ ಹಾಗೂ ತಾಲೂಕಿನಲ್ಲಿ ದ್ವಿತೀಯ ಸ್ಥಾನಿ ಎನ್ನಿಸಿಕೊಂಡಿದ್ದಾರೆ.

8 ಖಾಸಗಿ ಶಾಲೆಗಳಿಗೆ ಶೇ.100 ಫಲಿತಾಂಶ
ಲಭ್ಯ ಮಾಹಿತಿಯಂತೆ ತಾಲೂಕಿನ ಎಸ್ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲೆ, ಅಗ್ರಾರ್ ಹೋಲಿ ಝೇವಿಯರ್ ಆಂಗ್ಲಮಾಧ್ಯಮ ಶಾಲೆ, ಕೆಳಗಿನ ಪೇಟೆ ತೌಹೀದ್ ಆಂಗ್ಲಮಾಧ್ಯಮ ಶಾಲೆ, ವಿಟ್ಲ ಜೇಸಿಸ್ ಆಂಗ್ಲಮಾಧ್ಯಮ ಶಾಲೆ, ವಿಟ್ಲದ ಸೈಂಟ್ ರೀಟಾ ಆಂಗ್ಲಮಾಧ್ಯಮ ಶಾಲೆ, ದಾರುಲ್ ಇರ್ಷಾದ್ ಬಾಲಕರ ಪೌಢಶಾಲೆ, ಪಾಣೆಮಂಗಳೂರು ಎಸ್ಎಲ್ಎನ್ಪಿ ಪ್ರೌಢಶಾಲೆ ಹಾಗೈ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲಮಾಧ್ಯಮ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.