ಬಂಟ್ವಾಳ: ಎಪ್ರಿಲ್ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ ಶೇಕಡ 77.35 ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 5471 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 4232 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2639 ಹುಡುಗರ ಪೈಕಿ 1886 ಮಂದಿ ಹಾಗೂ 2832 ಹುಡುಗಿಯರ ಪೈಕಿ 2346 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಾಲೂಕಿನ ಸರಕಾರಿ ಶಾಲೆಗಳಿಂದ 2256 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1584 ಮಂದಿ ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ 1399 ವಿದ್ಯಾರ್ಥಿಗಳು ಹಾಜರಾಗಿದ್ದು 1293 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಅನುದಾನಿತ ಶಾಲೆಗಳಲ್ಲಿ 1816 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1355 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣಾಧಿಕಾರಿಯವರ ಪ್ರಕಟನೆ ತಿಳಿಸಿದೆ.
ಈ ಬಾರಿ ತಾಲೂಕಿನ ವಗ್ಗ ಮೋರಾರ್ಜಿ ದೇಸಾಯಿ ವಸತಿ ಶಾಲೆ ಶೇಕಡ 100 ಫಲಿತಾಂಶ ದಾಖಲಿಸಿ ಸಾಧನೆ ಮಾಡಿದೆ. ಉಳಿದಂತೆ ಎಲ್ಲಾ ಅನುದಾನಿತ ಹಾಗೂ ಸರಕಾರಿ ಪ್ರೌಢ ಶಾಲೆಗಳು ಶೇಕಡ 100 ಫಲಿತಾಂಶ ದಾಖಲಿಸುವಲ್ಲಿ ವಿಫಲವಾಗಿದೆ. ಒಟ್ಟು 11 ಅನುದಾನ ರಹಿತ ಶಾಲೆಗಳು 100 ಶೇಕಡ ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಅವುಗಳೆಂದರೆ ಎಸ್ವಿಎಸ್ ದೇವಳ ಆಂ.ಮಾ. ಶಾಲೆ, ಲೊರೆಟ್ಟೊ ಆಂ.ಮಾ.ಪ್ರೌ.ಶಾಲೆ, ಹೋಲಿ ಸೇವಿಯಾರ್ ಆಂ.ಮಾ.ಪ್ರೌ.ಶಾಲೆ ಅಗ್ರಾರ್, ತೌಹೀದ್ ಆಂ.ಮಾ.ಶಾಲೆ ಬಂಟ್ವಾಳ ಕೆಳಗಿನ ಪೇಟೆ, ವಿಟ್ಲ ಜೇಸಿಸ್ ಆಂ.ಮಾ.ಪ್ರೌ.ಶಾಲೆ ವಿಟ್ಲ, ಸೈಂಟ್ ರೀಟಾಸ್ ಆಂ.ಮಾ.ಶಾಲೆ ವಿಟ್ಲ, ದಾರುಲ್ ಇರ್ಶಾದ್ ಬಾಲಕರ ಪ್ರೌ.ಶಾಲೆ ಮಿತ್ತೂರು, ಎಸ್ಎಲ್ಎನ್ಪಿ ವಿದ್ಯಾಲಯ ಪಾಣೆಮಂಗಳೂರು, ಸಂತ ಜೋನ್ ಆಂ.ಮಾ.ಪ್ರೌ.ಶಾಲೆ ಅಲ್ಲಿಪಾದೆ, ಸಂತ ಜೋನ್ ಪ್ರೌ.ಶಾಲೆ ಅಲ್ಲಿಪಾದೆ, ಇನ್ಫೆಂಟ್ ಜೀಸಸ್ ಮೊಡಂಕಾಪು.
ಟಾಪರ್ಸ್:
ತಾಲೂಕಿನಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳ ವಿವರ. ಮಂಚಿ ಪ್ರಗತಿ ಆಂ.ಮಾ.ಶಾಲೆಯ ಶ್ರೇಯಾ ಹಾಗೂ ಬಂಟ್ವಾಳ ಎಸ್ವಿಎಸ್ ಆಂ.ಮಾ.ಶಾಲೆ ವಿದ್ಯಾಗಿರಿಯ ಪಲ್ಲವಿ ಡಿ. ಶೆಟ್ಟಿ ಅವರು ತಲಾ 622 ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಾಣಿ ಬಾಲ ವಿಕಾಸ ಆಂ.ಮಾ.ಶಾಲೆಯ ಶ್ರೀ ಲಕ್ಷಿ ಕೆ. ಮತ್ತು ಬಂಟ್ವಾಳ ಎಸ್ವಿಎಸ್ ಆಂ.ಮಾ.ಶಾಲೆ ವಿದ್ಯಾಗಿರಿಯ ಮೈನಾ ಅಂಜುಮ್ ಕೆ.ಕೆ. ಅವರು ತಲಾ 621 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಳಿಕೆ ಸತ್ಯ ಸಾಯಿ ಪ್ರೌಢ ಶಾಲೆಯ ಇಂದುಲೇಖ 620 ಇದೇ ಶಾಲೆಯ ಸಿಂಧೂರ ಎಂ.ಆರ್. ಹಾಗೂ ಕರಿಂಗಾನ ಅಮ್ಟೂರು ದೇವಮಾತಾ ಆಂ.ಮಾ.ಶಾಲೆಯ ಅನಘ ಭಟ್ ಅವರು ತಲಾ 617 ಅಂಕ ಗಳಿಸಿದರೆ ಬಂಟ್ವಾಳ ಎಸ್ವಿಎಸ್ ಆಂ.ಮಾ.ಶಾಲೆ ವಿದ್ಯಾಗಿರಿಯ ಐಶ್ವರ್ಯ ಕೆ.ಜೆ. ಮತ್ತು ಕೊಡಂಕಾಪು ಕಾರ್ಮೆಲ್ ಪ್ರೌ.ಶಾಲೆಯ ಪ್ರಮೀತಾ ತಲಾ 616 ಅಂಕ ಗಳಿಸಿದರೆ, ಬಂಟ್ವಾಳ ಎಸ್ವಿಎಸ್ ದೇವಳ ಆಂ.ಮಾ.ಶಾಲೆಯ ಅಶ್ವಿನಿ ಬಾಳಿಗ 615 ಅಂಕಗಳಿಸಿದ್ದಾರೆ. ಈ ವಿದ್ಯಾರ್ಥಿಗಳು ತಾಲೂಕಿಗೆ ಟಾಪರ್ ಆಗಿದ್ದಾರೆ.