ಬಂಟ್ವಾಳ: ತಾಲೂಕು ನಲಿಕೆಯವರ ಯುವ ವೇದಿಕೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಯುವ ಸಮಾವೇಶವು ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ರಾಜೇಶ್ ರೈ ಉಳಿಪಾಡಿಗುತ್ತು ಮಾತಾಡಿ `ನಮ್ಮ ನಾಡು ನುಡಿಗೆ ಮತ್ತು ತುಳುನಾಡಿನ ಸಂಸ್ಕೃತಿಗೆ, ತುಳುನಾಡಿನ ದೈವಾರಾಧನೆಗೆ ನಲಿಕೆ ಸಮಾಜ ಬಾಂಧವರ ಕೊಡುಗೆ ಅನನ್ಯ, ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಸ್ತುವಾರಿ ಸಚಿವ ರಮಾನಾಥ ರೈ ನಲಿಕೆಯವರ ಆಚಾರ ವಿಚಾರ, ಮೂಲ ನಂಬಿಕೆಗಳು, ಶಿಸ್ತು ಬದ್ಧ ಜೀವನ ಇತರ ಸಮಾಜಕ್ಕೆ ಆದರ್ಶವಾಗಲಿ ಎಂದರು.1

ಸಭಾಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಸುರುಳಿಮೂಲೆ ವಹಿಸಿದ್ದರು. ಲೋಕಯ್ಯ ಸೇರಾ, ಮೋನಪ್ಪ ಸಾಲೆತ್ತೂರು, ದ ಕ ಜಿಲ್ಲಾ ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ ಕಡಂಬು ಇವರು ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿ ಜೆ ಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ, ತುಂಬೆ ನೆಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಪದ್ಮನಾಭ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕೃಷಿಕ ಏಮಾಜೆ ವಾಸು ನಲಿಕೆ, ದೈವ ನರ್ತಕ ಬಾಬು ನಲಿಕೆ ನಂದಬೆಟ್ಟು ಕನ್ಯಾನ ಇವರನ್ನು ಗೌರವಿಸಲಾಯಿತು. ವಿದ್ಯಾಲಕ್ಷ್ಮಿ, ನಯನ, ಪ್ರಮೀಳ, ನೇತ್ರ ಪ್ರಾರ್ಥಿಸಿದರು. ಪ್ರವೀಣ ಜಯ ಸ್ವಾಗತಿಸಿದರು. ಯುವ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆ ಕುದ್ರೆಬೆಟ್ಟು ಪ್ರಸ್ತಾವಿಸಿದರು. ನಾಗಪ್ಪ ಪನೋಲಿಬೈಲು ವಂದಿಸಿದರು. ಅಭಿಷೇಕ್ ಕನ್ಯಾನ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *