ವಿಟ್ಲ: ಪಾನಮತ್ತರಾಗಿ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದ ಚಾಲಕ ಬಲ ಬದಿಗೆ ಸೂಚನೆ ನೀಡಿ ತಿರುವುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿಹೊಡೆದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಸಮೀಪ ಶನಿವಾರ ನಡೆದಿದೆ.![IMG_3268[1]](http://www.suddi9.com/wp-content/uploads/2017/06/IMG_32681-650x487.jpg)
ವಿಟ್ಲ ಗೋಡಂಬಿ ಪ್ಯಾಕ್ಟರಿಯಲ್ಲಿ ಚಾಲಕ ವೃತ್ತಿ ನಡೆಸುತ್ತಿರುವ ವಿಟ್ಲ ಕಸಬ ಗ್ರಾಮದ ಕಬ್ಬಿನಹಿತ್ಲು ವಿಜಯ (52) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ವಿಟ್ಲ ಕಡೆಯಿಂದ ಫ್ಯಾಕ್ಟರಿಗೆ ಕರ್ತವ್ಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ಸಮಯ ಹಿಂಭಾಗದಿಂದ ಆಗಮಿಸಿದ ಕೇರಳ ಮೂಲದ ಕಾರು ಡಿಕ್ಕಿಯಾಗಿದೆ.![IMG_3266[1]](http://www.suddi9.com/wp-content/uploads/2017/06/IMG_32661-650x487.jpg)
ಬೈಕ್ ಸವಾರ ಸೂಚನೆ ನೀಡಿಕೊಂಡು ಬಲಕ್ಕೆ ತಿರುವಿದ್ದು, ಇನ್ನೇನು ಒಳ ರಸ್ತೆ ತಲುಪಿತು ಎನ್ನುವಷ್ಟರಲ್ಲಿ ಹಿಂದಿನಿಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಹಿತ ಸವಾರ ಎಡ ಬದಿಗೆ ಎಸೆಯಲ್ಪಟ್ಟಿದ್ದಾರೆ. ಹೆಲ್ಮೆಟ್ ಧರಿಸಿದ್ದರಿಂದ ಬೈಕ್ ಸವಾರರ ಜೀವಕ್ಕೆ ಅಪಾಯವಾಗಿಲ್ಲ. ಸಂಪೂರ್ಣ ಘಟನೆ ಪಕ್ಕದ ಅಂಗಡಿಯೊಂಡರ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲೀಕರಣವಾಗಿದೆ.
ಘಟನಾ ಸ್ಥಳಕ್ಕೆ ಉದ್ಯಮಿ ಸುಬ್ರಾಯ ಪೈ ಬೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಕಾರು ಸಹಿತ ಚಾಲಕ ಕೇರಳದ ಕಾಸರಗೋಡು ಮೂಲದ ರಾಜು (32) ಅವರು ಸಹಿತ ಪಾನಮತ್ತ ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
*ಗಾಯಾಳುವಿನ ನೆರವಿಗೆ ಬಂದಿಲ್ಲ!
ವಿಜಯ ಅವರ ಕೈ ಕಾಲಿಗೆ ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದರೂ, ಅವರನ್ನು ರಸ್ತೆಯಿಂದ ಎಬ್ಬಿಸಿ ಆಸ್ಪತ್ರೆಗೆ ಸಾಗಿಸಲು ಕಾರಿನಲ್ಲಿದ್ದವರು ಮುಂದಾಗಿರಲಿಲ್ಲ. ಪೆÇಲೀಸರು ಆಗಮಿಸುವವರೆಗೆ ಕಾರಿನಲ್ಲಿ ಕುಳಿತು ಕಾಲ ಕಳೆದರು. ಸ್ಥಳೀಯ ನಿವಾಸಿಗಳು ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.