ಬಂಟ್ವಾಳ: ಅಂಗನವಾಡಿ ಕೇಂದ್ರಕ್ಕೆ ಮೊಟ್ಟೆ ಬೇಯಿಸಲು ಹಣಕಾಸು ವ್ಯವಸ್ಥೆ ಒದಗಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ತಾ.ಅಂಗನವಾಡಿ ಕಾರ್ಯಕರ್ತೆಯರ,ಸಹಾಯಕಿಯರ ಸಂಘ ತಾಲೂಕು ಪಂಚಾಯತ್ ಅಧ್ಯಕ್ಷರ ಸಹಿತ ಶಿಶು ಅಭಿವ್ರದ್ದಿ ಯೋಜನಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.ಸಂಘದ ಅಧ್ಯಕ್ಷೆ ರೇಣುಕಾ ನೇತ್ರತ್ವದ ನಿಯೋಗ ಸಿಡಿಪಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಅಂಗನವಾಡಿ ಕೇಂದ್ರದಲ್ಲಿ ವಾರಕ್ಕೆರಡುದಿನ ಮೊಟ್ಟೆ ಬೇಯಿಸಲು ಇಲಾಖೆಯಿಂದ ಸೂಚನೆ ಬಂದಿದ್ದು,ಆದರೆ ಹಣಕಾಸು ವ್ಯವಸ್ಥೆ ಒದಗಿಸಿರುವುದಿಲ್ಲ ಹಾಗೆಯೇ ದಾಖಲಾತಿ ಪುಸ್ತಕ ಇತರ ಪರಿಕರಗಳನ್ನು ಇಲಾಖಾ ವತಿಯಿಂದಲೇ ಕೇಂದ್ರಕ್ಕೆ ಒದಗಿಸಬೇಕೇಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಹಣಕಾಸು ಕೊಡುವವರೆಗೆ ಕೇಂದ್ರದಲ್ಲಿ ಮೊಟ್ಟೆ ಬೇಯಿಸಲು ಒತ್ತಡ ಹಾಕಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದು,ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ.ನಿಯೋಗದಲ್ಲಿ ಪದಾಧಿಕಾರಿಗಳಾದ ಉಷಾ ಎ.ಎಮ್.,ಪಿ.ಎಸ್.ಶ್ರೀರ್ವಾರ್,ಸುಲೋಚ