ಕಾರ್ಕಳ: ನಿಟ್ಟೆಯ ಎನ್.ಎಂ.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜೀ ವಿಭಾಗವು ಹೊನ್ನೆ, ಸೀಮರುಬ, ಹಿಪ್ಪೆ ಮುಂತಾದ ಜೈವಿಕ ಇಂಧನಕ್ಕೆ ಸಹಕಾರಿಯಾಗುವ ತಳಿಗಳನ್ನು ನೆಡುವ ಮೂಲಕ ಜೂನ್ 13 ರಂದು ವಿಶ್ವ ಪರಿಸರ ದಿನವನ್ನು ಆಚರಿಸಿತು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಹೊನ್ನೆ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಯೋಟೆಕ್ನಾಲಜಿ ವಿಭಾಗವು ನಡೆಸುತ್ತಿರುವ ಪರಿಸರಸಂರಕ್ಷಣಾ ಕೆಲಸವನ್ನು ಶ್ಲಾಘಿಸಿ ಬಯೋಟೆಕ್ನಾಲಜಿ ವಿಭಾಗದ ಪರಿಸರ ಪ್ರೇಮದ ಬಗೆಗೆ ಹೆಮ್ಮೆಯಿದೆ ಎಂದು ಸಂತಸದಿಂದ ನುಡಿದರು.
ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್, ರೆಜಿಸ್ಟ್ರಾರ್ ಪ್ರೊ.ಯೋಗೀಶ್ ಹೆಗ್ಡೆ, ಅರವಿಂದ ಹೆಗ್ಡೆ, ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ಸುಬ್ರಹ್ಮಣ್ಯ ಭಟ್, ಸಿವಿಲ್ ವಿಭಾಗ ಮುಖ್ಯಸ್ಥ ಡಾ.ಉದಯಕುಮಾರ್ ಜಿ, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ಸಿ.ವಾಮನ್ ರಾವ್ ಸೇರಿದಂತೆ ಭೋದಕವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ಸಿ.ವಾಮನ್ ರಾವ್ ಅವರ ಮಾರ್ಗದರ್ಶನದಲ್ಲಿ ನಿಟ್ಟೆ ಕಾಲೇಜು ಪರಿಸರದಲ್ಲಿ ಸುಮಾರು 80 ಗಿಡಗಳನ್ನು ನೆಡಲಾಯಿತು.
